ಸಾಂದರ್ಭಿಕ ಚಿತ್ರ 
ವಾಹನ

ಚಳಿಗಾಲದಲ್ಲಿ ಐಷಾರಾಮಿ, ಹನಿಮೂನ್ ಸ್ಥಳಗಳಿಗೆ ಹೋಗುವವರು ಅಧಿಕ ಮಂದಿ: ಗೂಗಲ್ ಇಂಡಿಯಾ

2017ರ ಚಳಿಗಾಲದಲ್ಲಿ ರಜಾದಿನಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ಶೇಕಡಾ 27ರಷ್ಟು ಹೆಚ್ಚಾಗಿದ್ದು....

ನವದೆಹಲಿ: 2017ರ ಚಳಿಗಾಲದಲ್ಲಿ ರಜಾದಿನಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ಶೇಕಡಾ 27ರಷ್ಟು ಹೆಚ್ಚಾಗಿದ್ದು, ಬಹುತೇಕ ಮಂದಿ ಐಷಾರಾಮಿ, ಹನಿಮೂನ್ ಮತ್ತು ಸಫಾರಿ ಸ್ಥಳಗಳನ್ನು ಗೂಗಲ್ ನಲ್ಲಿ ಹುಡುಕಿದ್ದಾರೆ ಎಂದು ಕಂಪೆನಿ ಹೇಳಿದೆ.
ಸೇಶೆಲ್ಸ್, ಮಾಲ್ಡೀವ್ಸ್ ಮತ್ತು ಬಾಲಿ ಸ್ಥಳಗಳು ಹನಿಮೂನ್ ಹೋಗುವವರಿಗೆ ಅತಿ ಪ್ರಾಧಾನ್ಯ ಸ್ಥಳಗಳಾಗಿದ್ದು, ಶೇಕಡಾ 40ರಷ್ಟು ಆನ್ ಲೈನ್ ನಲ್ಲಿ ಹುಡುಕುವವರ ಸಂಖ್ಯೆ ಜಾಸ್ತಿಯಾಗಿದ್ದು ಎಂದು ಅಂತಾರಾಷ್ಟ್ರೀಯ ಹುಡುಕಾಟದ ಸಂಸ್ಥೆಯಾದ ಗೂಗಲ್ ಹೇಳಿದೆ.
ಗೂಗಲ್ ಇಂಡಿಯಾ ಪ್ರಕಾರ, ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಹೆಚ್ಚು ಮಂದಿ ಗೂಗಲ್ ನಲ್ಲಿ ಪ್ರವಾಸ ಹೋಗುವ ಸ್ಥಳಗಳನ್ನು ಹುಡುಕಿದ್ದು ಅಂತಾರಾಷ್ಟ್ರೀಯ ಮತ್ತು ದೇಶದ ಲಕ್ಷುರಿ ಹುಡುಕಾಟ ಶೇಕಡಾ 34ರಷ್ಟು ಹೆಚ್ಚಾಗಿದೆ ಮತ್ತು ಆನ್ ಲೈನ್ ನಲ್ಲಿ ರೊಯಲ್ ಹಾಲಿಡೇಸ್ ಕಳೆದ ವರ್ಷಕ್ಕಿಂತ 12 ಪಟ್ಟು ಜಾಸ್ತಿಯಾಗಿದೆ.
ಮರುಭೂಮಿ ಸಫಾರಿ ದುಬೈಯಲ್ಲಿ,ಸಿಂಗಾಪುರದಲ್ಲಿ ನೈಟ್ ಸಫಾರಿ, ಬಾಲಿ ಸಫಾರಿ ಮತ್ತು ಮರಿನ್ ಪಾರ್ಕ್ ಮತ್ತು ಬಾಂಕಾಂಕ್ ನಲ್ಲಿ ಸಫಾರಿ ವರ್ಲ್ಡ್ ಗಳಿಗೆ ಹೋಗುವುದು ಕೂಡ ಹೆಚ್ಚಾಗಿದೆ. ವಾಟಿಕನ್ ಗೆ ಹೋಗುವವರ ಸಂಖ್ಯೆ 8 ಪಟ್ಟು ಹೆಚ್ಚಾಗಿದ್ದು ಮ್ಯಾನ್ಮಾರ್ ಗೆ ಹೋಗುವವರ ಸಂಖ್ಯೆ 3 ಪಟ್ಟು ಮತ್ತು ಹಂಗಾರಿಗೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. 
ಭಾರತದೊಳಗೆ ಪ್ರವಾಸ ಹೋಗುವ ಪಟ್ಟಿಯಲ್ಲಿ ಕೇರಳಕ್ಕೆ ಮೊದಲ ಆದ್ಯತೆಯಿದ್ದು, ನಂತರ ದೆಹಲಿಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಭಾರತೀಯರು ಇತ್ತೀಚಿನ ದಿನಗಳಲ್ಲಿ ದೇಶದೊಳಗೆ ಪ್ರವಾಸ ಹೋಗುವವರು ಕೊನೆ ಕ್ಷಣದಲ್ಲಿ ಟಿಕೆಟ್ ಕಾಯ್ದಿರಿಸುವುದು ಶೇಕಡಾ 17ರಷ್ಟು ಕಡಿಮೆಯಾಗಿದ್ದು, ವಿದೇಶಗಳಿಗೆ ಹೋಗುವವರು ಕೊನೆ ಕ್ಷಣದಲ್ಲಿ ಬುಕ್ಕಿಂಗ್ ಮಾಡುವವರು ಶೇಕಡಾ 20ರಷ್ಟು ಕಡಿಮೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT