5 ತಿಂಗಳಲ್ಲೇ ಮಾರುತಿ ಡಿಸೈರ್ ಕಾರು ಒಂದು ಲಕ್ಷ ಯುನಿಟ್ ಮಾರಾಟ
ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.
ನವದೆಹಲಿ: ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.
ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದ ಡಿಸೈರ್ ಕಾರು, ಅತ್ಯಂತ ವೇಗವಾಗಿ 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟದ ದಾಖಲೆಯನ್ನು ತಲುಪಿದೆ ಎಂದು ಮಾರುತಿ ಸುಜೂಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಯುವ ಭಾರತದಲ್ಲಿ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಹೊಸ ಡಿಸೈರ್ ಪೂರ್ಣಗೊಳಿಸುವುದನ್ನು ಮುಂದುವರೆಸಲಿದೆ ಎಂದು ಮಾರುತಿ ಸುಜೂಕಿ ಸಂಸ್ಥೆಯ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಕಾರ್ಯಕಾರಿ ನಿರ್ದೇಶಕ ಆರ್ ಎಸ್ ಕಲ್ಸಿ ಹೇಳಿದ್ದಾರೆ.
ಮಾರುತಿ ಸುಜೂಕಿಯ ಆಟೋ ಗೇರ್ ಶಿಫ್ಟ್ (ಎಜಿಎಸ್) ತಂತ್ರಜ್ಞಾನಕ್ಕೆ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಶೇ.17 ರಷ್ಟು ಡಿಸೈರ್ ಗ್ರಾಹಕರು ಎಜಿಎಸ್ ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.