ವಾಹನ

ಎಕ್ಸ್ -5 ಸ್ಟಾರ್

ಈ ಕಾರನ್ನು ನೋಡಿದ ಕೂಡಲೇ ಡ್ರೈವ್ ಮಾಡಬೇಕೆನಿಸುತ್ತದೆ. ನಮ್ಮನೆಯ ಪಾರ್ಕಿಂಗ್ ಲಾಟ್‌ನಲ್ಲಿ ಇಂಥದ್ದೊಂದು ಕಾರಿದ್ದರೇ ಎಂಬ ಕನಸು ಬೀಳಲಾರಂಭವಾಗುತ್ತದೆ. ಆದರೆ ಕಾರಿನ ದರ ನೋಡಿದ ಕೂಡಲೇ ಒಮ್ಮೆಲೆ ಎದೆ ಕಟ್ಟುತ್ತದೆ. ಆಗ ಮನೆಯ ಶೋಕೇಸ್‌ನಲ್ಲಾದರೂ ಇಂಥದೊಂದು ಕಾರು ಇದ್ದರೆ ಅಂತನಿಸುತ್ತದೆ!
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳಲ್ಲಿ ಗಟ್ಟಿಮುಟ್ಟು ಹಾಗೂ ಹೆಚ್ಚಿನ ಸಾಮರ್ಥ್ಯದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಬಿಎಂಡಬ್ಲ್ಯೂ ಎಕ್ಸ್- 5 ಬಗ್ಗೆ ಹೇಳುತ್ತಿರುವ ಮಾತಿದು. ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯೂ ಇದನ್ನು ಸ್ಪೋರ್ಟ್ಸ್ ಅಲ್ಟ್ರಾ ವೆಹಿಕಲ್ ಎಂದು ಕರೆಯುತ್ತಿದ್ದರೂ ವಾಹನ ಪ್ರಪಂಚವು ಎಸ್‌ಯುವಿ ಎಂದೇ ಪರಿಗಣಿಸಿದೆ. ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಐಷಾರಾಮಿ ಕಾರುಗಳ ಈ ವಿಭಾಗದಲ್ಲಿ ಆಕರ್ಷಕ ಹಾಗೂ ಶಕ್ತಿಶಾಲಿ.
ಟರ್ಬೋ ಆರು ಸಿಲಿಂಡರ್ ಹಾಗೂ 3 ಲೀ ಇನ್-ಲೈನ್ ಡೀಸೆಲ್ ಎಂಜಿನ್ ಅನ್ನು ಹೊಂದಿರುವ ಈ ಗಾಡಿಯನ್ನು ಅತ್ಯಾಧುನಿಕ ಟರ್ಬೋ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ರೂಪಿಸಲಾಗಿದೆ. 258 ಎಚ್‌ಪಿ ಶಕ್ತಿ ಸಾಮರ್ಥ್ಯ, 2993 ಸಿಸಿ, ಹಾಗೂ 560 ಎನ್‌ಎಂ ಟಾರ್ಕ್ ನೀಡುವ ಈ ಕಾರು ಕೇವಲ 6.90 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ತಲುಪಲಿದೆ. ಅಷ್ಟೊಂದು ಚಟವಿದ್ದರೇ ಪ್ರತಿ ಗಂಟೆಗೆ ಗರಿಷ್ಠ 230 ಕಿ.ಮೀ. ವೇಗದಲ್ಲಿ ಹೋಗಬಹುದು.
ಆಟೋಮ್ಯಾಟಿಕ್ ಗೇರ್ ವ್ಯವಸ್ಥೆ ಇದ್ದು, ಗೇರ್ ಬದಲಾಯಿಸಿದಾಗ ಸ್ಕ್ರೀನ್‌ನಲ್ಲಿ ಅದರ ಇಂಡಿಕೇಷನ್ ಕೂಡ ಬರುತ್ತದೆ. ಅಂದಹಾಗೆ ಈ ದೈತ್ಯ ಗಾಡಿಗೆ 8 ಗೇರ್ ಇದೆ. ಆದರೆ ಭಾರತದ ರಸ್ತೆಗಳಲ್ಲಿ ಈ ಎಲ್ಲ 8 ಗೇರ್‌ಗಳನ್ನು ಬಳಸಿ ಕಾರು ಓಡಿಸುವ ಕನಸು ಕಾಣುವುದು ಅಸಾಧ್ಯ.
ಇದರ ಜತೆಗೆ ಬಿಎಂಡಬ್ಲ್ಯೂವಿನ ಸುರಕ್ಷತಾ ಕ್ರಮಗಳೆಲ್ಲವೂ ಇದರಲ್ಲಿ ಸೇರಿವೆ. 6 ಏರ್‌ಬ್ಯಾಗ್, ಡೈನಾಮಿಕ್ ಸ್ಟೆಬಿಲಿಟಿ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ವ್ಯವಸ್ಥೆಯೂ ಇದಕ್ಕಿದೆ. ಯುಎಸ್‌ಬಿ, ಮ್ಯೂಸಿಕ್, ಜಿಪಿಎಸ್ ಸೇರಿದಂತೆ ಸುಧಾರಿತ ಬಿಎಂಡಬ್ಲೂ ಕನೆಕ್ಟೇಡ್ ಡ್ರೈವ್ ಡ್ಯಾಶ್ ಬೋರ್ಡ್ ಕಾರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಕಾರಿನ ಒಳಗೆ ಕೂತರೆ ಹೊಸದೊಂದು ಪ್ರಪಂಚಕ್ಕೆ ಕರೆದೊಯ್ಯುವಂಥ ಶಕ್ತಿಯನ್ನು ಇದು ಹೊಂದಿದೆ. ಮತ್ತೊಂದು ವಿಶೇಷತೆಯೆಂದರೆ ಈ ಗಾಡಿಯ ತೂಕ. ಸುಮಾರು 2780 ಕೆಜಿ ಇರುವ ಈ ಕಾರು ಬಿಎಂಡಬ್ಲ್ಯೂವಿನ ಕಡಿಮೆ ತೂಕದ ಕಾರಿನಲ್ಲೊಂದಂತೆ. ಇದರ ಬಾಗಿಲು ತೆಗೆಯಲು ಹೊಟ್ಟೆ ತುಂಬಾ ಊಟ ಮಾಡಿ ಬರಬೇಕು. ಇದೇ ಕಾರಣದಿಂದ ಈ ಕಾರುಗಳು ಹೆದ್ದಾರಿಯಲ್ಲಿ ಹೋಗುತ್ತಿದ್ದರೆ ಗಜಗಾಂಭೀರ್ಯದಲ್ಲಿ ಹೊಂದಂತನಿಸುತ್ತದೆ. ರಸ್ತೆಯನ್ನು ಕಚ್ಚಿಕೊಂಡು ಮುನ್ನುಗ್ಗುತ್ತಿರುತ್ತದೆ.
ಮೆಟಾಲಿಕ್ ಪೇಂಟ್, ಆಲಾಯ್ ವ್ಹೀಲ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಮಿರರ್, ಎಲೆಕ್ಟ್ರಾನಿಕ್ ವಿಂಡೋಸ್, ಕ್ಲೈಮೇಟ್ ಕಂಟ್ರೋಲ್ ಇದರಲ್ಲಿ ಇನ್‌ಬಿಲ್ಟ್ ಆಗಿಯೇ ಇದೆ. 85 ಲೀಟರ್ ಇಂಧನ ತುಂಬಬಹುದಾಂಥ ಟ್ಯಾಂಕ್ ಹೊಂದಿರುವ ಕಾರಿನ ಬೆಲೆ ಬರೋಬ್ಬರಿ ರು. 71 ಲಕ್ಷವಾಗುತ್ತದೆ. ಇದನ್ನು ಹೊರತುಪಡಿಸಿ ಒಂದಿಷ್ಟು ಲಕ್ಷ ಐಷಾರಾಮಿ ತೆರಿಗೆ ಬೀಳುತ್ತದೆ.
ಈ ಕಾರನ್ನು ಪುಣೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕ್ರಿಕೆಟ್ ದೈವ ಸಚಿನ್ ತೆಂಡೂಲ್ಕರ್ ಹೀಗಂದಿದ್ದರು; 'ಮಕ್ಕಳನ್ನು ಶಾಲೆಗೆ ಕಳುಹಿಸಲು, ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಲು ಹೇಳಿ ಮಾಡಿಸಿದ ಕಾರಿದು. ಇದಲ್ಲದೇ ಮನೆಯವರೆಲ್ಲ ಸೇರಿ ದೂರದ ಪ್ರಯಾಣಕ್ಕೂ ನೆರವಾಗುತ್ತದೆ. ಈ ಕಾರಿನಲ್ಲಿರುವ ಜಾಗ ಹಾಗೂ ಸಾಮರ್ಥ್ಯ ಎಲ್ಲ ಥರದ ಪ್ರಯಾಣಕ್ಕೆ ಖುಷಿ ಕೊಡುತ್ತದೆ'. ಸಚಿನ್‌ರಂತೆ ಎಲ್ಲರೂ ದುಡ್ಡು ಮಾಡಿದ್ದರೆ ಅಥವಾ ಮನೆಯಲ್ಲಿ ಹಣ ಕೊಳೆಯುತ್ತಿದ್ದರೆ ಹೆಂಡತಿ ಮಕ್ಕಳಿಗೆ ಬಿಎಂಡಬ್ಲ್ಯೂ ಮಸ್ಕಾ ಹೊಡೆಯಬಹುದು! 

  ರಾಧೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