ಈಟಿಯೋಸ್ ಕ್ರಾಸ್
ಈಟಿಯೋಸ್ ಲಿವಾ ಕಾರಿಗೆ ಸ್ಟೋರ್ಟಿ ಲುಕ್ ನೀಡಿರುವ ಟೊಯೋಟಾ ಸಂಸ್ಥೆಯು ಈಟಿಯೋಸ್ ಕ್ರಾಸ್ ಕಾರನ್ನು ಮಾರುಕಟ್ಟೆಗೆ ತಂದಿದೆ. ಕಳೆದ ಎಕ್ಸ್ಪೋದಲ್ಲಿ ಬಿಡುಗಡೆಯಾಗಿದ್ದ ಕಾರನ್ನು ಈಗ ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್ನಲ್ಲಿ ತಲಾ 2 ಮಾದರಿ ಲಭ್ಯವಿದೆ. ಗಾಡಿಯ ಎಂಜಿನ್ ಹಾಗೂ ಬಹುತೇಕ ಭಾಗಗಳು ಈಟಿಯೋಸ್ ಲಿವಾದ್ದೆ ಆಗಿದೆ. ಆದರೆ ಗಾಡಿಯ ಕೆಳಭಾಗದಲ್ಲಿ ಕಪ್ಪು ಬಣ್ಣದ ಒಂದು ಪ್ಲಾಸ್ಟಿಕ್ ಪಟ್ಟಿ ನೀಡಲಾಗಿದ್ದು, ಇದು ಗಾಡಿಯ ವಿನ್ಯಾಸವನ್ನೇ ಬದಲಿಸಿದೆ. ಈ ಬದಲಾವಣೆಯು ಗಾಡಿಗೆ ಸ್ಪೋರ್ಟಿ ಲುಕ್ ನೀಡಿದೆ. ಇದಲ್ಲದೇ ರೂಫ್ರೇಲ್ ಹಾಗೂ ಫ್ರಂಟ್ ಗ್ರಿಲ್ ಬದಲಿಸಲಾಗಿದೆ. ಪೆಟ್ರೋಲ್ನಲ್ಲಿ 1.2 ಲೀ., 1.5 ಲೀ. ಹಾಗೂ ಡೀಸೆಲ್ನಲ್ಲಿ 1.4 ಲೀ. ಎಂಜಿನ್ ಲಭ್ಯವಿದೆ. ಕಾರಿನ ದೆಹಲಿಯ ಎಕ್ಸ್ ಶೋರೂಮ್ ದರವು ರು. 5.76 ಲಕ್ಷದಿಂದ ರು. 7.40 ಲಕ್ಷದವರೆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.