ಮುಂಬಯಿ ವಿಮಾನ ನಿಲ್ದಾಣಕ್ಕೆ ಅಮೇಲಿಯಾ ಜಾನ್ಸನ್ ಎಂಬಾಕೆ 1930ರಲ್ಲಿ ಬಂದಿಳಿಯುತ್ತಾಳೆ. ವಿಮಾನವನ್ನೇ ನೋಡದ ಜನರೆದುರು ಆಕೆಯು ತನ್ನ ಏರ್‌ಕ್ರಾಫ್ಟ್ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದಾಗ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ, 'ಮೇಡಮ್ ಕಿತನಾ ದೇತಿ ಹೈ' ಎಂದು ಕೇಳುತ್ತಾನೆ. ಇಂಥದೊಂದು ಮಾರುತಿ ಸುಝುಕಿ ಬ್ರಾಂಡ್‌ನ ಜಾಹೀರಾತನ್ನು ನೀವು ಟಿವಿಯಲ್ಲಿ ನೋಡಿರುತ್ತೀರಿ.
ಭಾರತದಲ್ಲಿ ವಾಹನ ಕೊಳ್ಳುವ ಶೇ.90ಕ್ಕೂ ಅಧಿಕ ಜನ ಕೇಳುವ ಸಾಮಾನ್ಯ ಪ್ರಶ್ನೆಯಿದು. ಕೇಳುವ ಭಾಷೆ ಬದಲಿರಬಹುದು, ಆದರೆ ಎಲ್ಲರೂ ವಾಹನ ಖರೀದಿಸುವ ಮುಂಚೆ, 'ಎಷ್ಟು ಕೊಡುತ್ತೆ ಸ್ವಾಮಿ' ಎಂದೇ ಕೇಳುವುದು. ಎಮ್ಮೆ ಖರೀದಿಯಲ್ಲೂ ಇದೇ ಪ್ರಶ್ನೆ ಕೇಳುತ್ತೇವೆ!
ಮಾರುತಿ, ಹುಂಡೈ, ಹೋಂಡಾ ಹಾಗೂ ಟಾಟಾ ಕಾರುಗಳೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನ ಇಂಧನ ಕ್ಷಮತೆಯಲ್ಲಿ ಮುಂದಿವೆ. ಆರಂಭದ ದಿನಗಳಲ್ಲಿ ಇಂಧನ ಕ್ಷಮತೆ ಎಂದರೆ ಮಾರುತಿ ಸುಝುಕಿ ಎಂಬ ಮಾತಿತ್ತು. ಇದೇ ಕಾರಣದಿಂದ ಭಾರತದ ಜನಸಾಮಾನ್ಯರ ಕಾರೆಂಬ ಹೆಗ್ಗಳಿಕೆಗೆ ಮಾರುತಿ ಕಾರಣವಾಗಿತ್ತು. ಇಂದಿಗೂ ಅದರ ಪ್ರಾಬಲ್ಯವನ್ನು ಅಲ್ಪಮಟ್ಟಿಗೆ ಉಳಿಸಿಕೊಂಡೇ ಬಂದಿದೆ. ಇದೇ ಕಾರಣದಿಂದ 'ಕಿತನೇ ದೇತಿ ಹೈ' ಎಂಬ ತಮಾಷೆಯ ಜಾಹೀರಾತು ರೂಪಿಸಿದ್ದು. 'ಕಿತನಾ ದೇತಿ ಹೈ' ಎಂಬ ಮಾತಿನಲ್ಲಿ ಈ ದೇಶದ ಆರ್ಥಿಕ ವ್ಯವಸ್ಥೆ ನಿಂತಿದೆ. ಅನವಶ್ಯಕವಾಗಿ ಭಾರತೀಯರು ಖರ್ಚು ಮಾಡುವುದಿಲ್ಲ, ಪೈಸೆ ಪೈಸೆಗೂ ಲೆಕ್ಕಾಚಾರ ಮಾಡುತ್ತಾರೆ ಎಂಬ ಗಣಿತ ಅದರಲ್ಲಿದೆ, ಗ್ರಾಹಕರ ಮನಃಶಾಸ್ತ್ರವಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರು ಮಾರುಕಟ್ಟೆಯಲ್ಲಿ 'ಹೆಚ್ಚು ಮೈಲೇಜ್ ಕೊಡುವ' ವಾಹನಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ, ನೀವು 'ಕಿತನಾ ದೇತಿ ಹೈ' ಎಂದು ಕೇಳುವ ಮುಂಚೆ.
ನಗರ ಹಾಗೂ ಹೆದ್ದಾರಿ ಪ್ರದೇಶಗಳಲ್ಲಿನ ಚಾಲನೆ ಅವಲಂಬಿಸಿ ಪ್ರತಿ ಕಿ.ಮೀ.ಗೆ ಆಗುವ ವೆಚ್ಚದ ಲೆಕ್ಕಾಚಾರ ಮಾಡಲಾಗಿದೆ. ಕೇವಲ ನಗರ ಪ್ರದೇಶದಲ್ಲೇ ವಾಹನ ಚಾಲನೆ ಮಾಡುವವರಿಗೆ ಇದು ಸ್ವಲ ಕಡಿಮೆಯಾಗಬಹುದು. ಹೆದ್ದಾರಿ ಅಥವಾ ಸಂಚಾರ ದಟ್ಟಣೆ ಇಲ್ಲದ ಪ್ರದೇಶದಲ್ಲಿ ಚಾಲನೆ ಮಾಡುವವರಿಗೆ ವೆಚ್ಚದ ಪ್ರಮಾಣ ಹೆಚ್ಚಾಗಬಹುದು. 'ಕಿತನಾ ದೇತಿ ಹೈ' ಎನ್ನುವುದು ವಾಹನ ನಿರ್ವಹಣೆಯ ಮೇಲೂ ಅವಲಂಬಿತವಾಗಿರುತ್ತದೆ.
