ವಾಹನ

ಟಾಟಾ ಮೋಟಾರ್ಸ್‌ನ ವಿನೂತನ ಶೋರೂಂ

ಟಾಟಾ ಮೋಟಾರ್ಸ್ ಬೆಂಗಳೂರಿನಲ್ಲಿ ಹೊಸ ವಿನ್ಯಾಸದ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ, ಐಷಾರಾಮಿಯಾದ, ಗ್ರಾಹಕರಿಗೆ ವಿರಾಮದಾಯಕ ಖರೀದಿಯ ಅನುಭವ ನೀಡುವಂಥ ಷೋ ರೂಂ ಆರಂಭಿಸಿದೆ. ಬಹಳ ಭಿನ್ನಸ್ವರೂಪದ್ದಾಗಿರುವ ಈ ವಿನೂತನ ಬಗೆಯ ಶೋ ರೂಂ ಗ್ರಾಹಕರಿಗೆ ಒಂದೇ ನೆಲೆಯಲ್ಲಿ ಮೂರು ಬಗೆಯ 'ಎಸ್‌' (ಸೇಲ್ಸ್, ಸರ್ವೀಸ್, ಸ್ಪೇರ್ಸ್) ಸೇವೆಗಳನ್ನು ಒದಗಿಸಲು ಸಜ್ಜಾಗಿದೆ.

ಈ ನೂತನ ಶೋ ರೂಂ ಅನ್ನು ಟಾಟಾ ಮೋಟಾರ್ಸ್ ಕಂಪನಿಯ ವಾಣಿಜ್ಯ ಬಳಕೆ, ಪ್ರಯಾಣಿಕ ವಾಹನಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಅಂಕುಶ್ ಅರೋರಾ ಉದ್ಘಾಟಿಸಿದರು.

'ಭಾರತದ ಗ್ರಾಹಕರ ಬೇಡಿಕೆಗಳು, ಅಗತ್ಯಗಳೂ ವಿಶೇಷ ಸ್ವರೂಪ ಪಡೆದುಕೊಳ್ಳುತ್ತಿವೆ. ನಮ್ಮ ಗ್ರಾಹಕರೂ ಈಗ ಜಾಗತಿಕ ಗುಣಮಟ್ಟದ, ಅತ್ಯಾಧುನಿಕವಾದ ಹಾಗೂ ಐಷಾರಾಮಿ ಸೇವೆಗಳನ್ನು ಬಯಸುತ್ತಿದ್ದಾರೆ. ಟಾಟಾ ಮೋಟಾರ್ಸ್ ಸಹ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿದ ಸೇವೆಗಳನ್ನು ಒದಗಿಸಲು ಮುಂದಾಗಿದೆ' ಎನ್ನುತ್ತಾರೆ ಅಂಕುಶ್.

ಟಾಟಾ ಮೋಟಾರ್ಸ್ ಕಂಪನಿ ಮಾರಾಟಕ್ಕೆ ಸಂಬಂಧಿಸಿದ ಗ್ರಾಹಕ ಅನುಭವಗಳಿಗೆ ಸಂಬಂಧಿಸಿದ ಜೆಡಿ ಪವರ್ ಸಮೀಕ್ಷೆಯಲ್ಲಿ 825 ಅಂಶಗಳ ಸೂಚ್ಯಂಕದೊಂದಿಗೆ ಈ ಬಾರಿ 7ನೇ ಸ್ಥಾನಕ್ಕೇರಿದೆ. 2012ರಲ್ಲಿ 12ನೇ ಸ್ಥಾನದಲ್ಲಿತ್ತು.

ನೂತನ ಶೋ ರೂಂ 4000 ಚದರಡಿಗಳಷ್ಟು ವಿಶಾಲವಾದ ಒಳಾಂಗಣ, 7000 ಚದರಡಿಗಳಷ್ಟು ಸುವಿಶಾಲವಾದ ಹೊರಾಂಗಣ ಪ್ರದೇಶ ಹೊಂದಿದೆ. ಈ ವಿಶಾಲತೆಯೇ ಶೋ ರೂಂಗೆ ಒಂದು ವಿಶಿಷ್ಟ ಅದ್ಧೂರಿತನವನ್ನೂ ತಂದುಕೊಟ್ಟಿದೆ. ವಿಭಿನ್ನ ಶೈಲಿಯ ಪೀಠೋಪಕರಣ ವ್ಯವಸ್ಥೆ, ವೈ-ಫೈ ಸಂಪರ್ಕ, ಕೆಫೆ ಸೇವೆ, ಅತ್ಯಾಧುನಿಕವಾದ ವಿಡಿಯೊ ಸೌಲಭ್ಯವನ್ನಳವಡಿಸಿದ ಸ್ಕ್ರೀನ್‌ಗಳಿವೆ. ಈ ಸ್ಕ್ರೀನ್‌ಗಳ ಮೂಲಕ ಗ್ರಾಹಕರು ತಮ್ಮ ಕನಸಿನ ಕಾರಿನ ಚಾಲನೆಯ ಅನುಭವವನ್ನೂ ಶೀಘ್ರದಲ್ಲೇ ಪಡೆದುಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!