ನವದೆಹಲಿ: ದೇಶದಲ್ಲಿ ವ್ಯವಹಾರ-ಉದ್ದಿಮೆ ತ್ವರಿತವಾಗಿ ಪ್ರಾರಂಭಿಸಲು ಕಾನೂನು ಅಡೆತಡೆಗಳನ್ನು ಸರಳಗೊಳಿಸಲು ತಜ್ಞರ ಹೊಸ ಸಮಿತಿಯನ್ನು ರಚಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
"ವ್ಯವಹಾರ ಪ್ರಾರಂಭಿಸಲು ಹಲವಾರು ಪರವನಾಗಿ ಪಡೆಯಬೇಕಿರುವುದರಿಂದ ಇದನ್ನು ಸರಳಗೊಳಿಸಿ ಹೊಸ ಕಾಯ್ದೆಯನ್ನು ರಚಿಸಲು ತಜ್ಞರ ಹೊಸ ಸಮಿತಿಯನ್ನು ನೇಮಿಸಲು ನಾನು ಮುಂದಾಗಿದ್ದೇನೆ" ಎಂದು ಕೇಂದ್ರ ಯೂನಿಯನ್ ಬಜೆಟ್ ೨೦೧೫ ಪ್ರಸ್ತುತ ಪಡಿಸುವ ವೇಳೆ ತಿಳಿಸಿದ್ದಾರೆ.
"ನಾವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಾದರೆ ಭಾರತವನ್ನು ಹೂಡಿಕೆದಾರರ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು" ಎಂದಿದ್ದಾರೆ ಜೇಟ್ಲಿ.