ಕಾರು ಖರೀದಿಗೂ ಮುನ್ನ ಯೋಚಿಸಬೇಕಾದ ಅಂಶಗಳು 
ವಾಹನ

ಹೊಸ ಕಾರು ಖರೀದಿಸುತ್ತಿದ್ದೀರಾ..? ಈ 12 ಅಂಶಗಳ ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ!

ಸಾಮಾನ್ಯವಾಗಿ ಅಗತ್ಯವಿರುವುದರಲ್ಲಿ ಮಾತ್ರ ಹೂಡಿಕೆ ಮಾಡಿ ಮತ್ತು ಅದು ಮುಂದಿನ ದಿನಗಳಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನೂ ಪರಿಗಣಿಸಿ.

ಸಾಮಾನ್ಯವಾಗಿ ಅಗತ್ಯವಿರುವುದರಲ್ಲಿ ಮಾತ್ರ ಹೂಡಿಕೆ ಮಾಡಿ ಮತ್ತು ಅದು ಮುಂದಿನ ದಿನಗಳಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನೂ ಪರಿಗಣಿಸಿ. ಇದರಿಂದ ನಿಮ್ಮ ಬಜೆಟ್‌ ಅನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.

ಕಾರು ಅಂತಿಮಗೊಳಿಸುವ ಮೊದಲು ನಿಮ್ಮ ಅಗತ್ಯಗಳು, ಬಜೆಟ್, ಆರಾಮ, ಸುರಕ್ಷತೆ ಮತ್ತು ದೀರ್ಘಕಾಲೀನ ವೆಚ್ಚಗಳನ್ನು ಪರಿಶೀಲಿಸುವುದು ಮುಖ್ಯ. ಹೊಸ ಕಾರು ಖರೀದಿಸುವ ಮೊದಲು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ಇಲ್ಲಿವೆ.

1.ಉದ್ದೇಶ

ನೀವು ಕಾರಿನ ಮಾದರಿಯನ್ನು ಆಯ್ಕೆ ಮಾಡಲು ಕುಳಿತುಕೊಳ್ಳುವಾಗ, ಅದರ ಬಳಕೆಯ ಉದ್ದೇಶಕ್ಕೆ ಮೊದಲ ಆದ್ಯತೆ ನೀಡಿ. ಅಂದರೆ ನೀವು ಯಾವ ಉದ್ದೇಶಕ್ಕೆ ಕಾರು ಖರೀದಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.

ಅದು ಪ್ರತಿದಿನ ಬಳಕೆಯ ಕಾರಾಗಿರಬಹುದೇ? ಕೆಲವೊಮ್ಮೆ ದೂರ ಪ್ರಯಾಣಗಳಿಗೆ ಹೋಗಬೇಕೆಂದಿದ್ದೀರಾ? ಅಥವಾ ಕೇವಲ ದೂರ ಪ್ರಯಾಣಗಳಿಗಾಗಿ ಮಾತ್ರ ಖರೀದಿಸುತ್ತಿದ್ದೀರಾ? ಹೀಗೆ ಉದ್ದೇಶಕ್ಕೆ ಅನುಗುಣವಾಗಿ ಕಾರಿನ ಮಾದರಿ ಬದಲಾಗಬಹುದು.

ಉದಾಹರಣೆಗೆ, ಸೆಡಾನ್ ಅಥವಾ ಕ್ರೂಸ್ ಕಂಟ್ರೋಲ್ ಹೊಂದಿರುವ ಎಸ್‌ಯುವಿ ಕಾರುಗಳು ದೂರ ಪ್ರಯಾಣಗಳಿಗೆ ಉತ್ತಮವಾಗಿದ್ದರೆ, ನಗರದಲ್ಲಿ ದೈನಂದಿನ ಪ್ರಯಾಣಕ್ಕೆ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮ.

2. ಬಜೆಟ್

ಯಾವಾಗಲೂ ವಾಸ್ತವಿಕ ಬಜೆಟ್ ನಿಗದಿಪಡಿಸಿ ಮತ್ತು ಕೆಲವು ಹಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಅತ್ಯಾವಶ್ಯಕವಲ್ಲದಿದ್ದರೆ ಬಜೆಟ್ ಮೀರಬೇಡಿ. ಜೊತೆಗೆ, ಶೋರೂಮ್‌ನಲ್ಲಿ ನಿಮಗೆ ಹೇಳಿದ ಮೊತ್ತ ಮಾತ್ರ ಕಾರಿನ ಬಜೆಟ್ ಅಲ್ಲ.

