ಟಾಟಾ ಮೋಟಾರ್ಸ್ ಹೊಸ ವಾಹನಗಳು 
ವಾಹನ

Auto Expo 2025: Tata Motors 32 ಹೊಸ ವಾಹನಗಳ ಅನಾವರಣ

ಟಾಟಾ ಮೋಟಾರ್ಸ್ ವಾಣಿಜ್ಯ ವಿಭಾಗದಲ್ಲಿ 14 ಹೊಸ ವಾಹನಗಳನ್ನು ಅನಾವರಣಗೊಳಿಸಿದ್ದು, ಬಸ್‌ಗಳ ಜೊತೆಗೆ ಮಿನಿ ಟ್ರಕ್‌ಗಳು ಮತ್ತು ಪಿಕಪ್‌ ವಾಹನಗಳಿಂದ ಮಧ್ಯಂತರ ಮತ್ತು ಹೆವಿ ಟ್ರಕ್‌ಗಳವರೆಗೆ ಆರು ವಿದ್ಯುತ್ ವಾಹನಗಳನ್ನು ಪ್ರಸ್ತುತಪಡಿಸಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2025ರಲ್ಲಿ ಟಾಟಾ ಮೋಟಾರ್ಸ್ ಶುಕ್ರವಾರ ತನ್ನ 32 ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಅನಾವರಣಗೊಳಿಸಿತು.

ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಟಾಟಾ ಮೋಟಾರ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು, 'ಬದಲಾಯಿಸಲಾಗದ ಜಾಗತಿಕ ಮೆಗಾಟ್ರೆಂಡ್ ಆಗಿರುವ ಹಸಿರು ಶಕ್ತಿ ಮತ್ತು ಚಲನಶೀಲತೆಯ ಕಡೆಗೆ ತ್ವರಿತ ಬದಲಾವಣೆಯು ಶುದ್ಧ, ಶೂನ್ಯ-ಹೊರಸೂಸುವಿಕೆ ವಾಹನಗಳ ಅಗತ್ಯವನ್ನು ಎಂದಿಗಿಂತಲೂ ಹೆಚ್ಚು ತುರ್ತು ಮಾಡಿದೆ ಎಂದು ಹೇಳಿದ್ದಾರೆ.

"ಅಸಾಧಾರಣ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಅನುಕೂಲತೆಯನ್ನು ನೀಡುವ ಸ್ಮಾರ್ಟ್, ಸಮಗ್ರ ಪರಿಹಾರಗಳೊಂದಿಗೆ ನಾವು ಭಾರತದಲ್ಲಿ ಈ ಕ್ರಾಂತಿಯನ್ನು ಮುನ್ನಡೆಸುತ್ತಿದ್ದೇವೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ, 50 ಕ್ಕೂ ಹೆಚ್ಚು ಮುಂದಿನ ಪೀಳಿಗೆಯ ವಾಹನಗಳು, ದೂರದೃಷ್ಟಿಯ ಪರಿಕಲ್ಪನೆಗಳು ಮತ್ತು ಬುದ್ಧಿವಂತ ಪರಿಹಾರಗಳನ್ನು ಅನಾವರಣಗೊಳಿಸಲು ನಾವು ಹೆಮ್ಮೆಪಡುತ್ತೇವೆ" ಎಂದು ಅವರು ಹೇಳಿದರು.

ಟಾಟಾ ಮೋಟಾರ್ಸ್ ವಾಣಿಜ್ಯ ವಿಭಾಗದಲ್ಲಿ 14 ಹೊಸ ವಾಹನಗಳನ್ನು ಅನಾವರಣಗೊಳಿಸಿತು. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರು ಬಸ್‌ಗಳ ಜೊತೆಗೆ ಮಿನಿ ಟ್ರಕ್‌ಗಳು ಮತ್ತು ಪಿಕಪ್‌ ವಾಹನಗಳಿಂದ ಮಧ್ಯಂತರ ಮತ್ತು ಹೆವಿ ಟ್ರಕ್‌ಗಳವರೆಗೆ ಆರು ಶೂನ್ಯ-ಹೊರಸೂಸುವಿಕೆ ವಿದ್ಯುತ್ ವಾಹನಗಳನ್ನು ಪ್ರಸ್ತುತಪಡಿಸುತ್ತಿರುವುದಾಗಿ ಹೇಳಿದರು. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ, ಟಾಟಾ ಮೋಟಾರ್ಸ್ 18 ಹೊಸ ಕಾರುಗಳು ಮತ್ತು ಎಸ್‌ಯುವಿಗಳನ್ನು ಅನಾವರಣಗೊಳಿಸಿದೆ.

"ಟಾಟಾ ಮೋಟಾರ್ಸ್‌ನ ಅತ್ಯಂತ ಶಕ್ತಿಶಾಲಿ ಮತ್ತು ತಾಂತ್ರಿಕವಾಗಿ ಮುಂದುವರಿದ ಎಸ್‌ಯುವಿ ಹ್ಯಾರಿಯರ್. ಇವಿಯನ್ನು ನಾವು 'ರಿಮೋಟ್ ತಂತ್ರಜ್ಞಾನದ ಮೂಲಕ ಅನಾವರಣಗೊಳಿಸಿದ್ದೇವೆ." ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.

ಇತರವುಗಳಲ್ಲಿ, ಕಂಪನಿಯು ಆಲ್-ನ್ಯೂ ಟಾಟಾ ಸಿಯೆರಾವನ್ನು ಅನಾವರಣಗೊಳಿಸಿತು. ಇದನ್ನು ಮೊದಲು 1991 ರಲ್ಲಿ ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ' ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್

‘ಅವರ ಕೈಗೆ ರಕ್ತ ಅಂಟಿದೆ’: SIR ಸಂಬಂಧಿತ 40 ಸಾವುಗಳನ್ನು ಉಲ್ಲೇಖಿಸಿ CECಗೆ ಟಿಎಂಸಿ ತರಾಟೆ

5 ದಶಕಗಳ ಹಿಂದೆಯೇ ಉಡುಪಿ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಿ ಮೋದಿ

BBK ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ಧ್ರುವಂತ್: ತಾಳ್ಮೆ ಕಳೆದುಕೊಂಡ ಧನುಷ್, ಸೂರಜ್ ಮುಂದೇನಾಯ್ತು? Video!

ಹರಿಯಾಣ ವಿವಿ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಪುರಾವೆ ಕೇಳಿದ ಆರೋಪ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

SCROLL FOR NEXT