ವಾಹನ

ಮಿನಿ ನಯಾಗರ

ಗೋಕಾಕ ಎರಡು ಕಾರಣಗಳಿಂದ ಪ್ರಸಿದ್ಧ. ಒಂದು ಇಲ್ಲಿನ ಸಿಹಿಯಾದ ಕರದಂಟು, ಇನ್ನೊಂದು ವಿಶ್ವಪ್ರಸಿದ್ಧ ಜಲಪಾತ. ಬೆಳಗಾವಿ ಜಿಲ್ಲೆಯಲ್ಲಿ...

ಗೋಕಾಕ ಎರಡು ಕಾರಣಗಳಿಂದ ಪ್ರಸಿದ್ಧ. ಒಂದು ಇಲ್ಲಿನ ಸಿಹಿಯಾದ ಕರದಂಟು, ಇನ್ನೊಂದು ವಿಶ್ವಪ್ರಸಿದ್ಧ ಜಲಪಾತ.
ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಘಟಪ್ರಭಾ ಮತ್ತು ಮಾರ್ಕಾಂಡೇಯ ನದಿಗಳ ಸಂಗಮವೇ ಈ ಗೋಕಾಕ ಜಲಪಾತ. ಮಳೆಗಾಲದಲ್ಲಿ ಕೆಂಪು ಮತ್ತು ಕಂದು ಮಿಶ್ರಿತ ನೀರಿನಿಂದ ಮೈತುಂಬಿ ಹರಿಯುವ ಈ ಜಲಪಾತಕ್ಕೆ ಮಿನಿ ನಯಾಗರ ಫಾಲ್ಸ್ ಎಂತಲೂ ಕರೆಯಲಾಗುತ್ತದೆ. ಒರಟಾದ ಕಲ್ಲು ಬಂಡೆಗಳ ಮಧ್ಯದಲ್ಲಿ ವಯ್ಯಾರ ಮಾಡುತ್ತ ಸಾಗಿಬರುವ ಜಲಧಾರೆಯನ್ನು ವಿಶಿಷ್ಟ ಅನುಭೂತಿ ನೀಡುತ್ತದೆ. ಎರಡೂ ಬದಿಗಳಲ್ಲಿ ಎತ್ತರವಾದ ಗುಡ್ಡಗಳು, ಅವುಗಳ ಮಧ್ಯದಿಂದ ಹರಿಯುವ ನದಿ. ಸುಮಾರು 400 ಅಡಿ ಎತ್ತರದಿಂದ ಕುದುರೆಯ ಮುಖದ ಆಕಾರದಲ್ಲಿ ಧುಮುಕುವ ಜಲಪಾತ. ರುದ್ರರಮಣೀಯ ದೃಶ್ಯ ಎನ್ನುವುದು ಕೇವಲ ಬಾಯಿಮಾತು ಆಗಬಹುದು.
ಜಲಪಾತದ ಸುತ್ತಮುತ್ತ ಇನ್ನಷ್ಟು ವಿಶೇಷಗಳಿವೆ. 1907ರಲ್ಲಿ ಕಟ್ಟಿಗೆ ಮತ್ತು ಕಬ್ಬಿಣದ ತಂತಿಗಳಿಂದ ನಿರ್ಮಿಸಲಾದ ತೂಗು ಸೇತುವೆ.  ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ತೂಗುಸೇತುವೆ ಗೋಕಾಕ ಫಾಲ್ಸ್‌ನ ಉತ್ತರ ಮತ್ತು ದಕ್ಷಿಣದ ಹಳ್ಳಿಗಳನ್ನು ಒಂದುಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 201 ಮೀಟರ್ ಉದ್ದದ ಸೇತುವೆಯ ಮೇಲೆ ಒಮ್ಮೆ 30 ಜನ ಮಾತ್ರ ಸಂಚರಿಸಬಹುದಾಗಿದೆ. ಮಳೆಗಾಲದಲ್ಲಿ ಘಟಪ್ರಭಾ ಉಕ್ಕಿ ಹರಿಯುವಾಗ ಸೇತುವೆಯ ಮೇಲೆ ಈ ದಡದಿಂದ ಆ ದಡಕ್ಕೆ  ಹೋಗುವುದೇ ಅದ್ಭುತ ಅನುಭವ. ಜೋರಾಗಿ ಬೀಸುವ ಗಾಳಿಯಿಂದ ಸೇತುವೆ ತೂಗಾಡುವ ಅನುಭವ ಇನ್ನೂ ಮೋಜಿನದಾಗಿರುತ್ತದೆ.   1887ರಲ್ಲಿ  ಸ್ಥಾಪನೆಯಾದ ಜಲವಿದ್ಯುತ್ ಉತ್ಪಾದನಾ ಕೇಂದ್ರ. ಇಲ್ಲಿ ಉತ್ಪಾದಿಸಲಾಗುವ ವಿದ್ಯುತ್ ಅನ್ನು ಜಲಪಾತದ ಸನಿಹದಲ್ಲಿಯೇ ಇರುವ ಗೋಕಾಕ ಫೋಬರ್ ಮಿಲ್‌ಗೆ ಪೂರೈಸಲಾಗುತ್ತದೆ. ಇನ್ನೂರು ವರ್ಷ ಇತಿಹಾಸ ಹೊಂದಿರುವ ಮಿಲ್ ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳ ಕಟ್ಟಡಗಳನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ.
ಜಲಪಾತದ ಪಕ್ಕದಲ್ಲಿಯೇ ಇದೆ 12ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದ ಮಹಾಲಿಂಗೇಶ್ವರ ದೇವಸ್ಥಾನ. ಎತ್ತರವಾದ ಕಲ್ಲಿನ ಮೇಲೆ ನದಿಯ ತಟದಲ್ಲಿಯೇ ನಿರ್ಮಿಸಲಾದ ಈ ಮಹಾಲಿಂಗೇಶ್ವರ ದೇವಾಲಯ ಉತ್ತರಕ್ಕೆ ಮುಖ ಮಾಡಿದೆ. ಎತ್ತರವಾದ ಗೋಪುರ, ದೊಡ್ಡ ಪ್ರಾಂಗಣ, ಗರ್ಭಗ್ರಹದಲ್ಲಿನ ಎತ್ತರದ ಶಿವನ ಲಿಂಗ, ಎದುರುಗಡೆ ನಂದಿಯ ವಿಗ್ರಹ, ದೇವಸ್ಥಾನದ ಸುತ್ತಲೂ ಕಲ್ಲಿನಿಂದ ಮಾಡಿದ ಕುಸುರಿ ಕೆಲಸ ಎಲ್ಲವೂ ಅದ್ಭುತ.

ಯಾವಾಗ ಬರಬಹುದು?
ಜೂನ್‌ನಿಂದ ಡಿಸೆಂಬರ್ ಈ ಭಾಗದಲ್ಲಿ ಅತ್ಯುತ್ತಮ ಹವಾಮಾನ. ಇದು ಗೋಕಾಕ ಜಲಪಾತ ವೀಕ್ಷಿಸಲು ತಕ್ಕ ಸಮಯವೂ ಹೌದು. ಬೆಂಗಳೂರಿನಿಂದ ಸುಮಾರು 665 ಕಿ.ಮೀ ದೂರದಲ್ಲಿದೆ ಗೋಕಾಕ ಪಟ್ಟಣ. ಅಲ್ಲಿಗೆ ರೈಲು ಮತ್ತು ಬಸ್ಸುಗಳ ಸಂಪರ್ಕ ಇದೆ. ಬೆಂಗಳೂರಿನಿಂದ ನಿತ್ಯ 8 ರೈಲುಗಳು ಗೋಕಾಕ್ ರೋಡ್ ಸ್ಟೇಶನ್‌ಗೆ ಆಗಮಿಸುತ್ತವೆ. ರೈಲ್ವೆ ಸ್ಟೇಷನ್‌ನಿಂದ ಮಿನಿ ಬಸ್ ಅಥವಾ ಆಟೋದಲ್ಲಿ  10 ನಿಮಿಷದಲ್ಲಿ ಜಲಪಾತ ತಲುಪಬಹುದು. ಗೋಕಾಕದಿಂದ 10 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ಸಾರಿಗೆ ಸೌಲಭ್ಯವಿದೆ.

- ಆಶಾ. ಎಸ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!