ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ 'ಅಗಸಿ ಪಾರ್ಲರ್' ಚಿತ್ರದ ಸ್ಟಿಲ್ 
2014

ಮಾಲ್ ಗಳಿಂದ ಸಿನಿಮೋತ್ಸವ ಸಂಭ್ರಮದ ವಾತಾವರಣ ಹಾಳು

ಏಳನೇ ಬೆಂಗಳೂರು ಅಂತರಾಷ್ಟ್ರೀಯ

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಅತ್ಯುತ್ತಮ ಸಿನೆಮಾ ಆಯ್ಕೆಗಳಿಂದ ಹಲವರ ಗಮನ ಸೆಳೆದಿದ್ದರೂ, ಬಹುತೇಕ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ಈ ಮಾಲ್ ಗಳು ಸಂಭ್ರಮದ ವಾತಾವರಣಕ್ಕೆ ತಡೆ ಹಾಕುತ್ತಿವೆ.

ತಮ್ಮ ಕೆಲಸ ಕಾರ್ಯ ಬಿಟ್ಟು, ಸಿನೆಮಾಗಳನ್ನು ನೊಡಲು ಬರುತ್ತಿದ್ದ ವಿಶ್ವ ಸಿನೆಮಾ ರಸಿಕರಿಗೆ, ಲಿಡೋ ಮತ್ತು ಫನ್ ಸಿನೆಮಾಸ್ ಮಾಲ್ ಗಳ ಈ ಸಿನೆಮಾ ಹಾಲ್ ಗಳು ತುಂಬಿ ಹೋಗುತ್ತಿದ್ದರಿಂದ ರಸಿಕರು ಸಿನೆಮಾ ನೋಡುವುದರಿಂದ ಅವಕಾಶ ವಂಚಿತವಾಗುವುದು ಸರ್ವೇ ಸಾಮಾನ್ಯವಾಗಿತ್ತು. ಖುರ್ಚಿಗಳ ಅಕ್ಕ ಪಕ್ಕ ಬಹುತೇಕ ಜಾಗ ಖಾಲಿ ಇದ್ದರೂ, 'ಮಾಲ್ ಸಂಸ್ಕೃತಿ'ಯ ಪ್ರಕಾರ ಆಸನಗಳನ್ನು ಹೊರತುಪಡಿಸಿ ಬೇರೆಲ್ಲೂ ಕೂರುವ ಹಾಗಿಲ್ಲ-ನಿಲ್ಲುವ ಹಾಗಿಲ್ಲ ಎಂಬ ಕಿರಿಕಿರಿಯ ನಿಯಮಗಳು ಸಂಭ್ರಮದ ವಾತಾವರಣಕ್ಕೆ ಹುಳಿ ಹಿಂಡುತ್ತಿದ್ದವು. ಹಾಗೇನಾದರು ಕೂತರೆ, ಪ್ರದರ್ಶನವನ್ನೇ ಸ್ಥಗಿತಗೊಳಿಸಿದ ಪ್ರಸಂಗಗಳು ನಡೆದವು. ಅಲ್ಲದೆ ಕೆಲವು ಸಾಲುಗಳನ್ನು ಗಣ್ಯರಿಗಾಗಿ ಮೀಸಲಿಟ್ಟು, ಅವರಿಗಿಂತ ಮೊದಲೇ ಬಂದ ಜನ ಸಾಮಾನ್ಯರಿಗೆ ಅವಕಾಶ ವಂಚಿತರಾಗಿ ಮಾಡಿದ ಘಟನೆಗಳು ಜನರಿಗೆ ಆಕ್ರೋಶ ತರಿಸಿದವು.

ಇದಕ್ಕೆ ಹೋಲಿಸಿದರೆ, ವಾರ್ತಾ ಇಲಾಖೆ ಅಡಿಯಲ್ಲಿರುವ ಸುಲೋಚನ , ಪ್ರಿಯದರ್ಶಿನಿ ಚಿತ್ರಮಂದಿರಗಳಲ್ಲಿ ಮತ್ತು ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ ನಡೆದ ಪ್ರದರ್ಶನಗಳು ಹಿತಕರವಾಗಿದ್ದವು. ಆದರೆ ಇಲ್ಲಿ ನಡೆಯುತ್ತಿರುವ ಪ್ರದರ್ಶನಗಳು ಕಡಿಮೆ ಹಾಗೂ ಸಾಮಾನ್ಯವಾಗಿ ಹಿನ್ನೋಟದ ಅಥವಾ ಒಂದು ದೇಶವನ್ನು ಪ್ರತಿನಿಧಿಸುವ ಚಿತ್ರಗಳು ಹೆಚ್ಚು  ಅಂದರೆ, ಚಿತ್ರೋತ್ಸವದ ಸ್ಪರ್ಧೆಯಲ್ಲಿರುವ ಮತ್ತು ಪ್ರೇಕ್ಷರು ನೋಡಲು ತವಕಿಸುವ ಹೆಚ್ಚಿನ ಸಿನೆಮಾಗಳು ಪ್ರದರ್ಶನಗೊಳ್ಳುತ್ತಿರುವುದು ಈ ಮಾಲ್ ಗಳಲ್ಲೇ.

ಮಾಲ್ ನಲ್ಲಿ ಸಿನೆಮಾ ತೋರಿಸುತ್ತಿರುವುದು ಸರಿಯಲ್ಲ : ನಿರ್ದೇಶಕ ಬಿ ಎಂ ಗಿರಿರಾಜ್

ಸಿನೆಮೋತ್ಸವಕ್ಕೆ ಬಂದಿದ್ದ, ಜಟ್ಟ ಸಿನೆಮಾ ಖ್ಯಾತಿಯ ನಿರ್ದೇಶಕ ಬಿ ಎಂ ಗಿರಿರಾಜ್ ಅವರು ಈ ವರ್ಷದ ಸಿನೆಮಾಗಳ ಆಯ್ಕೆಯ ಬಗ್ಗೆಯೂ ಸ್ವಲ ಬೇಸರ ವ್ಯಕ್ತಪಡಿಸಿದರಲ್ಲದೆ, ಮಾಲ್ ಗಳಲ್ಲಿ ಸಿನೆಮಾಗಳನ್ನು ತೋರಿಸುತ್ತಿರುವುದರಿಂದ, 'ಮಾಲ್ ಸಂಸ್ಕೃತಿ'ಯ ಬಗ್ಗೆ  ಒಲವಿಲ್ಲದವರನ್ನು ಸಿನೆಮಾ ವೀಕ್ಷಣೆಯಿಂದ ದೂರವಿಟ್ಟಂತೆ. ಇಂತಹ ಸೊಫೆಸ್ಟಿಕೇಟೆಡ್  ಪರಿಸರ ನನಗೆ ಇಷ್ಟವಾಗುವುದಿಲ್ಲ. ಆದುದರಿಂದ ನಾನು ನೋಡಿದಷ್ಟು ದಿನ ಹೆಚ್ಚೆಚ್ಚು ಸಿನೆಮಾಗಳನ್ನು ಚಾಮುಂಡೇಶ್ವರಿ ಅಥವಾ ಸುಲೋಚನ ಚಿತ್ರಮಂದಿರಗಳಲ್ಲೆ ನೋಡಿದ್ದು. ಅಲ್ಲಿ ಯಾವುದೇ ರೀತಿಯ ಅತಾರ್ಕಿಕ ನಿರ್ಬಂಧಗಳಿರಲಿಲ್ಲ. ಸಿನೆಮಾ ನೋಡಿ ಸುಲಭವಾಗಿ ಕೂತು ಚರ್ಚಿಸಬಹುದಿತ್ತು. ಅಲ್ಲದೆ ಆ ಚಿತ್ರಮಂದಿರಗಳ ಹೊರಗೆ ತಳ್ಳುವ ಗಾಡಿಗಳಲ್ಲಿ ನನ್ನ ಶಕ್ತಿಗನುಸಾರವಾದ ಊಟ ದೊರಕುತ್ತಿತ್ತು. ಆದರೆ ದುರದೃಷ್ಟ ಎಂದರೆ ಒಳ್ಳೆಯ ಸಿನೆಮಾಗಳೆಲ್ಲಾ ಮಾಲ್ ಗಳಲ್ಲೇ ತೋರಿಸುತ್ತಿದ್ದಾರೆ. ದಕ್ಷಿಣ ಕೊರಿಯಾ ದೇಶದ ಸಿನೆಮಾಗಳನ್ನು ಪ್ರತಿನಿಧಿಸುವಾಗ 'ಓಲ್ಡ್ ಬಾಯ್' ಸಿನೆಮಾ ಖ್ಯಾತಿಯ ಪಾರ್ಕ್ ಚಾನ್ ವೂಕ್ ನಂತಹ ನಿರ್ದೇಶಕರನ್ನು ನಿರ್ಲಕ್ಷಿಸಬಾರದಿತ್ತು. ಆದರೂ ಕೆಲವು ಅತ್ಯುತ್ತಮ ಸಿನೆಮಾಗಳು ಪ್ರದರ್ಶನಗೊಂಡಿವೆ. ನನಗೆ ಇಷ್ಟವಾದ ಎರಡು ಸಿನೆಮಾಗಳು 'ಮೆಲ್ಬರ್ನ್' ಮತ್ತು 'ಸೈಲೆನ್ಸಡ್'.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT