ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಹನ

ಚೀನೀ ಸೈಕಲ್ಲು

Mainashree
Updated On : 7 Jul 2014, 10:51 am

ವಿದೇಶಿ ಕಾರುಗಳ ಹಾವಳಿ ಜೋರಾಗಿದೆ. ಪರವಾಗಿಲ್ಲ, ಬಡವರಿಗೆ ನಮ್ಮದೇ ಸೈಕಲ್ಲುಗಳಾದರೂ ಇವೆಯಲ್ಲ ಎಂಬ ಸಮಾಧಾನವಾದರೂ ಇತ್ತು. ಈಗ ಅದೂ ಮೂರಾಬಟ್ಟೆಯಾಗುವ ಸಮಯ.
ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೇಡ್ ಬೈಸಿಕಲ್‌ಗಳ ಹಾವಳಿ ಜೋರಾಗಿದೆ. ಇತ್ತೀಚೆಗೆ ಇದನ್ನು ಮನಗಂಡು ಭಾರತೀಯ ಕಸ್ಟಮ್ಸ್‌ನವರು ಚೀನಾ ಮೇಡ್ ಸೈಕಲ್‌ಗಳ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರು. ಆದರೂ ಈ ಸೈಕಲ್ಲುಗಳು ಬಾಂಗ್ಲಾ ಮೂಲಕವೋ, ಶ್ರೀಲಂಕಾ ಮೂಲಕವೋ ಕದ್ದು ಬರುವುದು ತಪ್ಪಿಲ್ಲ. ಇದರಿಂದ ದೇಶೀ ಸೈಕಲ್ ಮೇಕರ್‌ಗಳ ಹೊಟ್ಟೆಯ ಮೇಲೆ ಕೂಡ ಏಟು ಬೀಳುತ್ತಿದೆ.
ಚೀನಾದ ಸೈಕಲ್‌ಗಳ ಮೇಲೆ ಹಾಕಿರುವ ತೆರಿಗೆ 30 ಶೇ. ಬಾಂಗ್ಲಾ ಹಾಗೂ ಶ್ರೀಲಂಕಾದ ಮೇಲಿರುವುದು 6 ಶೇ. ಹೀಗಾಗಿಯೇ ಇವು ಕಳ್ಳಮಾರ್ಗಗಳು. ಇದಕ್ಕೆ ಕಾರಣ ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಒಪ್ಪಂದ ಎಂಬುದು ವರ್ತಕರ ದೂರು. ಇತ್ತೀಚೆಗೆ ಈ ಹೆಸರಿನಲ್ಲಿ ಮಲೇಷಿಯಾ, ಥಾಯ್ಲೆಂಡ್‌ಗಳಿಂದ ಕೂಡ ಸೈಕಲ್‌ಗಳು ಬರುತ್ತಿವೆಯಂತೆ. ಇವೆಲ್ಲ ಇಲ್ಲಿಯೇ ಮಾಡಲಾಗುವ ಸೈಕಲ್ಲುಗಳಿಂದ 20 ಶೇ. ಅಗ್ಗವಾಗಿದೆಯಂತೆ .ಅದಕ್ಕಾಗಿಯೇ ಗ್ರಾಹಕರು ಅದರತ್ತ ಮುಗಿಬೀಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments