ಇನ್ನೋವಾದಲ್ಲಿ ಇನ್ನೇನೋ ಬದಲಾವಣೆ!
ಈಗ ಫೇಸ್ಲಿಫ್ಟ್ ಜಮಾನಾ. ಬಹುತೇಕ ಕಾರುಗಳು ಹೊಸರೂಪ ಪಡೆದುಕೊಂಡು ಮಾರುಕಟ್ಟೆಗೆ ಬರುತ್ತಿವೆ. ಕೆಲವೇ ತಿಂಗಳ ಹಿಂದೆ ಕೊಂಚ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದ ಟೊಯೊಟಾ ಇನ್ನೋವಾ ಈಗ ಮತ್ತೆ ಅಂಥ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ.
ಈ ಬಾರಿಯ ಹೊಸ ಬೆಳವಣಿಗೆಯೆಂದರೆ ಝೆಡ್ ಎಂಬ ಹೊಸ ವೇರಿಯೆಂಟ್ ಬರಲಿದೆ. ಹಿಂದಿನ ಬಾರಿಯಂತೆ ಈ ಬಾರಿಯೂ ಎದುರುಗಡೆ ಗ್ರಿಲ್ ಮತ್ತು ಬಂಪರ್ ಬದಲಾವಣೆಗೆ ಗುರಿಯಾಗಿದೆ. ಎದುರಿನ ಸ್ಮೈಲಿ ಗ್ರಿಲ್ ಹೋಗಿ ಕ್ರೋಮ್ ಕೋಟೆಡ್ ಗ್ರಿಲ್ ಬಂದಿದೆ. ಗ್ರಿಲ್ ಗಾತ್ರ ಕೂಡ ದೊಡ್ಡದಾಗಿದೆ. ಬಂಪರ್ ಹೆಚ್ಚು ಬದಲಾವಣೆಗೆ ಒಳಗಾಗಿದೆ. ಇದರ ಪರಿಣಾಮವಾಗಿಯೇ ಹೊಸ ಫಾಗ್ ಲ್ಯಾಂಪ್ಗಳು ಬಂದಿವೆ.
ಈವರೆಗೆ ಜಿ, ಜಿಎಕ್ಸ್, ವಿಎಕ್ಸ್ ಮಾದರಿಯಲ್ಲಿ ಇನ್ನೋವಾ ಸಿಗುತ್ತಿದ್ದರೆ, ಈಗ ಝೆಡ್ ಮಾದರಿಯನ್ನು ಹೊಸದಾಗಿ ಪರಿಚಯಸಲಾಗುತ್ತಿದೆ. ಲೆದರ್ ಸೀಟುಗಳು, ವುಡನ್ ಟ್ರಿಮ್ ಇರುವ ಇಂಟೀರಿಯರ್ಸ್ ಇದರ ವಿಶೇಷ. ಹಿಂಭಾಗದ ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ದೊಡ್ಡ ಕ್ರೋಮ್ಪ್ಲೇಟ್ ಅಳವಡಿಸಿರುವುದು ಹಿಂಭಾಗದ ವಿನ್ಯಾಸಕ್ಕೆ ಹೊಸ ಮೆರುಗು ನೀಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.