ವಿಕಲಚೇತನರಿಗೆ ಚೈತನ್ಯ ತುಂಬುವ ಕೆಲಸ ಇಲ್ಲಾಗಿದೆ. ಇವರಿಗೆ ರು. 25,000 ವರೆಗೆ ತೆರಿಗೆಯಲ್ಲಿ ವಿನಾಯಿತಿ ಲಭಿಸಿದೆ. ಅಂದರೆ, ಇದುವರೆಗೆ ಇದ್ದ ರು. 50,000
ಮಿತಿಯನ್ನು ರು. 75,000ಕ್ಕೆ ಹೆಚ್ಚಿಸಲಾಗಿದೆ. ತೀವ್ರ ಅಂಗವೈಕಲ್ಯ ಸಮಸ್ಯೆ ಹೊಂದಿರುವವರಿಗೆ ರು. 1ಲಕ್ಷದಿಂದ ರು. 1.25 ಲಕ್ಷಕ್ಕೆ ಮಿತಿ ಹೆಚ್ಚಿಸಲಾಗಿದೆ.
ವಿಮೆ ಪಾಲಿಸಿ
ಜನರ ಆರೋಗ್ಯದ ಬಗ್ಗೆ ಈ ಬಾರಿ ತುಂಬಾ ಕಾಳಜಿ ಮೆರೆಯಲಾಗಿದೆ. ಆರೋಗ್ಯ ವಿಮಾ ಪಾಲಿಸಿ ಮೇಲೆ ಈ ವರೆಗೆ ಇದ್ದ ರು. 15000 ಮಿತಿಯನ್ನು ರು. 25,000ಕ್ಕೆ
ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಇದ್ದ ರು. 20000 ಮಿತಿಯಿಂದ ರು. 30,000ಕ್ಕೆ ಹೆಚ್ಚಳ ಮಾಡಲಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯನಾಗರಿಕರಿಗೆ ಕಾನೂನಿನನ್ವಯ ಆರೋಗ್ಯ ವಿಮೆ ಮಾಡಿಸಲು ಬರುವುದಿಲ್ಲ. ಹೀಗಾಗಿ ಅವರಿಗೆ ರು. 30,000 ವರೆಗೆ ವ್ಯಯ ಮಾಡಲಾಗಿರುವ ವೈದ್ಯಕೀಯ ವೆಚ್ಚವನ್ನು ತೆರಿಗೆ ವಿನಾಯಿತಿ ವ್ಯಾಪ್ತಿಗೆ ಒಳಪಡಿಸಲಾಗುವುದು. ಈ ವಿಷಯದಲ್ಲಿ ಹಿರಿಯ ನಾಗರಿಕರಿಗೂ ಕೊಡುಗೆ ನೀಡಲಾಗಿದ್ದು, ರು. 80000 ವರೆಗಿನ ವೈದ್ಯಕೀಯ ವೆಚ್ಚವನ್ನು ತೆರಿಗೆ ವಿನಾಯಿತಿಗೆ ಬಳಸಿಕೊಳ್ಳಬಹುದು.
ಸುಕನ್ಯಾ ತಂದ ಸುರಕ್ಷೆ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಹಣ ಹೂಡಿ. ಎಲ್ಲ ರೀತಿಯ ತೆರಿಗೆಯಿಂದ ವಿನಾಯಿತಿ ಪಡೆಯಿರಿ. ಇದು ಕೇಂದ್ರ ಕೊಟ್ಟಿರುವ ಹೊಸ ಆಫರ್ . 80ಸಿ
ಕಾಯ್ದೆ ಯಡಿ ಈ ಯೋಜನೆಯನ್ನು ಘೋಷಿಸಲಾಗಿದ್ದು, ಇಲ್ಲಿ ಹೂಡಲಾಗಿರುವ ಬಡ್ಡಿದರ ಮತ್ತು ಹೂಡಿಕೆ ಮೇಲೆ ಸಂಪೂರ್ಣ ರಿಯಾಯಿತಿಯನ್ನು ನೀಡುವ ಕೊಡುಗೆಯನ್ನು
ನೀಡಲಾಗಿದೆ. ಸುಕನ್ಯಾ ಸಮೃದ್ಧಿ ಯೋ ಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಏಳ್ಗೆಗಾಗಿಇದನ್ನು ಈ ಜನವರಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು.
ಪಿಂಚ ಕಜ್ಜಾಯ
ಪಿಂಚಣಿದಾರರಿಗೂ ಕಜ್ಜಾಯವನ್ನು ಉಣಬಡಿಸಲಾ ಗಿದೆ. 80ಸಿ ಕಾಯ್ದೆ ಯಡಿ ರು. 50 ಸಾವಿರ ಮಿತಿಯನ್ನುಹೆಚ್ಚಿಸಲಾಗಿದೆ. ಇದು ಹೊಸ ಪಿಂಚಣಿದಾರರ ಪಾಲಿಗೆ ವರವಾಗಿ ಪರಿಣಮಿಸಿದ್ದು, ಈಗಿರುವ ರು. 1 ಲಕ್ಷದಿಂದ ರು. 1.50 ಲಕ್ಷಕ್ಕೆ ಮಿತಿಯನ್ನು ಹೆಚ್ಚಿಸಲಾಗಿದೆ.