ನೀವು ಮಹೀಂದ್ರಾ ಮತ್ತು ಮಹೀಂದ್ರಾ ಗ್ರಾಹಕರಾಗಿದ್ದರೆ ಮಾರ್ಚ್ ಮೊದಲ ವಾರದಲ್ಲಿ ಉಚಿತವಾಗಿ ಗಾಡಿ ತಪಾಸಣೆ ಮಾಡಿಸಿಕೊಳ್ಳಬಹುದು.
ದೇಶದ ಯಾವುದೇ ಭಾಗದಲ್ಲಿರುವ ಮಹೀಂದ್ರಾ ಸರ್ವೀಸ್ ಕೇಂದ್ರಗಳಲ್ಲಿ ನುರಿತ ತಂತ್ರಜ್ಞರಿಂದ ಗಾಡಿಯ ತಪಾಸಣೆ ನಡೆಸಲಾಗುತ್ತದೆ. ಮಾರ್ಚ್ 3ರಿಂದ 9ರವರೆಗೆ ಈ ಸೌಲಭ್ಯ ಲಭ್ಯವಿದ್ದು, ಸ್ಕಾರ್ಪಿಯೋ, ಬೊಲೆರೊ, ಕ್ಸೈಲೋ, ಕ್ವಾಂಟೋ, ಎಕ್ಸ್‌ಯುವಿ500, ರೆಕ್ಸ್ಟಾನ್, ವಿರೆಟೋ, ವೈಬ್, ಲೋಗಾನ್ ಹಾಗೂ ಥಾರ್ ವಾಹನಗಳ ಮಾಲೀಕರು ಗಾಡಿಯ ಎಂಜಿನ್, ಸಸ್ಪೆನ್ಷನ್, ಬ್ಯಾಟರಿ ಸೇರಿದಂತೆ ಇತರ ಭಾಗಗಳ ತಪಾಸಣೆ ಮಾಡಿಸಬಹುದು. ಈ ಸಂದರ್ಭದಲ್ಲಿ ಬಿಡಿಭಾಗಗಳನ್ನು ರಿಯಾಯಿತಿ ದರದಲ್ಲಿ ನೀಡಲು ಸಂಸ್ಥೆ ನಿರ್ಧರಿಸಿದೆ. ಇದಲ್ಲದೇ ಮಾಲೀಕರಿಗೆ ಆಕರ್ಷಕ ಉಡುಗೊರೆಗಳನ್ನು ಸಂಸ್ಥೆ ನೀಡುತ್ತಿದೆ.
ಇದೇ ರೀತಿ ಹುಂಡೈ ಸಂಸ್ಥೆಯು ದೇಶದ 1000ಕ್ಕೂ ಅಧಿಕ ಔಟ್‌ಲೆಟ್‌ಗಳಲ್ಲಿ ಉಚಿತ ತಪಾಸಣೆ ಶಿಬಿರ ನಡೆಸುತ್ತಿದೆ.