2014

ಬಿಫ್ಸ್ ಉದ್ಘಾಟನೆಗೆ ರಂಗ ಸಜ್ಜು: ಗೋವಿಂದ ನಿಹಲಾನಿ, ಸುಹಾಸಿನಿ, ಸುಭಾಶ್ ಘಾಯ್ ಗೌರವ ಅತಿಥಿಗಳು

Guruprasad Narayana

ಬೆಂಗಳೂರು: ೭ ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವಕ್ಕೆ (ಬಿಫ್ಸ್) ರಂಗ ಸಜ್ಜಾಗಿದೆ. ೪ ನೇ ಡಿಸೆಂಬರ್ ೨೦೧೪ ರಂದು ಸಂಜೆ ೫:೩೦ ಕ್ಕೆ ಡಾ. ಅಂಬೇಡ್ಕರ್ ಭವನದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ದೊರಕಲಿದೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಸಂಪರ್ಕ ಸಚಿವ ರೋಷನ್ ಬೇಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಮಯದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಅಂಬರೀಶ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಲೋಕಸಭಾ ಸದಸ್ಯ ಪಿ ಸಿ ಮೋಹನ್, ಬಿಬಿಎಂಪಿ ಮಹಾಪೌರ ಶಾಂತಕುಮಾರಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ ಎಚ್ ಡಿ ಗಂಗರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಸಿನೆಮಾ ದಿಗ್ಗಜರಾದ, ಖ್ಯಾತ ನಿರ್ದೇಶಕ ಮತ್ತು ಸಿನೆಮಾಟೋಗ್ರಾಫರ್ ಗೋವಿಂದ ನಿಹಲಾನಿ, ಖ್ಯಾತ ನಟಿ ಸುಹಾಸಿನಿ ಮಣಿರತ್ನಂ, ಬಾಲಿವುಡ್ ನ ಖ್ಯಾತ ನಿರ್ದೇಶಕ-ನಿರ್ಮಾಪಕ ಸುಭಾಶ್ ಘಾಯ್ ಮತ್ತು ಕನ್ನಡ ಚಿತ್ರ ನಟ ಯಶ್ ಗೌರವ ಅತಿಥಿಗಳು.

"ದಿ ಅಂಬಾಸೆಡರ್ ಟು ಬರ್ನ್" ಉದ್ಘಾಟನಾ ಚಲನಚಿತ್ರ

ಹಂಗೇರಿಯನ್ ಕ್ರಾಂತಿಯ ನಂತರದ ಒಂದು ಸತ್ಯ ಘಟನೆಯನ್ನಾದರಿಸಿದ ಈ ಚಲನಚಿತ್ರದ ನಿರ್ದೇಶಕ ಅಠ್ಠಿಲಾ ಶ್ಯಾಸ್. ಈ ಸಿನೆಮಾ ಮಾಂಟ್ರಿಯಲ್ ವಿಶ್ವ ಸಿನೆಮಾ ಪ್ರಶಸ್ತಿ ಪಡೆದಿದೆ.

SCROLL FOR NEXT