ವಾಹನ

ಮಲ್ಟಿಜೆಟ್ ಮೋಡಿ

ಇಡೀ ಫಿಯೆಟ್ ಕಂಪನಿ ನಡೆಯುತ್ತಿರುವುದೇ ಅದರ ವಿಶ್ವವಿಖ್ಯಾತ ಮಲ್ಟಿಜೆಟ್ ಎಂಜಿನ್ ಮೂಲಕ. ಈಗಿರುವ 1.3 ಲೀ. ಎಂಜಿನ್ ಇರುವ ಡೀಸೆಲ್ ಎಂಜಿನ್‌ಗಳಲ್ಲೇ ಅತ್ಯಂತ ಆಧುನಿಕ - ಸಕ್ಷಮ ಡೀಸೆಲ್ ಎಂಜಿನ್ ಎಂಬ ಹೆಗ್ಗಳಿಕೆ ಗಳಿಸಿದೆ. ಈಗ ಫಿಯೆಟ್ ಕಂಪನಿ ಭಾರತಕ್ಕೆ 1.6 ಲೀ. ಮಲ್ಟಿಜೆಟ್ ಎಂಜಿನ್ ಪರಿಚಯಿಸುತ್ತಿದೆ. ಮಾರುತಿಯ ಎಸ್‌ಎಕ್ಸ್4 ಹೊಸ ಮಾದರಿ ಕಾರಿನಲ್ಲಿ ಇದು ಕಾಣಿಸಿಕೊಳ್ಳಲಿದೆ.

ಫಿಯೆಟ್‌ನ 1.3 ಲೀ. ಎಂಜಿನ್ ಈಗಾಗಲೇ ಭಾರತದ ಜನಪ್ರಿಯ ಕಾರುಗಳಾದ ಮಾರುತಿ ರಿಟ್ಜ್, ಸ್ವಿಫ್ಟ್, ಡಿಸಾಯರ್, ಎರ್ಟಿಗಾ, ಟಾಟಾ ಮಾಂಝಾ, ವಿಸ್ಟಾ, ಫಿಯೆಟ್ ಪುಂಟೊ, ಲಿಯೆನಾ ಕಾರುಗಳಲ್ಲಿ ಇದೇ ಎಂಜಿನ್ ಕಾರ್ಯನಿರ್ವಹಿಸುತ್ತಿದೆ. ವಿಶ್ವದಾದ್ಯಂತ ಸಾಕಷ್ಟು ಪ್ರಸಿದ್ಧ ಕಂಪನಿಗಳು ಫಿಯೆಟ್ ಎಂಜಿನ್‌ಗಳನ್ನು ಕಾರುಗಳಲ್ಲಿ ಬಳಸುತ್ತಿವೆ. ಆದರೀಗ ಭಾರತದಲ್ಲಿ ಮಿನಿ ಎಸ್‌ಯುವಿ ಮತ್ತು ಎಸ್‌ಯುವಿಗಳತ್ತ ಗ್ರಾಹಕ ಒಲವು ತೋರುತ್ತಿದ್ದಾನೆ. ಅದಕ್ಕಾಗಿ ಹೆಚ್ಚು ಶಕ್ತಿಯ ಮತ್ತು ಉತ್ತಮ ಎಂಜಿನ್ ಅಗತ್ಯವಿದೆ. ಇದು ಲಭ್ಯವಿಲ್ಲದೆಯೇ ಮಾರುತಿ ಮುಂತಾದ ಕಂಪನಿಗಳು ಮಿನಿ ಎಸ್‌ಯುವಿ ಅಥವಾ ಎಸ್‌ಯುವಿ ನಿರ್ಮಿಸಲು ಕಷ್ಟವಾಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಫಿಯೆಟ್ ಬ್ರಾವೊ ಕಾರಿನಲ್ಲಿ 1.6 ಲೀ. ಎಂಜಿನ್ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲೂ ಈ ಎಂಜಿನ್ ತಪಾಸಣೆ ನಡೆಯುತ್ತಿದೆ. ಫಿಯೆಟ್ ಲಿಯೆನಾದಲ್ಲಿ ಮೊದಲು ಪರಿಚಯಿಸುವ ಇರಾದೆಯನ್ನೂ ಫಿಯೆಟ್ ಹೊಂದಿದೆ. ಈ ಎಂಜಿನ್ ವೇರಿಯೆಬಲ್ ಜಿಯೋವುಟ್ರಿಕ್ ಟರ್ಬೋ ತಂತ್ರಜ್ಞಾನ ಹೊಂದಿದ್ದು, ಇನ್ನಷ್ಟು ಮೃದುವಾಗಿ ಶಕ್ತಿ ಹೊರಸೂಸಲು ಸಮರ್ಥವಾಗಿದೆ.

ಇತ್ತ ಮಾರುತಿ ಕಂಪನಿ ಫಿಯೆಟ್ ಎಂಜಿನ್‌ಗಳ ಖರೀದಿಯನ್ನು ಕಡಿತಗೊಳಿಸಲು ಚಿಂತನೆ ನಡೆಸಿತ್ತು. ಮಾರುತಿ ಕಂಪನಿ ಈಗಾಗಲೇ ಫಿಯೆಟ್‌ನಿಂದ 1 ಲಕ್ಷ ಎಂಜಿನ್‌ಗಳನ್ನು ಖರೀದಿಸಿದೆ. ಇದನ್ನು ಶೇ.50ರಷ್ಟು ಕಡಿತಗೊಳಿಸುವ ಉದ್ದೇಶ ಮಾರುತಿಯದ್ದು. ಆದರೆ, ಮಾರುತಿ ಕಂಪನಿಯೇ ಅಭಿವೃದ್ಧಿಪಡಿಸುತ್ತಿರುವ ಡೀಸೆಲ್ ಎಂಜಿನ್ ಇನ್ನೂ ಸರಿಯಾಗಿ ನಿರ್ಮಾಣಗೊಂಡಿಲ್ಲ. ಅಲ್ಲದೇ ಮಾರುತಿ ಕಂಪನಿ ಎಸ್‌ಎಕ್ಸ್4 ಕ್ರಾಸ್‌ಓವರ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಿದೆ. ಅದಕ್ಕೆ ಫಿಯೆಟ್ ಮಲ್ಟಿಜೆಟ್ 1.6 ಲೀ.ನಷ್ಟು ಕ್ಷಮತೆ ಹೊಂದಿರುವ ಬೇರೆ ಎಂಜಿನ್ ಲಭ್ಯವಿಲ್ಲದ ಕಾರಣ, ಫಿಯೆಟ್ ಕಂಪನಿಯನ್ನೇ ಅಲಂಬಿಸಬೇಕಾದ ಅನಿವಾರ್ಯವೂ ಕಂಪನಿಗಿದೆ.

ಆದರೆ, ಎಸ್‌ಎಕ್ಸ್4 ಕ್ರಾಸ್ ಓವರ್ ಭಾರತಕ್ಕೆ ಯಾವಾಗ ಬರಲಿದೆ ಎಂಬ ಗಾಳಿಸುದ್ದಿಗಳಿವೆಯೇ ಹೊರತು ಕಂಪನಿ ಎಲ್ಲೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ನಡುವೆ ಮಾರುತಿ ಕಂಪನಿ 800 ಸಿಸಿ ಡೀಸೆಲ್ ಎಂಜಿನ್ ಒಂದನ್ನು ಸಿದ್ಧಪಡಿಸಿದ್ದು, ಸಣ್ಣ (ಬಹುಶಃ ಎಸ್ಟಾರ್) ಕಾರೊಂದನ್ನು ಡೀಸೆಲ್ ಎಂಜಿನ್‌ನಲ್ಲಿ ಪರಿಚಯಿಸುವ ತವಕದಲ್ಲಿದೆ ಎಂಬ ಸುದ್ದಿಯೂ ಇದೆ. ಆದರೆ, ಕಾರು ಗ್ರಾಹಕರಲ್ಲಿ ಬೆಳೆಯುತ್ತಿರುವ ಎಸ್‌ಯುವಿ ಮತ್ತು ಮಿನಿ ಎಸ್‌ಯುವಿ ಪ್ರೀತಿಯನ್ನು ಗಮನಿಸಿ ಆದಷ್ಟು ಬೇಗ ಎಸ್‌ಎಕ್ಸ್ 4 ಕ್ರಾಸ್‌ಓವರ್ ಅಥವಾ ಮಿನಿ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಅನಿವಾರ್ಯವೂ ಮಾರುತಿಗಿದೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!