ವಾಹನ ಗ್ರಾಹಕರಲ್ಲಿ ಸಂಚಲನ ಮೂಡಿಸಿರುವ ಫೋರ್ಡ್ ಇಕೋಸ್ಪೋರ್ಟ್ ಕಾರು ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಫೋರ್ಡ್ ಸಂಸ್ಥೆ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ ಬುಕಿಂಗ್‌ಗೆ ಅವಕಾಶ ಕಲ್ಪಿಸಿತ್ತು. ಕೇವಲ 17 ದಿನಗಳಲ್ಲಿ 30 ಸಾವಿರ ಗ್ರಾಹಕರು ಇಕೋಸ್ಪೋರ್ಟ್ ಖರೀದಿಗೆ ಮುಂದೆಬಂದಿದ್ದಾರೆ. ಇದರ ಪರಿಣಾಮವಾಗಿ ಫೋರ್ಡ್ ಸಂಸ್ಥೆ ಮಾರುಕಟ್ಟೆ ಶೇ.14ರಷ್ಟು ಅಭಿವೃದ್ಧಿ ಕಂಡಿದೆ.
ಬಹುಶಃ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಾರಿನ ದರವನ್ನು ಕೂಡ ಘೋಷಿಸದೇ ಬುಕಿಂಗ್ ತೆರೆದ ಏಕೈಕ ಕಾರು ಎಂಬ ಹೆಗ್ಗಳಿಕೆಗೆ ಇಕೋಸ್ಪೋರ್ಟ್‌ನದು. ಸಾಮಾನ್ಯವಾಗಿ ಕಾರಿನ ದರ ಘೋಷಣೆ ನಂತರ ಬುಕಿಂಗ್ ಆರಂಭವಾಗುತ್ತದೆ. ಆದರೆ ಇಕೋಸ್ಪೋರ್ಟ್ ಬಗ್ಗೆ ಗ್ರಾಹಕರಲ್ಲಿ ಅದೆಷ್ಟು ಆಸಕ್ತಿ ಉಂಟಾಗಿತ್ತೆಂದರೆ ದರ ಘೋಷಣೆ ಮೊದಲೇ ಖರೀದಿಗೆ ಮುಗಿಬಿದ್ದಿದ್ದರು.
ಕಡಿಮೆ ದರ, ಅತ್ಯಂತ ಹೆಚ್ಚು ಸೌಲಭ್ಯಗಳು, ಹೊಸ ಆಕರ್ಷಣೆಗಳು, ಅತ್ಯಾಕರ್ಷಕ ಮತ್ತು ಹೊಸತನದಿಂದ ಕೂಡಿದ ಶೈಲಿ ಗ್ರಾಹಕರ ಆಕರ್ಷಣೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ರೆನೋ ಡಸ್ಟರ್‌ಗೆ ಪ್ರಮುಖ ಪೈಪೋಟಿಯೊಂದು ಸೃಷ್ಟಿಯಾದಂತಾಗಿದೆ. ಇಲ್ಲದೇ ಇಕೋಸ್ಪೋರ್ಟ್ ದರದ ಆಸುಪಾಸಿನ ವಾಹನಗಳ ಮಾರಾಟದ ಮೇಲೆ ಇದು ಭಾರೀ ಪರಿಣಾಮ ಬೀರಲಿದೆ.