ಪೆಟ್ರೋಲ್ ಎಂಜಿನ್- ಟಾಪ್ 10 ಇಂಧನ ಕ್ಷಮತೆ
ಟಾಟಾ ನ್ಯಾನೋ
ನಗರ- 15.1 ಕಿ.ಮೀ/ಲೀ
ಹೆದ್ದಾರಿ- 20.6 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 4.50
ಮಾರುತಿ ಆಲ್ಟೋ 800
ನಗರ- 13.3 ಕಿ.ಮೀ/ಲೀ
ಹೆದ್ದಾರಿ- 17.8 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 5.20
ಹುಂಡೈ ಇಯಾನ್
ನಗರ- 13.7 ಕಿ.ಮೀ/ಲೀ
ಹೆದ್ದಾರಿ- 17.2 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 5.20
ಡಟ್ಸನ್ ಗೋ
ನಗರ- 12.8 ಕಿ.ಮೀ/ಲೀ
ಹೆದ್ದಾರಿ- 17.9 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 5.30
ಮಾರುತಿ ವ್ಯಾಗನ್-ಆರ್
ನಗರ- 12.4 ಕಿ.ಮೀ/ಲೀ
ಹೆದ್ದಾರಿ- 17 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- 5.50
ಮಾರುತಿ ಆಲ್ಟೋ ಕೆ-10
ನಗರ- 14 ಕಿ.ಮೀ/ಲೀ
ಹೆದ್ದಾರಿ- 17 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 5.20
ಹುಂಡೈ ಐ-10
ನಗರ- 12 ಕಿ.ಮೀ/ಲೀ
ಹೆದ್ದಾರಿ- 16.3 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- 5.70
ನಿಸಾನ್ ಮೈಕ್ರಾ ಆ್ಯಕ್ಟೀವ್
ನಗರ- 11.8 ಕಿ.ಮೀ/ಲೀ
ಹೆದ್ದಾರಿ- 17.5 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- 5.50
ಫೋರ್ಡ್ ಇಕೋಸ್ಪೋರ್ಟ್
ನಗರ- 11.8 ಕಿ.ಮೀ/ಲೀ
ಹೆದ್ದಾರಿ- 17 ಕಿ.ಮೀ/ಲೀ
ಪ್ರತಿ ಕಿ.ಮೀಗೆ ಆಗುವ ವೆಚ್ಚ- 5.60
ಮಾರುತಿ ಸ್ವಿಫ್ಟ್
ನಗರ- 12.6 ಕಿ.ಮೀ/ಲೀ
ಹೆದ್ದಾರಿ- 17 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- 5.50
ಡೀಸೆಲ್ ಎಂಜಿನ್- ಟಾಪ್ 10 ಇಂಧನ ಕ್ಷಮತೆ
ಹೋಂಡಾ ಅಮೇಜ್
ನಗರ- 15.2 ಕಿ.ಮೀ/ಲೀ
ಹೆದ್ದಾರಿ- 20.8 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.61
ಶೆವರ್ಲೆ ಬೀಟ್
ನಗರ- 16 ಕಿ.ಮೀ/ಲೀ
ಹೆದ್ದಾರಿ- 19.1 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.80
ಟಾಟಾ ಇಂಡಿಕಾ ಇವಿ2
ನಗರ- 15.3 ಕಿ.ಮೀ/ಲೀ
ಹೆದ್ದಾರಿ- 19.3 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.80
ಮಾರುತಿ ಸ್ವಿಫ್ಟ್ ಡಿಝೈರ್
ನಗರ- 14.6 ಕಿ.ಮೀ/ಲೀ
ಹೆದ್ದಾರಿ- 19.8 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.80
ನಿಸಾನ್ ಮೈಕ್ರಾ
ನಗರ- 14.6 ಕಿ.ಮೀ/ಲೀ
ಹೆದ್ದಾರಿ- 19.5 ಕಿ.ಮೀ/ಲೀ
ಪ್ರತಿ ಕಿ.ಮೀಗೆ ಆಗುವ ವೆಚ್ಚ- ರು. 3.90
ಮಾರುತಿ ಸ್ವಿಫ್ಟ್
ನಗರ- 14.6 ಕಿ.ಮೀ/ಲೀ
ಹೆದ್ದಾರಿ- 19.5 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.90
ಮಾರುತಿ ರಿಟ್ಝ್
ನಗರ- 14.6 ಕಿ.ಮೀ/ಲೀ
ಹೆದ್ದಾರಿ- 19.3
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.90
ಟೊಯೋಟಾ ಇಟಿಯೋಸ್ ಲಿವಾ
ನಗರ- 14.5 ಕಿ.ಮೀ/ಲೀ
ಹೆದ್ದಾರಿ- 19.3 ಕಿ.ಮೀ/ಲೀ
ಪ್ರತಿ ಕಿ.ಮೀಗೆ ಆಗುವ ವೆಚ್ಚ- ರು. 3.90
ಹೋಂಡಾ ಸಿಟಿ
ನಗರ- 14.2 ಕಿ.ಮೀ/ಲೀ
ಹೆದ್ದಾರಿ- 19.5 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 3.90
ಟೊಯೋಟಾ ಇಟಿಯೋಸ್
ನಗರ- 14.2 ಕಿ.ಮೀ/ಲೀ
ಹೆದ್ದಾರಿ- 19 ಕಿ.ಮೀ/ಲೀ
ಪ್ರತಿ ಕಿ.ಮೀ.ಗೆ ಆಗುವ ವೆಚ್ಚ- ರು. 4
-ರಾಧೆ