ಬೆಂಗಳೂರು: 2015-16ನೇ ಸಾಲಿನ ಬಜೆಟ್ ಆರಂಭವಾಗಿದ್ದು, ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಣಮಟ್ಟ ಶಿಕ್ಷಣ ನೀಡಲು 24 ಮಹಿಳಾ ಮತ್ತು 27 ಸಹ ಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದಾರೆ.
ಉನ್ನತ ಶಿಕ್ಷಣ:
ಬಜೆಟ್ ಮಂಡನೆ ವೇಳೆ ಈಗಾಗಲೇ ಖಾಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 2160 ಬೋಧಕ ಹುದ್ದೆಗಳನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 71 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 44 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 10 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 10 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಹೊಸ ಉದ್ದಿಮೆಗಳನ್ನು ಹುಟ್ಟುಹಾಕುವ ವಿದ್ಯಾರ್ಥಿಗಳು ಬ್ಯಾಂಕಿನಿದ ಪಡೆಯುವ ವಾರ್ಷಿಕ 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಯನ್ನು 3 ವರ್ಷಗಳವರೆಗೆ ಸರ್ಕಾರ ಭರಿಸುವುದು. ಇದಕ್ಕಾಗಿ 10 ಕೋಟಿ ರು.ಗಳನ್ನು ಒದಗಿಸುತ್ತದೆ.
ಅಲ್ಲದೆ, ಎಲ್ಲಾ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಪಾವತಿಸುತ್ತಿರುವ ವ್ಯಾಸಂಗ ಮತ್ತು ಪ್ರಯೋಗಾಲಯ ಶುಲ್ಕವನ್ನು ಮನ್ನಾ ಮಾಡಿದ್ದು, ಈ ಯೋಜನೆಯಿಂದ ಸುಮಾರು 1.15 ಲಕ್ಷ ವಿದ್ಯಾರ್ಥಿನಿಯರಿಗೆ ಅನುಕೂಲವಾಗುತಂಹ ಯೋಜನೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ
• ಪ್ರಸ್ತಾಪಿತ 6 ವೈದ್ಯಕೀಯ ಶಿಕ್ಷಣ ಕಾಲೇಜುಗಳ ಕಾರ್ಯಾರಂಭ.
• ಕಲಬುರ್ಗಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ - 15 ಕೋಟಿ ರೂ.
• ಬೆಂಗಳೂರಿನ ಮೂತ್ರಪಿಂಡ ರೋಗ ಚಿಕಿತ್ಸಾ ಸಂಸ್ಥೆಯಲ್ಲಿ(ನೆಫ್ರಾಲಜಿ ಇನ್‍ಸ್ಟಿಟ್ಯೂಟ್) ಮೂತ್ರಪಿಂಡ ಕಸಿ ಕಾರ್ಯಕ್ರಮ ಜಾರಿ - 2 ಕೋಟಿ ರೂ.