ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ
ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಗುರುವಾರ ತನ್ನ ಕಾರುಗಳ ಬೆಲೆಯನ್ನು ವಿವಿಧ ಮಾಡೆಲ್ ಗಳ...
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಗುರುವಾರ ತನ್ನ ಕಾರುಗಳ ಬೆಲೆಯನ್ನು ವಿವಿಧ ಮಾಡೆಲ್ ಗಳ ಮೇಲೆ ಸುಮಾರು 34,494 ರುಪಾಯಿಗಳವರೆಗೆ ಹೆಚ್ಚಳ ಮಾಡಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2016-17ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿರುವ ಮೂಲಸವಲತ್ತು ತೆರಿಗೆ (ಸೆಸ್) ಪರಿಣಾಮವನ್ನು ಸರಿದೂಗಿಸಿಕೊಳ್ಳಲು ಕಂಪೆನಿ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.
ಬಜೆಟ್ ನಲ್ಲಿ ಆಟೋಮೊಬೈಲ್ಗಳ ಮೇಲೆ ಮೂಲಸವಲತ್ತು ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ವಿವಿಧ ಮಾಡೆಲ್ಗಳ ಕಾರುಗಳ ಬೆಲೆಯನ್ನು 1,441ರಿಂದ 34,494 ರುಪಾಯಿಗಳವರೆಗೆ ಏರಿಸಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಪ್ರಕಟಣೆಯಲ್ಲಿ ತಿಳಿಸಿದೆ.
ಸಿಯಾಝ್ ಎಸ್ಎಚ್ವಿಎಸ್ ಮತ್ತು ಎರ್ಟಿಗಾ ಎಸ್ಎಚ್ವಿಎಸ್ ಮಾಡೆಲ್ಗಳಿಗೆ ಮೂಲಸವಲತ್ತು ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಆದ್ದರಿಂದ ಈ ಮಾಡೆಲ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.