ಸಾಂದರ್ಭಿಕ ಚಿತ್ರ 
ವಾಹನ

ಪೆಟ್ರೋಲ್ ಗಿಂತ ನೂತನ ಡೀಸೆಲ್ ಕಾರುಗಳು ಹೆಚ್ಚು ಪರಿಸರ ಸ್ನೇಹಿ

ಆಧುನಿಕ ಡೀಸೆಲ್ ಕಾರುಗಳು ಪೆಟ್ರೋಲ್ ಅಥವಾ ಎಲ್ ಪಿಜಿ ಕಾರುಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದ್ದು,....

ಟೋರೊಂಟೊ: ಆಧುನಿಕ ಡೀಸೆಲ್ ಕಾರುಗಳು ಪೆಟ್ರೋಲ್ ಅಥವಾ ಎಲ್ ಪಿಜಿ ಕಾರುಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದ್ದು, ಕಡಿಮೆ ವಾಯು ಮಾಲಿನ್ಯವನ್ನು ಬಿಡುಗಡೆ ಮಾಡುತ್ತವೆ ಎಂದು ಅಧ್ಯಾಯನವೊಂದು ಹೇಳಿದೆ.
ಇದುವರೆಗೆ ಡೀಸೆಲ್ ಕಾರುಗಳು ಹೆಚ್ಚು ವಾಯು ಮಾಲಿನ್ಯ ಉಂಟು ಮಾಡುತ್ತವೆ ಎಂಬ ಕೆಟ್ಟ ಹೆಸರಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ಪೆಟ್ರೋಲ್ ಕಾರುಗಳೇ ಹೆಚ್ಚು ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಅದು ಕಣ್ಣಿಗೆ ಕಾಣಿಸುವುದಿಲ್ಲ ಎಂದು ಕೆನಡಾದ ಡಿ ಮಾಂಟ್ರಿಯಲ್ ವಿವಿಯ ಸಹಾಯಕ ಪ್ರಾದ್ಯಾಪಕ ಪ್ಯಾಟ್ರಿಕ್ ಹಯೆಸ್ ಅವರು ಹೇಳಿದ್ದಾರೆ.
ಸಂಶೋಧಕರು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಹೊರಸೂಸಲ್ಪಡುವ ಕಾರ್ಬನ್ ಕಣಗಳನ್ನು ಪರಿಶೀಲಿಸಿದ್ದು, ಡೀಸೆಲ್ ಕಾರುಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿ ನೂತನ ಡೀಸೆಲ್ ಕಾರುಗಳಿಗೆ ಕಾರ್ಬನ್ ಕಣದ ಫಿಲ್ಟರ್ ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದಾಗಿ ಹೊರ ಸೂಸುವ ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel