ಸಾಂದರ್ಭಿಕ ಚಿತ್ರ 
ವಾಹನ

ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 3ರಷ್ಟು ಕುಸಿತ

ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 2.96ರಷ್ಟು ಕುಸಿದಿದ್ದು, ಒಟ್ಟು 2,91,806 ವಾಹನಗಳನ್ನು ಮಾರಾಟ ಮಾಡಲಾಗಿದೆ.

ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 2.96ರಷ್ಟು ಕುಸಿದಿದ್ದು, ಒಟ್ಟು 2,91,806 ವಾಹನಗಳನ್ನು ಮಾರಾಟ ಮಾಡಲಾಗಿದೆ.
2018 ಮಾರ್ಚ್ ತಿಂಗಳಲ್ಲಿ 3,00,722 ವಾಹನಗಳು ಮಾರಾಟವಾಗಿದ್ದವು. 
2018ರ ಮಾರ್ಚ್ ನಲ್ಲಿ ಒಟ್ಟು 1.91 ದೇಶೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟವಾಗಿತ್ತು. ಆದರೆ ಈ ವರ್ಷ 1.77 ಲಕ್ಷ ಕಾರು ಮಾರಾಟವಾಗಿ ಶೇಕಡಾ 6.87ರಷ್ಟು ಕುಸಿತ ಕಂಡಿದೆ ಎಂದು ಸೋಮವಾರ ಭಾರತೀಯ ವಾಹನ ಉತ್ಪಾದಕರ ಸೊಸೈಟಿ (ಎಸ್ಐಎಎಂ) ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.
ವಾಣಿಜ್ಯ ವಾಹನಗಳ ಮಾರಾಟ ಶೇಕಡಾ 0.28ರಷ್ಟು ಬೆಳವಣಿಗೆ ಕಂಡಿದೆ. 2019 ಮಾರ್ಚ್ ತಿಂಗಳಲ್ಲಿ ಒಟ್ಟು 1,09,030 ವಾಹನ ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1,08,730 ವಾಹನಗಳು ಮಾರಾಟವಾಗಿದ್ದವು. ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟ ಕೂಡ ಶೇಕಡಾ 8.54ರಷ್ಟು ಮತ್ತು 17.31ರಷ್ಟು ಕ್ರಮವಾಗಿ ಕುಸಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