ಬೆಂಗಳೂರು: ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ ರು.50,000 ಗಳು ಆರ್ಥಿಕ ನೆರವನ್ನು ಜೀವನೋಪಾಯಕ್ಕಾಗಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಯೋಜನೆಗಳು
- ಇತರೆ ಜಾತಿಯ ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹವಾದಲ್ಲಿ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನವನ್ನು 50 ಸಾವಿರದಿಂದ 2 ಲಕ್ಷಕ್ಕೆ ಏರಿಸಲಾಗಿದೆ.
- ಪರಿಶಿಷ್ಟ ಜಾತಿ ಹೆಣ್ಣು ಮಕ್ಕಳನ್ನು ಇತರೆ ಜಾತಿಯ ಪುರುಷರು ವಿವಾಹವಾದರೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹಧನವನ್ನು 1 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ.
- ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ರು.6 ಲಕ್ಷ ಗಳವರೆಗೆ ಇದ್ದಲ್ಲಿ 100 ರಷ್ಟು ಹಾಗೂ ರು.6 ಲಕ್ಷಗಳಿಂದ 15 ಲಕ್ಷ ರು.ಗಳವರೆಗೆ ಇದ್ದಲ್ಲಿ ಶೇ.50 ರಷ್ಟು ಶುಲ್ಕ ನೀಡಲಾಗುವುದು.
- ಡಾ.ಅಂಬೇಡ್ಕರ್ ಚಾರಿಟೆಬಲ್ ಅಂಡ್ ಎಜುಕೇಷನ್ ಟ್ರಸ್ಟ್ ಧಾರವಾಡದ ಮುಖಾಂತರ ಸ್ಮಾರಕ ನಿರ್ಮಿಸಲು ರು.3 ಕೋಟಿಗಳನ್ನು ಒದಗಿಸಲಾಗುವುದು.
- ಆದಿವಾಸಿಗಳ ಅಭಿವೃದ್ದಿಗಾಗಿ ಅವರ ಸಮುದಾಯಗಳ ಕಲೆ, ಸಂಸ್ಕೃತಿ ಭಾಷೆ ಮತ್ತು ಇತರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಉಳಿಸಿಕೊಳ್ಳುವ ಸಲುವಾಗಿ ಮೈಸೂರು ಗಿರಿಜನ ಸಂಶೋಧನಾ ಸಂಸ್ಥೆಯಲ್ಲಿ ಒಂದು ಘಟಕವನ್ನಾಗಿ ಸ್ಥಾಪಿಸಲಾಗುವುದು.