ಸೂಪರ್ ಬೈಕ್‌ಗಳ ಬಗ್ಗೆ ಆಸೆ. ಆದರೆ, ಭಾರತೀಯರಿಗೆ ದುಡ್ಡಿನ ಬಗ್ಗೆ ಪ್ರೀತಿ. ದೇಶಾದ್ಯಂತ ಹೆಚ್ಚು ಸಾಮರ್ಥ್ಯದ ಸೂಪರ್ ಬೈಕ್‌ಗಳ ಬಗ್ಗೆ ಭಾರೀ ಆಸಕ್ತಿ ಹರಿಯುತ್ತಿದೆ. ಆದರೆ ಅವು ದುಬಾರಿ. ಭಾರತೀಯ ಗ್ರಾಹಕರ ಈ ಮನಸ್ಥಿತಿ ಗಮನಿಸಿಯೇ ಡಿಎಸ್‌ಕೆ ಹ್ಯೂಸಂಗ್ ಕಂಪನಿ ಗ್ರಾಹಕರನ್ನು ಸೆಳೆಯಲು ಕಡಿಮೆ ದರದ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ.
ಬಹುತೇಕ ಎಲ್ಲ ಸೂಪರ್ ಬೈಕ್‌ಗಳೂ ವಿದೇಶಗಳಿಂದ ಆಮದಾಗುತ್ತವೆ. ಆದ್ದರಿಂದಲೇ ಇವು ತುಂಬಾ ದುಬಾರಿ. ಈ ನಿಟ್ಟಿನಲ್ಲಿ ಡೆಎಸ್‌ಕೆ ಹ್ಯೂಸಂಗ್ ಭಾರತದಲ್ಲೇ ಬೈಕ್ ತಯಾರಿಸಲು ನಿರ್ಧರಿಸಿದೆ. 2015ರ ಕೊನೆಯ ಹೊತ್ತಿಗೆ ಭಾರತದಲ್ಲೇ ಉತ್ಪಾದಿಸಿದ ಸೂಪರ್ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ. ಇದರಿಂದ ಸೂಪರ್ ಬೈಕ್‌ಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಸಂಸ್ಥೆಯ ಶಿವಪಾದ ರೇ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈಗಾಗಲೇ ಡಿಎಸ್‌ಕೆ ಹ್ಯೂಸಂಗ್ 250 ಸಿಸಿ ಸಾಮರ್ಥ್ಯದ ಎರಡು ಬೈಕ್‌ಗಳನ್ನು ಹೊಂದಿದೆ. ಇವುಗಳನ್ನು ನಗರದಲ್ಲೂ ಚಲಾಯಿಸಬಹುದು. ಇದಕ್ಕಿಂತ ಮುಖ್ಯವಾಗಿ ಇವು ರು. 2-3 ಲಕ್ಷಕ್ಕೆಲ್ಲ ದೊರೆಯುತ್ತವೆ. ಹ್ಯಾರ್ಲಿ ಡೆವಿಡ್ ಸನ್‌ನಂಥ ಕಂಪನಿಗಳೂ ಕಡಿಮೆ ಸಾಮರ್ಥ್ಯದ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ ಅಂದರೆ ಮಾರುಕಟ್ಟೆ ಸ್ಥಿತಿ ಅರಿಯಬಹುದು.
ಭಾರತೀಯ ಮಾರುಕಟ್ಟೆಯನ್ನು ಡಿಎಸ್‌ಕೆ ಹ್ಯೂಸಂಗ್ ಕಂಪನಿ ಬಹುಬೇಗನೆ ಅರ್ಥಮಾಡಿಕೊಂಡಿದ್ದು, 250-650 ಸಿಸಿ ಸಾಮರ್ಥ್ಯದ ನಡುವೆ 2015ರ ಅಂತ್ಯಕ್ಕೆ 4-5 ಬೈಕ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡುವುದು ಕಂಪನಿಯ ಉದ್ದೇಶ. ಹ್ಯಾರ್ಲಿ ಡೆವಿಡ್ಸನ್ ಬೈಕ್‌ಗೆ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವುದು ಡಿಎಸ್‌ಕೆ ಹ್ಯೂಸಂಗ್.
ಈಗಾಗಲೇ ಕಂಪನಿ ಜಿಟಿ 250 ಆರ್ ಮತ್ತು ಅಕ್ವಿಲಾ 250 ಎಂಬ ಎರಡು ಕಡಿಮೆ ಸಾಮರ್ಥ್ಯದ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳ ಸಾಮರ್ಥ್ಯ ಕಡಿಮೆ ಇರಬಹುದು. ಆದರೆ ಹೇಳಿಕೊಳ್ಳಲು ಸೂಪರ್ ಬೈಕ್.