ಸಿದ್ದರಾಮಯ್ಯ 
ರಾಜ್ಯ ಬಜೆಟ್

ಸಿಎಂ ಬಜೆಟ್ ಮಂಡನೆ ವೇಳೆ ಪವರ್ ಕಟ್; ಕತ್ತಲೆ ಭಾಗ್ಯ ಎಂದ ಜಗದೀಶ್ ಶೆಟ್ಟರ್!

ವಿದ್ಯುತ್ ಅಭಾವದ ಬಿಸಿ ಶುಕ್ರವಾರ ಶಕ್ತಿಕೇಂದ್ರ ವಿಧಾನಸೌಧಕ್ಕೂ ತಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ...

ಬೆಂಗಳೂರು: ವಿದ್ಯುತ್ ಅಭಾವದ ಬಿಸಿ ಶುಕ್ರವಾರ ಶಕ್ತಿಕೇಂದ್ರ ವಿಧಾನಸೌಧಕ್ಕೂ ತಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2016-17ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದ ವೇಳೆ ಎರಡು ಬಾರಿ ವಿದ್ಯುತ್ ಹೋಗಿಬಂತು. ಇದರಿಂದ ಸಿದ್ದರಾಮಯ್ಯ ಕೆಲಕಾಲ ಭಾಷಣ ಓದಲು ಪರದಾಡಬೇಕಾಯಿತು.
ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಬಾರಿ ಕತ್ತಲ ಭಾಗ್ಯ ದೊರೆತಿದೆ ಎಂದು ವ್ಯಂಗ್ಯವಾಡಿದರು. 
ಇನ್ನು ಪವರ್ ಹೋಗಿದ್ದು ರಾಜ್ಯದ ದುಸ್ಥಿತಿ ತೋರುತ್ತಿದೆ ಎಂದು ಜೆಡಿಎಸ್ ನ ಎಚ್.ಡಿ.ರೇವಣ್ಣ ಅವರು ತಿರುಗೇಟು ನೀಡಿದರು.
ರಾಹುಕಾಲದಲ್ಲಿ ಬಜೆಟ್ ಮಂಡಿಸಿದ್ದರಿಂದಲೇ ಪವರ್ ಕಟ್ ಆಯ್ತು ಎಂದು ಗೋವಿಂದ ಕಾರಜೋಳ ವ್ಯಂಗ್ಯವಾಡಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಆ ರೀತಿ ಮಾತನಾಡಬೇಡಿ ಎಂದು ಹೇಳಿ, ಬಜೆಟ್ ಭಾಷಣ ಮುಂದುವರಿಸಿದರು.
ಬಜೆಟ್ ಮಂಡನೆ ವೇಳೆ ವಿದ್ಯುತ್ ಕೈಕೊಟ್ಟಿದ್ದರಿಂದ ಸಿದ್ದರಾಮಯ್ಯ ಅವರು ಅಧಿಕಾರಿಯೊಬ್ಬರ ಮೊಬೈಲ್ ಫ್ಲ್ಯಾಶ್ ಲೈಟ್ ನಲ್ಲಿ ಭಾಷಣ ಓದಲು ಯತ್ನಿಸಿದ್ದರು. ಬಳಿಕ ವಿದ್ಯುತ್ ಬಂದಾಗ ಭಾಷಣ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ವ್ಯಂಗ್ಯವಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT