ನವೀಕೃತ ವಿನ್ಯಾಸದಲ್ಲಿ ಸುಝುಕಿ ಸ್ಕೂಟರ್ ಬಿಡುಗಡೆ; ಆಕ್ಸೆಸ್ 125 ಬೆಲೆ 61,788 ರೂ.
ಸುಝುಕಿ ಮೋಟಾರ್ ಸೈಕಲ್ ನ ಆಕ್ಸೆಸ್ 125ನ ನೂತನ ಮಾದರಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ...
ನವದೆಹಲಿ: ಸುಝುಕಿ ಮೋಟಾರ್ ಸೈಕಲ್ ನ ಆಕ್ಸೆಸ್ 125ನ ನೂತನ ಮಾದರಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ಅದರ ಶೋರೂಂ ಬೆಲೆ 61, 788 ರೂಪಾಯಿಗಳಾಗಿದೆ.
ಹೊಸ ಆವೃತ್ತಿಯು ಕಪ್ಪು ಬಣ್ಣದ ಲೋಹಮಿಶ್ರಿತ ಚಕ್ರ, ಬೀಜ್ ಬಣ್ಣದ ಚರ್ಮದ ಸೀಟು, ದುಂಡಗಿನ ಆಕಾರದ ಕ್ರೋಮ್ ಕನ್ನಡಿಗಳು ನೂತನ ಮಾದರಿಯ ಸ್ಕೂಟರ್ ನಲ್ಲಿ ಇರುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿರುವಾಗ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಡಿಸಿ ಸಾಕೆಟ್ ಗಳನ್ನು ಒದಗಿಸಲಾಗಿದೆ.
ಸುಝುಕಿ ಕಂಪೆನಿಯ ಸ್ಕೂಟರ್ ನಲ್ಲಿ ಆಕ್ಸೆಸ್ 124 ಮಾದರಿ ಜನಪ್ರಿಯವಾಗಿದ್ದು ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕಂಪೆನಿಯ ಉಪಾಧ್ಯಕ್ಷ ದೇವಶಿಶ್ ಹೊಂಡಾ ತಿಳಿಸಿದ್ದಾರೆ.
ಸುಝುಕಿ 124ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಶಕ್ತಿ, ವಿನ್ಯಾಸ ಮತ್ತು ಸವಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ಮೈಲೇಜ್ ಕೊಡುತ್ತದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.