ವಿಶ್ವದ ಅತಿ ವೇಗದ ರೈಲು ಮ್ಯಾಗ್ಲೆವ್
ಇಷ್ಟೊಂದು ವೇಗದಲ್ಲಿ ಸಾಗುವ ರೈಲೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಅಬ್ಬಬ್ಬಾ ಜಪಾನ್ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯ ಮೇಲೆ...
ಇಷ್ಟೊಂದು ವೇಗದಲ್ಲಿ ಸಾಗುವ ರೈಲೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಅಬ್ಬಬ್ಬಾ ಜಪಾನ್ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯ ಮೇಲೆ ವಿಶ್ವ ದಾಖಲೆ ಬರೆಯುತ್ತಲೇ ಸಾಗುತ್ತಿದೆ.
ಕಳೆದ ವಾರ ಗಂಟೆಗೆ ದಾಖಲೆಯ 590 ಕೀ.ಮೀ. ವೇಗದಲ್ಲಿ ಸಂಚರಿಸಿದ್ದ ಮ್ಯಾಗ್ಲೆವ್ ರೈಲು ಇದೀಗ ಗಂಟೆಗೆ ಭರ್ಜರಿ 603 ಕೀ.ಮೀ. ವೇಗವನ್ನು ಕ್ರಮಿಸುವ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ.
ಇಲ್ಲಿಗೂ ತಮ್ಮ ಪ್ರಯತ್ನವನ್ನು ನಿಲ್ಲಿಸದ ಜಪಾನ್‍ನ ರೈಲ್ವೆ ಅ„ಕಾರಿಗಳು ಒಂದು ವಾರದೊಳಗೆ ಮೌಂಟ್ ಫ್ಯೂಜಿ ಟೆಸ್ಟ್ ಪಯಣದಲ್ಲಿ ಗಂಟೆಗೆ 600 ಕೀ.ಮೀ. ವೇಗವನ್ನು ತಲುಪುವ ಮೂಲಕ ನೂತನ ದಾಖಲೆಗೆ ಮುತ್ತಿಕ್ಕಿದ್ದಾರೆ.
ಮ್ಯಾಗ್ಲೆವ್ ರೈಲು ಆಯಸ್ಕಾಂತೀಯ ತೇಲುವಿಕೆ ರೈಲು ಹಳಿ ಮೇಲ್ಗಡೆಯಲ್ಲಿ ಸಂಚರಿಸುತ್ತದೆ. ಈ ವ್ಯವಸ್ಥೆಯು ಬುಲೆಟ್ ರೈಲಿಗಿಂತಲೂ ಹೆಚ್ಚಿನ ವೇಗ, ಕಡಿಮೆ ಸದ್ದು, ಸುಗಮತೆಯನ್ನು ನೀಡಲು ಸಮರ್ಥವಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.