ಟಾಟಾ ಸಂಸ್ಥೆಯ ನೂತನ ಸೆಡಾನ್ ಜೆಸ್ಟ್ ಪರಿಚಯಕ್ಕೆ ಹೊಸ ದಾರಿ ಹುಡುಕಲಾಗಿದೆ. ಜೆಸ್ಟ್ ಸ್ಟುಡಿಯೋ ಎಂಬ ಕಾನ್ಸೆಪ್ಟ್ ಮೂಲಕ ಬೆಂಗಳೂರಿನಾದ್ಯಂತ ಜು.26ರಿಂದ ಸೆ.7ರವರೆಗೆ ಟಾಟಾ ಸಂಸ್ಥೆ ಸುತ್ತಲಿದೆ. ವೈಟ್‌ಫೀಲ್ಡ್‌ನ ಫಿಯಾನಿಕ್ಸ್ ಮಾಲ್, ಒರಿಯಾನ್ ಮಾಲ್, ಕೋರಮಂಗಲ ಫೋರಮ್ ಮಾಲ್, ಮಲ್ಲೇಶ್ವರ ಮಂತ್ರಿ ಮಾಲ್‌ನಲ್ಲಿ ಎರಡು ಬಾರಿ ಈ ಸ್ಟುಡಿಯೋ ಸಿಗಲಿದೆ. ಗೇಮಿಂಗ್, ಕಾರಿನ ಕುರಿತ ಸಂಪೂರ್ಣ ಡಿಜಿಟಲ್ ಮಾಹಿತಿ ಹಾಗೂ ಸಂವಹನ ಮಾಡಲು ಅವಕಾಶ ಈ ಸ್ಟುಡಿಯೋದಲ್ಲಿ ದೊರೆಯುತ್ತದೆ. ಸ್ಟುಡಿಯೋ ಮೂಲಕ ಸಾರ್ವಜನಿಕರಿಗೆ ಜೆಸ್ಟ್ ಕಾರನ್ನು ಪರಿಚಯಿಸುವುದು ಟಾಟಾ ಸಂಸ್ಥೆಯ ಲೆಕ್ಕಾಚಾರ.