ಹೆಚ್ಚುವರಿ ವೈಶಿಷ್ಟ್ಯಗಳ ವೆಚ್ಚ, ಕಾರು ವಿಮೆ, ಸಾಲದ ಬಡ್ಡಿ, ಪಾರ್ಕಿಂಗ್ ವೆಚ್ಚ, ನೋಂದಣಿ ಶುಲ್ಕ, ಹೆಚ್ಚುವರಿ ಫೀಚರ್‌ಗಳು ಮತ್ತು ಆಕ್ಸೆಸರಿಗಳು, ಪಾರ್ಕಿಂಗ್ ವೆಚ್ಚ, ನಿರ್ವಹಣಾ ವೆಚ್ಚಗಳು ಮತ್ತು ಇತರ ಖರ್ಚುಗಳೂ ಇದರಲ್ಲಿವೆ. ಇವೆಲ್ಲವೂ ಸೇರಿ ನಿಮ್ಮ ಕಾರು ಖರೀದಿ ಬಜೆಟ್ ಗೆ ಸೇರುತ್ತವೆ.

3. ಮಾಲೀಕತ್ವ ವೆಚ್ಚ

ಬಹಳಷ್ಟು ಜನರು ಖರೀದಿ ಬೆಲೆಯ ಮೇಲೆ ಮಾತ್ರ ಗಮನಹರಿಸಿ ದೀರ್ಘಕಾಲೀನ ವೆಚ್ಚಗಳನ್ನು ನಿರ್ಲಕ್ಷಿಸುತ್ತಾರೆ. ಬಹುತೇಕ ಜನರು ಕಾರಿನ ಖರ್ಚಿನ ಲೆಕ್ಕಾಚಾರ ಮಾಡುವಾಗ ಈ ಪ್ರಮುಖ ಅಂಶವನ್ನು ಕಡೆಗಣಿಸುತ್ತಾರೆ.

ಕಡಿಮೆ ಬೆಲೆಗೆ ಕಾರು ಸಿಕ್ಕರೂ, ಹೆಚ್ಚುವರಿ ನಿರ್ವಹಣಾ ವೆಚ್ಚದಿಂದ ಒಟ್ಟು ಖರ್ಚು ಹೆಚ್ಚಾಗಬಹುದು. ಇದರಲ್ಲಿ ಚಾಲನಾ ಪರವಾನಗಿ (ಇಲ್ಲದಿದ್ದರೆ), ಕಾರು ನೋಂದಣಿ, ಇಂಧನ ವೆಚ್ಚ, ಟೈರ್ ಬದಲಾವಣೆ, ನಿಯಮಿತ ಹಾಗೂ ತುರ್ತು ನಿರ್ವಹಣೆ, ವಿಮೆ ಪ್ರೀಮಿಯಂ ಮುಂತಾದವುಗಳು ಸೇರಿವೆ.

4.ಕಾರಿನ ಇಂಧನ ಮೂಲ

ನಿಮ್ಮ ಕಾರಿನ ಶಕ್ತಿ ಅಥವಾ ಇಂಧನ ಮೂಲ ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸಿ. ಅಂದರೆ ಪೆಟ್ರೋಲ್, ಡೀಸೆಲ್, ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ವಾಹನವೇ? ಕಾರು ಆಯ್ಕೆ ಮಾಡುವಾಗ ಮೊದಲೇ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಪರಿಸರಕ್ಕೂ ಹಾನಿಕಾರಕ. ಎಲೆಕ್ಟ್ರಿಕ್ ವಾಹನಕ್ಕೂ ನಿರಂತರ ಚಾರ್ಜಿಂಗ್ ಅಗತ್ಯವಿದೆ. ಆದ್ದರಿಂದ ದ್ರವ ಇಂಧನ ಅಥವಾ ಬ್ಯಾಟರಿ ಚಾಲಿತ ಎಂಜಿನ್ ಆಯ್ಕೆ ಮಾಡುವ ಮೊದಲು ಲಾಭ-ನಷ್ಟಗಳನ್ನು ಪರಿಗಣಿಸಿ.

ಪ್ರತಿಯೊಂದಕ್ಕೂ ತನ್ನದೇ ಆದ ಲಾಭ ಮತ್ತು ನಷ್ಟಗಳಿವೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ ಇಂಧನ ಬೆಲೆ ಏರಿಕೆ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಗಳಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಅಗತ್ಯವಿರುತ್ತದೆ. ಹೈಬ್ರಿಡ್ ವಾಹನಗಳು ಇಂಧನ ದಕ್ಷತೆ ಮತ್ತು ಅನುಕೂಲತೆಯ ಸಮತೋಲನ ನೀಡುತ್ತವೆ. ನಿಮ್ಮ ಚಾಲನಾ ಅಭ್ಯಾಸ ಮತ್ತು ಸ್ಥಳಕ್ಕೆ ಅನುಗುಣವಾಗಿ ಕಾರು ಆಯ್ಕೆ ಮಾಡಿ.

5. ಸುರಕ್ಷತೆ

ಬಹುತೇಕ ಜನರಿಗೆ ತಿಳಿದಿಲ್ಲ, ಆದರೆ ಕಾರುಗಳಿಗೆ ಸ್ವಂತ ಸುರಕ್ಷತಾ ವ್ಯವಸ್ಥೆಗಳಿರುತ್ತವೆ. ಇದರಲ್ಲಿ ಕ್ರ್ಯಾಶ್ ರೇಟಿಂಗ್, ಏರ್‌ಬ್ಯಾಗ್‌ಗಳು, ಫಸ್ಟೇಯ್ಡ್ ಕಿಟ್, ಮೌಂಟ್‌ಗಳು, ABS ಮತ್ತು ಸುರಕ್ಷತಾ ನಿಯಂತ್ರಣಗಳು, ಮಕ್ಕಳ ಸೀಟ್ ಮೌಂಟ್‌ಗಳು ಮುಂತಾದವುಗಳು ಸೇರಿವೆ.

ಇವೆಲ್ಲವೂ ಕಾರಿನಲ್ಲಿ ಇವೆಯೇ ಮತ್ತು ಅವು ಎಲ್ಲಿ ಇವೆ? ಎಂಬುದನ್ನು ತಿಳಿದುಕೊಳ್ಳಿ, ತುರ್ತು ಸಂದರ್ಭಗಳಲ್ಲಿ ವೇಗವಾಗಿ ಕ್ರಮ ಕೈಗೊಳ್ಳಲು ಇದು ಸಹಾಯಕ.

6. ವೈಶಿಷ್ಟ್ಯಗಳು

ಕೆಲವರು ಅನೇಕ ಹೆಚ್ಚುವರಿ ವೈಶಿಷ್ಟ್ಯಗಳನ್ನು ಕಾರಿಗೆ ಸೇರಿಸಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ ಪ್ರೀಮಿಯಂ ಲೈಟಿಂಗ್, ಅಡ್ವಾನ್ಸ್ ಇನ್ಫೋಟೈನ್‌ಮೆಂಟ್, ಅಲಂಕಾರಿಕ ಆಕ್ಸೆಸರಿಗಳು ಮತ್ತು ಸನ್‌ರೂಫ್ ಆಕರ್ಷಕವಾಗಿ ಕಾಣಬಹುದು, ಆದರೆ ನಿಜವಾಗಿಯೂ ಅದು ಬೇಕೇ? ಎಂದು ಯೋಚಿಸಿ.

ಹೆಚ್ಚುವರಿ ವೈಶಿಷ್ಟ್ಯಗಳಿಲ್ಲದೇ ನೀವು ಸುಖವಾಗಿದ್ದರೆ, ಅವನ್ನು ಅಳವಡಿಸಬೇಡಿ, ಏಕೆಂದರೆ ಅವು ಬಜೆಟ್ ಅನ್ನು ಬಹಳ ಹೆಚ್ಚಿಸುತ್ತವೆ. ನಿಜವಾಗಿಯೂ ಬೇಕಾದ ಮತ್ತು ನಿಯಮಿತವಾಗಿ ಬಳಸುವ ಫೀಚರ್‌ಗಳನ್ನು ಮಾತ್ರ ಆಯ್ಕೆಮಾಡಿ.

7. ಸರ್ವಿಸ್

ಕಾರು ಖರೀದಿಸಿದ ನಂತರ ಕಥೆ ಮುಗಿಯುವುದಿಲ್ಲ.. ವಾಸ್ತವವಾಗಿ ಅದು ಪ್ರಾರಂಭವಾಗುತ್ತದೆ. ಪ್ರತಿ 3-6 ತಿಂಗಳಿಗೊಮ್ಮೆ ಕಾರನ್ನು ಸರಿಯಾದ ವರ್ಕ್‌ಶಾಪ್‌ ಅಥವಾ ಸರ್ವಿಸ್ ಸೆಂಟರ್ ಗೆ ನಿರ್ವಹಣೆಗೆ ಕಳುಹಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಸುತ್ತಲಿನ ನಿಯಮಿತ ಹಾಗೂ ತುರ್ತು ಸೇವಾ ಕೇಂದ್ರ ಅಥವಾ ಸರ್ವಿಸ್ ಸೆಂಟರ್ ಗಳ ಬಗ್ಗೆ ತಿಳಿದುಕೊಳ್ಳಿ.

ಕಾರಿನ ಭಾಗಗಳು ಎಲ್ಲ ಸಿಗುತ್ತವೆ? ವಾರಂಟಿಯಲ್ಲಿ ಏನು ಒಳಗೊಂಡಿದೆ? ಹೀಗೆ ಖರೀದಿ ದಾಖಲೆಗಳಿಗೆ ಸಹಿ ಮಾಡುವ ಮೊದಲು ಈ ಪ್ರಶ್ನೆಗಳ ಉತ್ತರ ತಿಳಿದಿರಲಿ. ವಾರಂಟಿ ವ್ಯಾಪ್ತಿ, ಸರ್ವಿಸ್ ಪ್ಯಾಕೇಜ್ ವಿವರಗಳನ್ನು ಕೇಳಿ ಪಡೆಯಿರಿ ಮತ್ತು ಉತ್ತಮ ಸೇವಾ ವ್ಯವಸ್ಥೆ ಹಣ ಮತ್ತು ಸಮಯವನ್ನು ಉಳಿಸುತ್ತದೆ ಎಂಬುದು ನೆನಪಿರಲಿ.

8.ಮರುಮಾರಾಟ ಮೌಲ್ಯ

ಹಳೆಯ ಮತ್ತು ಬಳಕೆಯ ಕಾರುಗಳಿಗೆ ಮರುಮಾರಾಟ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯ ಇರಬಹುದು. ಕಾರು ಖರೀದಿಸುವಾಗ ಭವಿಷ್ಯದಲ್ಲಿ ಅದರ ಮೌಲ್ಯ ಎಷ್ಟು ಇರಬಹುದು ಎಂಬುದನ್ನು ಗಮನಿಸಿ.

ಬ್ರಾಂಡ್ ಖ್ಯಾತಿ, ಇಂಧನ ಪ್ರಕಾರ, ಬಣ್ಣ, ನಿರ್ವಹಣಾ ಇತಿಹಾಸ, ಕಾರಿನ ಒಟ್ಟು ಸ್ಥಿತಿ ಮುಂತಾದ ಅಂಶಗಳು ಮರುಮಾರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಕಾರುಗಳು ಬಳಸಿದ ಕಾರು ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯವನ್ನು ಉಳಿಸಿಕೊಳ್ಳುತ್ತವೆ.

9. ಟೆಸ್ಟ್ ಡ್ರೈವ್ ಮಾಡಿ

ಕಾರು ಖರೀದಿಸುವ ಮೊದಲು ಅದರ ಎಲ್ಲಾ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಸಮಗ್ರ ಟೆಸ್ಟ್ ಡ್ರೈವ್ ಮಾಡಿ. ವಿಶೇಷವಾಗಿ ಚಾಲಕನ ಸೀಟ್‌ನ ಆರಾಮ ಮತ್ತು ಸ್ಥಳಾವಕಾಶವನ್ನು ಪರಿಶೀಲಿಸಿ.

ಬ್ರೇಕ್‌ಗಳು ಎಷ್ಟು ಸುಗಮವಾಗಿ ಕೆಲಸ ಮಾಡುತ್ತವೆಯೇ? ದೃಶ್ಯತೆ ಎಷ್ಟು ಸ್ಪಷ್ಟವಾಗಿದೆ? ವಿಶೇಷವಾಗಿ ಮುಂಜಾನೆ ಪ್ರಯಾಣಗಳು ಅಥವಾ ರಸ್ತೆ ಪ್ರವಾಸಗಳಿಗೆ ಇದು ಮುಖ್ಯ. ನಾಜೂಕು ರಸ್ತೆಗಳಲ್ಲಿ ಮಾತ್ರವಲ್ಲ, ಗುಂಡಿಗಳು, ಟ್ರಾಫಿಕ್ ಮತ್ತು ಅಡ್ಡಿಗಳಿರುವ ರಸ್ತೆಗಳಲ್ಲಿ ಕೂಡ ಕಾರನ್ನು ಚಲಾಯಿಸಿ ಅದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಿ.

10. ರಿಯಾಯಿತಿಗಳ ಪರಿಶೀಲಿಸಿ

ಕಾರು ಖರೀದಿ ದೊಡ್ಡ ಹಣಕಾಸಿನ ವ್ಯವಹಾರ. ಆದ್ದರಿಂದ ಎಕ್ಸ್‌ಚೇಂಜ್ ಆಫರ್‌ಗಳು, ವಿಮೆ ಮಾತುಕತೆಗಳು, ರಿಯಾಯಿತಿಗಳು, ಡೀಲರ್ ಆಫರ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಮುಂತಾದವುಗಳ ಬಗ್ಗೆ ಸದಾ ಗಮನವಿರಲಿ. ಇದರಿಂದ ನಿಮ್ಮ ಬಜೆಟ್ ಕಡಿಮೆ ಮಾಡಿಕೊಳ್ಳಬಹುದು.

11. ಭಾವನಾತ್ಮಕ ಖರೀದಿ ಬೇಡ

ಮೊದಲ ಕಾರು ಖರೀದಿಸುವವರಿಗೆ ಕೆಲವೊಮ್ಮೆ ಭಾವನೆಗಳು ತಾರ್ಕಿಕತೆಯನ್ನು ಮೀರಬಹುದು. ಅಂತಹ ಪರಿಸ್ಥಿತಿಯನ್ನು ತಪ್ಪಿಸಿ. ಕಾರು ಚೆನ್ನಾಗಿ ಕಾಣುತ್ತದೆ ಅಥವಾ ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಮಾತ್ರ ಖರೀದಿಸಬೇಡಿ. ನಿಮ್ಮ ಕುಟುಂಬದ ಆರಾಮಕ್ಕಾಗಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ಖರೀದಿಸಿ.

12. ಭವಿಷ್ಯದ ಬಗ್ಗೆ ಯೋಚಿಸಿ

ಕಾರು ಖರೀದಿಸುವಾಗ ಮುಂದಿನ ಹತ್ತು ವರ್ಷಗಳಲ್ಲಿ ಅದರ ಮರುಮಾರಾಟ ಮೌಲ್ಯ ಹೇಗಿರಬಹುದು? ಕುಟುಂಬ ವಿಸ್ತಾರವಾದರೆ ದೊಡ್ಡ ಕಾರು ಬೇಕಾಗುತ್ತದೆಯೇ? ಇಂಧನದ ಬೆಲೆ ಏರಿದರೆ ಏನು? ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಪ್ರಾಯೋಗಿಕ, ಭವಿಷ್ಯೋನ್ಮುಖ ಮತ್ತು ಕೈಗೆಟುಕುವ ಖರೀದಿಯನ್ನು ಮಾಡಿ.

8–10 ವರ್ಷಗಳ ನಂತರವೂ ಕಾರಿಗೆ ಉತ್ತಮ ಮರುಮಾರಾಟ ಮೌಲ್ಯ ಇರುತ್ತದೆಯೇ? ಎಂದು ಗಮನಿಸಿ. ಮುಂಚಿತ ಯೋಚನೆ ನಿಮಗೆ ವ್ಯವಹಾರಿಕ, ಕೈಗೆಟುಕುವ ಮತ್ತು ಭವಿಷ್ಯಕ್ಕೆ ಅನುಗುಣವಾದ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR Stage 3: ಕರ್ನಾಟಕ ಸೇರಿ ಮೇ 30ರಿಂದ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಚುನಾವಣಾ ಆಯೋಗ

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

11 ಕೋಟಿ ಸಂಪಾದನೆ, 60 ಕೋಟಿ ಖರ್ಚು: Rahul Gandhi ವಿದೇಶ ಪ್ರವಾಸಗಳಿಗೆ ಹಣ ಕೊಡ್ತೀರೋದು ಯಾರು?: BJP ಪ್ರಶ್ನೆ

ಕೇರಳ ಸಸ್ಪೆನ್ಸ್ ಗೆ ಕೊನೆಗೂ ಬಿತ್ತು ತೆರೆ: ನೂತನ ಮುಖ್ಯಮಂತ್ರಿಯಾಗಿ VD Satheesan ಆಯ್ಕೆ

Affair Rumours: ಸಿಎಂ ವಿಜಯ್ ಅನುಮತಿಯಿದ್ದರೂ ಕೊನೆ ಕ್ಷಣದಲ್ಲಿ ‘ಕರುಪ್ಪ್’ರದ್ದು!

SCROLL FOR NEXT