ಮಾರುತಿ ಸುಜುಕಿ ಸಂಸ್ಥೆ ವಾಹನಗಳ ಮಾರಾಟ ಶೇ.8 .5 ರಷ್ಟು ಏರಿಕೆ
ಅಟೋಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ವಾಹನಗಳ ಮಾರಾಟ ಡಿಸೆಂಬರ್ ತಿಂಗಳಲ್ಲಿ ಏರಿಕೆ ಕಂಡಿದೆ.
ಮುಂಬೈ: ಅಟೋಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ವಾಹನಗಳ ಮಾರಾಟ ಡಿಸೆಂಬರ್ ತಿಂಗಳಲ್ಲಿ ಏರಿಕೆ ಕಂಡಿದೆ.
ಕಳೆದ ತಿಂಗಳಲ್ಲಿ ಶೇ.8 .5 ರಷ್ಟು ಮಾರಾಟ ಏರಿಕೆಯಾಗಿದ್ದು 2014 ರ ಡಿಸೆಂಬರ್ ನಲ್ಲಿ 109,791 ಯುನಿಟ್ ಗಳಷ್ಟಿದ್ದ ಮಾರಾಟ 119 ,149 ಯುನಿಟ್ ಗಳಿಗೆ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ನವೆಂಬರ್ ತಿಂಗಳಲ್ಲಿ ಸಂಸ್ಥೆಯ ವಾಹನಗಳ ಮಾರಾಟ ಶೇ.9 .7 ರಷ್ಟು ಏರಿಕೆಯಾಗಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಕಾರುಗಳ ಮಾರಾಟ ಶೇ.13 .5 ರಷ್ಟು ಏರಿಕೆಯಾಗಿದ್ದರೆ, ರಫ್ತು ಪ್ರಮಾಣ ಶೇ.33 .1 ಇಳಿಕೆಯಾಗಿದೆ. ಇನ್ನು ಪ್ಯಾಸೆಂಜರ್ ವಿಭಾಗದ ಕಾರುಗಳ ಮಾರಾಟದಲ್ಲಿ ಶೇ.11 .6 ರಷ್ಟು ಏರಿಕೆಯಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.