ಪ್ಯಾರಡೈಸ್ ಐಸಲ್ ಬೀಚ್ ರೆಸಾರ್ಟ್ ಎಂಬ ಸ್ವರ್ಗ 
ವಾಹನ

ಅಲೆಗಳಲ್ಲಿ ಅಲೆಯಿರಿ

ಒಂದು ಸುಂದರ ಬೀಚ್‌ನ ಆನಂದದ ಅಲೆಗಳಲ್ಲಿ ಹಾರುವ ಹಕ್ಕಿಯಂತಾಗಬೇಕಿದ್ದರೆ ನೀವು ಬರಬೇಕಾಗಿರುವುದು ಮಲ್ಪೆಯ 'ಪ್ಯಾರಡೈಸ್ ಐಸಲ್ ಬೀಚ್ ರೆಸಾರ್ಟ್‌'ಗೆ. ಅರಬ್ಬಿ ಸಮುದ್ರದ ದಡದಲ್ಲಿ ನಿಸರ್ಗ ರಮಣೀಯ ದೃಶ್ಯವೈಭವಗಳನ್ನು ಹೊತ್ತು ಕೊಂಡಿರುವ ಮಲ್ಪೆ - ಸ್ವರ್ಗದ ಅಲೆದಾಟದಲ್ಲಿರುವವರಿಗೆ ಪ್ರಿಯವಾದ ತಾಣ.

ಮಂಗಳೂರು ಏರ್‌ಪೋರ್ಟ್‌ನಿಂದ 60ಕಿಮೀ ದೂರ ಮತ್ತು ಉಡುಪಿಯಿಂದ 5 ಕಿಮೀ ಅಂತರದಲ್ಲಿದೆ ಈ 'ಪ್ಯಾರಡೈಸ್‌'. 75 ಕೋಣೆಗಳು, 3 ರೆಸ್ಟೋರೆಂಟ್, ಬಾರ್, ಡಿಸ್ಕೋಥೆಕ್, ಬ್ಯಾಂಕ್ವೆಟ್, ಕಾನ್ಫರೆನ್ಸ್ ಹಾಲ್, ಸ್ವಿಮ್ಮಿಂಗ್ ಪೂಲ್, ಆಯುರ್ವೇದ ಸ್ಪಾ, ವಾಟರ್ ಸ್ಪೋರ್ಟ್ಸ್ ಮತ್ತು ಒಳಾಂಗಣ-ಹೊರಾಂಗಣ ಕ್ರೀಡೆಗಳ ಸೌಲಭ್ಯದಿಂದ ಈ ರೆಸಾರ್ಟ್ ನಿಮ್ಮ ಮನಸ್ಸಿಗೂ ಆತ್ಮಕ್ಕೂ ಸಂತೋಷ ತರುತ್ತದೆ. ಪರಿಸರಸ್ನೇಹಿ ವಾತಾವರಣದಲ್ಲಿ ವಾಕಿಂಗ್ ಹೋಗುವ ಖುಷಿ, ಕಿಟಕಿಯಿಂದ ಕಾಣಿಸುವ ಸಮುದ್ರದ ವೈಭವ, ಐತಿಹಾಸಿಕ ಕೋಟೆಯ ಪಳೆಯುಳಿಕೆಗಳನ್ನು ನೋಡಿ ಹಳೆಯ ನೆನಪುಗಳಿಗೆ ಹಾರುವ ಸೊಗಸು - ಇವೆಲ್ಲವೂ ಸಾಧ್ಯವಾಗುವುದು.

ಅವರವರು ಬಯಸುವ ಸೌಲಭ್ಯಗಳ ಆಧಾರದ ಮೇಲೆ ಕಾಟೇಜ್‌ಗಳಿಂದ ಹಿಡಿದು ಪ್ರೆಸಿಡೆನ್ಷಿಯಲ್ ಸ್ಯೂಟ್‌ಗಳಿವೆ. ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ರಾಜಭೋಜನ ಲಭ್ಯ.
ಹಾಗೆಯೇ ವಿಶೇಷ ಪ್ಯಾಕೇಜ್‌ಗಳೂ ಇದ್ದು, 'ಬೀಚ್ ಮತ್ತು ಹೌಸ್‌ಬೋಟ್ ಪ್ಯಾಕೇಜ್‌' ಇಲ್ಲಿನ ವಿಶೇಷ ಆಕರ್ಷಣೆ. ಇದೇ ಗುಂಪಿಗೆ ಸೇರಿದ 'ಪ್ಯಾರಡೈಸ್ ಲಗೂನ್‌' ಉಡುಪಿ ಜಿಲ್ಲೆಯ ಕೆಮ್ಮಣ್ಣು ಹೂಡೆಯಲ್ಲಿರುವ ಇನ್ನೊಂದು ಅದ್ಭುತ ತಾಣ. ಮಂಗಳೂರು- ಉಡುಪಿಯ ನಡುವಿರುವ ಎರ್ಮಲ್‌ನಲ್ಲಿರುವ 'ಪಾಮ್ ಗ್ರೋವ್ ಬೀಚ್ ರೆಸಾರ್ಟ್‌' ಕೂಡಾ ಅಷ್ಟೇ ರಮಣೀಯ ಸ್ವರ್ಗ. ಆನಂದದ ಅಲೆಗಳಲ್ಲಿ ಮೀಯುವುದಕ್ಕೆ ಕುಟುಂಬ ಸಮೇತ ತಪ್ಪದೆ ಬನ್ನಿ!
ವಿಳಾಸ: ಪ್ಯಾರಡೈಸ್ ಐಸಲ್ ಬೀಚ್ ರೆಸಾರ್ಟ್,
46, ಮಲ್ಪೆಬೀಚ್, ಉಡುಪಿ- 576108
ಫೋನ್: 08202 538666/777
-ಪ್ರವೀಣ್ ಮನೋಹರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT