ಡೀಸೆಲ್ ಹಾದಿಗೆ ಹೋಂಡಾ
ಹೋಂಡಾ ಕಂಪನಿಯು ಡೀಸೆಲ್ ಹೊಂಡದಲ್ಲಿ ಬೀಳಲು ಹೊಸ ತಯಾರಿ ನಡೆಸಿದೆ! ಸಂಸ್ಥೆಯ ಪ್ರತಿಷ್ಠಿತ ಹೋಂಡಾ ಸಿಟಿ ಕಾರನ್ನು ಈಗ ಡೀಸೆಲ್ ಎಂಜಿನ್ನಲ್ಲಿ ಬಿಡಲಾಗುತ್ತಿದೆ. ನ.25ಕ್ಕೆ ಭಾರತದಲ್ಲಿ ಈ ಕಾರು ಅನಾವರಣಗೊಳ್ಳುತ್ತಿದ್ದು, ಜನವರಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆಯಿದೆ. ಹೋಂಡಾ ಅಮೇಝ್ ಕಾರನ್ನು ಡೀಸೆಲ್ ಎಂಜಿನ್ನಲ್ಲಿ ಬಿಟ್ಟಿರುವ ಪರಿಣಾಮದಿಂದ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಶೇ.30 ಏರಿಕೆ ಕಂಡಿದೆ. ಇದಲ್ಲದೇ ಡೀಸೆಲ್ ಕಾರುಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಹೋಂಡಾ ಸಂಸ್ಥೆಗೆ ಈ ಸಂಬಂಧ ಎಚ್ಚರವಾಗಲು ಸುಮಾರು ಅರ್ಧ ದಶಕಗಳೇ ಬೇಕಾಯಿತು. 1.5 ಲೀ ಐ-ಡಿಟೆಕ್ ಎಂಜಿನ್ ಹಾಗೂ 110 ಪಿಎಸ್ ಸಾಮರ್ಥ್ಯವನ್ನು ಹೋಂಡಾ ಸಿಟಿಯಲ್ಲಿ ನೀಡಲಾಗಿದೆ. ಈ ಅರ್ಧ ದಶಕದಲ್ಲಿ ಮಾಡಿದ ತಪ್ಪನ್ನು ಇನ್ನಾದರೂ ತ್ವರಿತವಾಗಿ ಸುಧಾರಿಸಿಕೊಳ್ಳುವ ಉದ್ದೇಶದಿಂದ ಹೋಂಡಾ ಸಿಟಿಯನ್ನು ಡೀಸೆಲ್ ಮಾದರಿಯಲ್ಲಿ ಬಿಡಲಾಗುತ್ತಿದೆ. ಈಗಾಗಲೇ ಬುಕಿಂಗ್ ಪ್ರಾರಂಭವಾಗಿದೆ. ಪೆಟ್ರೋಲ್ ಮಾದರಿಗಿಂತ ರು. 80 ಸಾವಿರ ಹೆಚ್ಚಿರುವ ಸಾಧ್ಯತೆಯಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.