ವಾಹನ

ಡ್ರೈವರ್ ಇಲ್ಲದ ಗೂಗಲ್ ಕಾರು!

ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ..

ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ. ದೂರವನ್ನು ಚಾಲಕ ರಹಿತ ಕಾರನ್ನು ಪರೀಕ್ಷಾರ್ಥವಾಗಿ ಓಡಿಸಿದೆ. ತಂತ್ರಜ್ಞಾನದ ನಾನಾ ಮಜಲುಗಳನ್ನು ಇನ್ನು ಅಭ್ಯಸಿಸುತ್ತಿರುವ ಗೂಗಲ್, ಚಾಲಕ ರಹಿತ ಕಾರಿನ ಸಾಧ್ಯಾಸಾಧ್ಯತೆ ಹಾಗೂ ಸವಾಲಿನ ಬಗ್ಗೆ ಇನ್ನೂ ಸಂಶೋಧನೆ ನಡೆಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಕಾರಿನ ಆಸುಪಾಸಿನಲ್ಲಿರುವ ವಸ್ತು ಹಾಗೂ ಸಂವೇದನೆಗಳನ್ನು ಅರ್ಥೈಸಿಕೊಳ್ಳಲು ಸಫಲವಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ. ಆದರೆ ರಸ್ತೆಯ ಎಲ್ಲ ನಿಯಮಗಳನ್ನು ಅರ್ಥೈಸಿಕೊಂಡು ಸ್ವಯಂ ಚಾಲನೆ ಮಾಡಲು ಕಾರು ವಿಫಲವಾಗುತ್ತಿದೆ. ಅಮೆರಿಕದಂಥ ದೇಶದ ಇಂಟರ್ನೆಟ್ ವ್ಯವಸ್ಥೆಯಲ್ಲಿಯೇ ಜಿಪಿಎಸ್ ಆಧರಿಸಿ ಎಲ್ಲ ಸಂದೇಶಗಳನ್ನು ಗ್ರಹಿಸಿ ಚಾಲಕ ರಹಿತ ವ್ಯವಸ್ಥೆ ರೂಪಿಸುವುದು ಗೂಗಲ್‌ಗೆ ತುಸು ಕಷ್ಟವೇ ಆಗುತ್ತಿದೆ. ಆದರೆ ಇನ್ನೆರಡು ವರ್ಷದೊಳಗೆ ರಸ್ತೆಗೆ ಬರಲಿದೆ ಎಂಬ ವಿಶ್ವಾಸವನ್ನು ಗೂಗಲ್ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!