ಕಾರು ಪ್ರಿಯರಿಗೆ ಸಿಹಿ ಸುದ್ದಿ: ಮಾರುತಿ ಸುಜುಕಿ ಬಲೆನೊ ಕಾರಿನ ಬೆಲೆ 1 ಲಕ್ಷ ರೂ. ಇಳಿಕೆ
ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.
ಇತ್ತೀಚಿಗಷ್ಟೇ ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್(ಡೀಸೆಲ್), ಸೆಲೆರಿಯೋ, ಇಗ್ನಿಸ್, ಸ್ವಿಪ್ಟ್ ಡಿಸೈರ್(ಡೀಸೆಲ್), ವಿಟಾರ ಬ್ರೀಜಾ ಮತ್ತು ಎಸ್ ಕ್ರಾಸ್ ಕಾರುಗಳ ಬೆಲೆಯಲ್ಲಿ 5 ಸಾವಿರ ಕಡಿತ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆ ಈಗ ಜನಪ್ರಿಯ ಬಲೆನೊ ಕಾರಿನ ಬೆಲೆಯನ್ನುಕಡಿತ ಮಾಡಿದೆ.
ಬಲೆನೊ ಕಾರಿನ ಬೆಲೆ 8.88 ಲಕ್ಷ ರೂ. ಆಗಿದ್ದು, ಇಂದಿನಿಂದ ಈ ಕಾರಿನ ಬೆಲೆ ಒಂದು ಲಕ್ಷ ಕಡಿತವಾಗಲಿದೆ ಎಂದು ಕಂಪನಿ ತಿಳಿಸಿದೆ.
ಸದ್ಯ ದೆಹಲಿಯಲ್ಲಿ ಮಾರುತಿ ಸುಜುಕಿ ಬಾಲೆನೊ ಆರ್ ಎಸ್ ಮಾದರಿಯ ಎಕ್ಸ್ ಶೋ ರೂಂ ಬೆಲೆ ರೂ. 8.88 ಲಕ್ಷ ರೂ. ಇದ್ದು, ಅದು ಈಗ 7.88 ಲಕ್ಷ ರೂಪಾಯಿಗೆ ಇಳಿಕೆಯಾಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.