ವಾಹನ

ಚುಕ್ಕಿ ಮುನಿಯ

ಶಾಲೆಯ ಕಂಪ್ಯೂಟರ್ ಕೊಠಡಿ ಬಾಗಿಲ ಮೇಲೆನೋ ಸಪ್ಪಳವಾದಂತಾಗಿ ಮೇಲ್ನೋಡಿದೆ. ಗುಬ್ಬಚ್ಚಿಗಿಂತಲೂ...

ಶಾಲೆಯ ಕಂಪ್ಯೂಟರ್ ಕೊಠಡಿ ಬಾಗಿಲ ಮೇಲೆನೋ ಸಪ್ಪಳವಾದಂತಾಗಿ ಮೇಲ್ನೋಡಿದೆ. ಗುಬ್ಬಚ್ಚಿಗಿಂತಲೂ ಸಣ್ಣ ಗಾತ್ರದ ಎರಡು ಪಕ್ಷಿಗಳು ಚಟುವಟಿಕೆಯಿಂದ ಕೂಡಿದ್ದವು. ಅಲ್ಲಿ ಏನೋ ಹುಡುಕುತ್ತಿರುವಂತೆ ಕಾಣುತ್ತಿದ್ದವು. ಗಮನಿಸಿ ನೋಡಿದರೆ, ಅವು ಚಿಕ್ಕೆ ಮುನಿಯಗಳಾಗಿದ್ದವು. ಅಲ್ಲಿ ಗೂಡು ರಚಿಸಲು ಸ್ಥಳ ಪರೀಕ್ಷಿಸುವಂತೆ ಅತ್ತ-ಇತ್ತ ಹಾರಾಡುತ್ತಿದ್ದವು. ಕೊನೆಗೂ ಅವು ಅಲ್ಲಿ ಸಂಸಾರ ಹೂಡಲು ತೀರ್ಮಾನಿಸಿ ಉದ್ದುದ್ದ ಹಸಿ ಹುಲ್ಲೆಸುಳುಗಳನ್ನು ಕಿತ್ತು ತಂದು ಗೂಡು ರಚಿಸುವಲ್ಲಿ ನಿರತವಾದವು. ಈ ಪಕ್ಷಿಗಳ ಬಗ್ಗೆ ಹೆಚ್ಚು ತಿಳಿಯಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಹಕ್ಕಿಪುಕ್ಕ' ಹಿಡಿದು ಕುಳಿತೆ.
ಆಕಾಶದಲ್ಲಿ ಅಲೆಗಳಂತೆ ಹಾರುತ್ತಾ, ಕೆಲವೊಮ್ಮೆ ಗೆಜ್ಜೆ ಸಪ್ಪಳದಂತೆ ಕೂಗುತ್ತಾ, ಮಗದೊಮ್ಮೆ ಟಿಕೀಂ... ಟಿಕೀಂ... ಎಂದು ಉಲಿಯುತ್ತಾ, ಬತ್ತದ ಗದ್ದೆಗಳ ಮೇಲೆ ದಾಳಿ ಇಡುವ ಗುಬ್ಬಚ್ಚಿ ಕುಟುಂಬಕ್ಕೆ ಸೇರಿದ ಹಕ್ಕಿಯೇ ಚುಕ್ಕಿ ಮುನಿಯ. ನಾಲೆ ನಾಡಿನ ಬತ್ತದ ಗದ್ದೆ ಬಯಲುಗಳಲ್ಲಿ ವರ್ಷಪೂರ್ತಿ ಕಾಳುಕಡಿಗಳನ್ನು ಸಂಗ್ರಹಿಸುತ್ತಾ, ಆ ಪ್ರದೇಶಗಳಲ್ಲಿ ಇವು ಠಿಕಾಣಿ ಹೂಡುತ್ತವೆ. ಒಂದೆರಡರ ಸಂಖ್ಯೆಯಿಂದ ಆರಂಭವಾಗಿ 100ರವರೆಗೂ ಒಟ್ಟಾಗಿ ಗುಂಪು ಕಟ್ಟಿಕೊಳ್ಳಬಲ್ಲವು. ಕಂದು ಬಣ್ಣದ ಇವುಗಳ ಎದೆ ಭಾಗದಲ್ಲಿ ಮೀನಿನ ಹುರಪೆಯಂತೆ ಬಿಳಿ ಚುಕ್ಕೆಗಳನ್ನು ಹೊಂದಿವೆ. ಗ್ರಾಮೀಣರಿಂದ ಅಬ್ಬಲಕ್ಕಿ ಎಂದು ಕರೆಸಿಕೊಳ್ಳುವ ಇವು ಸಾಮಾನ್ಯವಾಗಿ ಮಳೆಗಾಲದಲ್ಲಿ ಸಂತಾನಾಭಿವೃದ್ಧಿಗೆ ಮುಂದಾಗಿ 3ರಿಂದ 4 ಮೊಟ್ಟೆಗಳನ್ನು ಇಡುತ್ತವೆ. 12 ದಿನಗಳ ಕಾಲ ಗಂಡು ಮತ್ತು ಹೆಣ್ಣುಗಳೆರಡೂ ಸೇರಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತವೆ

- ಚಿತ್ರ-ಲೇಖನ: ನಾಮದೇವ ಕಾಗದಗಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!