ನವದೆಹಲಿ: ಕರ್ನಾಟಕದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಮಂಡಿಸಿದ ಎನ್‌ಡಿಎ ಸರ್ಕಾರದ 2015-16ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಐಐಟಿ ಘೋಷಿಸಲಾಗಿದೆ.
ಹಣಕಾಸು ಸಚಿವರು ಮತ್ತೆ ಐದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಗಳನ್ನು ಘೋಷಿಸಿದ್ದು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು, ಹಿಮಾಚಲ ಪ್ರದೇಶ ಹಾಗೂ ಬಿಹಾರದಲ್ಲಿ ಮತ್ತೊಂದು ಏಮ್ಸ್ ಸ್ಥಾಪಿಸುವುದಾಗಿ ಜೇಟ್ಲಿ ಹೇಳಿದ್ದಾರೆ. ಅಲ್ಲದೆ ಅರುಣಾಚಲ ಪ್ರದೇಶದಲ್ಲಿ ಫಿಲಂ ಸ್ಕೂಲ್ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.