ವಾಹನ

ಬರುತ್ತಿದ್ದಾರೆ ಬ್ಯಾಡ್ ಲವರ್ಸ್

ಸಾಹಿತ್ಯ ಬರೆದು, ಹಾಡಿ ಸಂಗೀತ ಸಂಯೋಜನೆ ನೀಡಿ 'ಬ್ಯಾಡ್ ಲವರ್ಸ್‌' ಧ್ವನಿ ಮುದ್ರಣದ ಮೂಲಕ ಪ್ರೇಮಿಗಳನ್ನು ತಲುಪಲು ಹೊರಟಿದ್ದಾರೆ ಚಂದ್ರು ಓಬಯ್ಯ.
ಪ್ರೇಮಿಗಳಿಗಾಗಿ ವಿಶೇಷ ಮುತುವರ್ಜಿ ವಹಿಸಿ ಒಬ್ಬರೇ ಇಡೀ ಅಲ್ಬಮ್ ರೂಪಿಸಿರುವುದು ವಿಶೇಷ. ಫೆಬ್ರವರಿ 14ರಂದು ಬಿಡುಗಡೆ. ಪ್ರೇಮಿಗಳು ಮುಗ್ಧರು. ಸಾಕಷ್ಟು ಒಳ್ಳೆಯವರು. ನಿಜವಾದ ಪ್ರೇಮಿಗಳು ಅವರ ಸಂಗಾತಿಯನ್ನು ಒಳ್ಳೆಯ ಹಾದಿಯಲ್ಲಿ ಬ್ಯಾಡ್ಲಿಯಾಗಿ ಪ್ರೀತಿಸುತ್ತಾರೆ. ಹಾಗಾಗಿ ಈ ಅಲ್ಬಾಮ್‌ಗೆ ಬ್ಯಾಡ್ ಲವರ್ಸ್ ಎಂದು ಹೆಸರಿಟ್ಟಿದ್ದೇನೆ ಎನ್ನುತ್ತಾರೆ ಚಂದ್ರು.
'ಜೀವನ ನೀನೆ... ಭಾವನ ನೀನೆ...' ಎಂದು ಮೊದಲ್ಗೊಳ್ಳುವ ಹಾಡು ಭಾರತ ಶಾಸ್ತ್ರೀಯ ಸಂಗೀತದಲ್ಲಿದೆ. ಇದು ಪ್ರೇಮಿಯನ್ನು ಕಲ್ಪಿಸಿ ವರ್ಣಿಸಿರುವ ಹಾಡಾಗಿದೆ. 'ಬಿಡು ಬಿಡು ಚಿಂತೆಯ ಮನವೆ ನಾನಿಲ್ಲವೆ...' ಎಂಬ ಎರಡನೇ ಹಾಡು ತೀರ್ವ ಭಾವನಾತ್ಮಕ ನೆಲಗಟ್ಟಿನಲ್ಲಿ ಮೂಡಿಬಂದಿದೆ. ಸಂಗಾತಿಗೆ ಧೈರ್ಯವಾಗಿರು ಎಂದು ಹೇಳುವ ಪ್ರೇಮಿಯ ಕಾಳಜಿ ಅಡಕವಾಗಿದೆ.
ರಾಕ್ ಸಂಗೀತವೂ ಈ ಅಲ್ಬಾಮ್‌ನಲ್ಲಿ ಮಿಳಿತವಾಗಿರುವುದು ವಿಶೇಷ. 'ಬ್ಯಾಂಗ್ ಬ್ಯಾಂಗ್ ಬೆಂಗಳೂರು...' ಎಂಬ ಹಾಡು ರಾಕ್ ಮ್ಯೂಸಿಕ್‌ನಲ್ಲಿ ಮೂಡಿಬಂದಿದೆ. ಪ್ರೇಮಿಗಳು ಬೆಂಗಳೂರಿನಲ್ಲಿ ಹೇಗೆ ಸಂಭ್ರಮಿಸುತ್ತಾರೆ ಎಂದ ತಳಹದಿಯಲ್ಲಿ ಗಾನವಾಗಿ ಝೇಂಕರಿಸಿದೆ.  
ಒಟ್ಟು ಒಂಬತ್ತು ಹಾಡುಗಳಿದ್ದು ಪ್ರತಿಯೊಂದು ವಿಭಿನ್ನವಾಗಿವೆ. ಎಲ್ಲಾ ರೀತಿಯ ಪ್ರೇಮಿಗಳ ನಿವೇದನೆ ಸಂಭ್ರಮಗಳ ಸಮ್ಮಿಳಿತವಾಗಿ ಅಲ್ಬಮ್ ರೂಪದಲ್ಲಿ ಹೊರಬಂದಿವೆ. ಪ್ರೇಮಿಗಳ ನೋವು, ಅಂತರಾಳದ ಭಾವನೆ, ತುಂಟತನಗಳನ್ನು ಚಂದ್ರು ಹಾಡಿನ ರೂಪದಲ್ಲಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಪರಾಕ್ ಸ್ಟುಡಿಯೋದಲ್ಲಿ ಹಾಡುಗಳು ಧ್ವನಿ ಮುದ್ರಿತಗೊಂಡಿವೆ. ಅರುಣ್ ಶ್ರೀನಿವಾಸ್ ಧ್ವನಿ ಮುದ್ರಣದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಕುರಿ ಕಾಯುವ ಹುಡುಗ
ಸಂಗೀತ ಕ್ಷೇತ್ರದ ಆಸಕ್ತಿಗೆ ಸ್ಫೂರ್ತಿ ತಮ್ಮ ತಂದೆ ಎನ್ನುತ್ತಾರೆ ಓಬಯ್ಯ. ಈ ಓಬಯ್ಯ ನಾಟಕ ಮತ್ತು ಸಂಗೀತ ಗುರುಗಳು. ಆದರೆ ಚಂದ್ರು ಎಂದೂ ತಂದೆಯ ಬಳಿಯಿಂದ ಸಂಗೀತ ಕಲಿತವರಲ್ಲ. ಚಂದ್ರು ಒಂಬತ್ತನೇ ತರಗತಿಯಲ್ಲಿರುವಾಗ ತಂದೆಯನ್ನು ಕಳೆದುಕೊಂಡರು. ಹತ್ತನೇ ತರಗತಿಗೆ ಶಾಲೆಯನ್ನೇ ಬಿಟ್ಟರು. ಕಲಿಕೆಯ ಮೇಲೆ ಆಸಕ್ತಿ ಕಳೆದುಕೊಂಡು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡರು.
ಜನಿಸಿದ್ದು ತುಮಕೂರು ಪಾವಗಡ ತಾಲುಕಿನ ಕೆಂಚಮ್ಮನಹಳ್ಳಿ.  ಶಾಲೆ ಬಿಟ್ಟು ಕುರಿ ಕಾಯುವ ಕಾಯಕದಲ್ಲಿದ್ದಾಗ ಸಂಗೀತದ ಕುರಿತಾದ ಆಸಕ್ತಿ ಚಿಗುರತೊಡಗಿದವು. ಕುರಿಗಳೊಂದಿಗೆ ಕಾಡಿಗೆ ಹೋದಾಗ ಹಾಡುವ ಗೀಳು ಪ್ರಾರಂಭವಾಯಿತು. ವರ್ಷ ಮುಗಿಯುತ್ತಿದ್ದಂತೆ ಕಲಿಕೆಯ ಮೇಲೆ ಆಸಕ್ತಿ ಹುಟ್ಟಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರು.
ನಂತರ ಬೆಂಗಳೂರಿಗೆ ಬಂದು ಡಿಎಡ್ ಶಿಕ್ಷಣ ಪಡೆದು ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಗೀತವನ್ನು ಜೊತೆಯಲ್ಲಿ ನಿರಂತರವಾಗಿ ಅಭ್ಯಸಿಸುವುದು ಹವ್ಯಾಸ. ಆರ್ಕೆಸ್ಟ್ರಾ, ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ತಮ್ಮ ಸಂಗೀತಾಸಕ್ತಿಯನ್ನು ಬೆಳೆಸತೊಡಗಿದರು. ಹಲವು ಸಿನಿಮಾಗಳಿಗೂ ಸಾಹಿತ್ಯ ಬರೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಸಂಗೀತ ಸಂಯೋಜನೆ ಮಾಡುವುದನ್ನು ಮೈಗೂಡಿಸಿಕೊಂಡರು. 'ಬ್ಯಾಡ್ ಲವರ್ಸ್‌' ಮೂಲಕ ತಮ್ಮಸಂಗೀತಾಭಿರುಚಿ, ಪ್ರತಿಭೆಗಳನ್ನು ಒಂದೆಡೆ ಸೇರಿಸಿ ಸಂಗೀತ ಲೋಕಕ್ಕೆ ಪರಿಚಯಿಸಿಕೊಂಡಿದ್ದಾರೆ.

= ಮಂಜುನಾಥ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!