ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ X ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ?
ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ X ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.
ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ X ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.
ರಾಯಲ್ ಎನ್ಫೀಲ್ಡ್ ನ ಥಂಡರ್ಬರ್ಡ್ X ಬೈಕ್ ನ ಪ್ರಾರಂಭಿಕ ಬೆಲೆ 1.57-1.99 ಲಕ್ಷವಾಗಿದ್ದು, 350 ಸಿಸಿ ಬೈಕ್ ಕೆಂಪು, ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದರೆ ನೀಲಿ ಹಾಗೂ ಕಿತ್ತಳೆ ಬಣ್ಣದಲ್ಲಿ 500 ಸಿಸಿ ಬೈಕ್ ಲಭ್ಯವಿದ್ದು, ನಗರ ಪ್ರದೇಶಗಳಲ್ಲಿ ಪ್ರಯಾಣಿಸುವುದಕ್ಕೆ ತಕ್ಕಂತೆ ಥಂಡರ್ಬರ್ಡ್ ನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ ಇಡಿ ಹೆಡ್ ಲೈಟ್ ಸೌಲಭ್ಯ ಕಲ್ಪಿಸಲಾಗಿದೆ. 8 ಸ್ಪೋಕ್ ಅಲಾಯ್ ಚಕ್ರಗಳು ಹೊಸ ಬದಲಾವಣೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.