ಮಾಡಿ ಮಡಿದವರು ಚಲನಚಿತ್ರದ ಸ್ಟಿಲ್ 
2014

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ: ಸಿನೆಮಾ ಕ್ಷೇತ್ರದ ದಿವಂಗತ ದಿಗ್ಗಜರ ನೆನಪಿನಲ್ಲಿ ಸಿನೆಮಾ ಪ್ರದರ್ಶನ

ಇತ್ತೀಚೆಗಷ್ಟೇ ಅಗಲಿದ ಖ್ಯಾತ ಸಿನೆಮಾ ದಿಗ್ಗಜರಾದ ಕೆ ಎಂ ಶಂಕರಪ್ಪ,

ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ಖ್ಯಾತ ಸಿನೆಮಾ ದಿಗ್ಗಜರಾದ ಕೆ ಎಂ ಶಂಕರಪ್ಪ, ಬಾಲು ಮಹೇಂದ್ರ, ಸಿ ಆರ್ ಸಿಂಹ ಮತ್ತು ಅಲೈ ರೆನೆ ನೆನಪಿನಲ್ಲಿ ಒಂದೊಂದು ಸಿನೆಮಾಗಳ ವಿಶೇಷ ಪ್ರದರ್ಶನವನ್ನು ಬಿಫ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪುಣೆಯ ಫಿಲ್ಮ್ ಮತ್ತು ಟೆಲಿವಿಶನ್ ಇನ್ಸ್ಟಿಟ್ಯುಟ್ ಖ್ಯಾತಿಯ ಕೆ ಎಂ ಶಂಕರಪ್ಪ ಅವರು ನಿರ್ದೇಶನ ಮಾಡಿದ್ದು ಒಂದೇ ಚಲನಚಿತ್ರ. ಅದೇ ಕನ್ನಡದ ಈ ಸಿನೆಮಾ "ಮಾಡಿ ಮಡಿದವರು". ಈ ಸಿನೆಮಾದ ಜೊತೆ ಫೆಬ್ರವರಿಯಲ್ಲಿ ದಿವಂಗತರಾದ ಖ್ಯಾತ ತಮಿಳು ನಿರ್ದೇಶಕ ಬಾಲು ಮಹೇಂದ್ರ ಅವರ ಚೊಚ್ಚಲ ನಿರ್ದೇಶನದ ಕನ್ನಡ ಚಲನಚಿತ್ರ "ಕೋಕಿಲಾ" ಕೊಡ ಪ್ರದರ್ಶನಗೊಳ್ಳುತ್ತಿದೆ.

ಮಾರ್ಚ್ ನಲ್ಲಿ ಅಗಲಿದ ಫ್ರೆಂಚ್ ನಿರ್ದೇಶಕ ಅಲೈ ರೆನೆ ಅವರ ನೆನಪಿನಲ್ಲಿ "ಲೈಫ್ ಆಫ್ ರಿಲೈ" ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಈ ಸಿನೆಮಾಗಳ ಜೊತೆಗೆ ಇತ್ತೀಚೆಗಷ್ಟೇ ನಮ್ಮನಗಲಿದ ಖ್ಯಾತ ರಂಗಕರ್ಮಿ ಸಿ ಆರ್ ಸಿಂಹ ಅವರ ನೆನಪಿನಲ್ಲಿ ಒಂದು ಚಲನಚಿತ್ರ ಮತ್ತು ಯು ಆರ್ ಅನಂತಮೂರ್ತಿ ಅವರ ಕಥೆ-ಕಾದಂಬರಿ ಆಧಾರಿತ ೫ ಚಲನಚಿತ್ರಗಳು ಪ್ರದರ್ಶನ ಕಾಣಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!