ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮಂಡಿಸಿದ 4ನೇ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,464 ಕೋಟಿ ರುಪಾಯಿ ಅನುದಾನ ಘೋಷಿಸಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ 125ನೇ ಜಯಂತಿ ಬೃಹತ್ ಮಟ್ಟದಲ್ಲಿ ಆಚರಣೆ. ಎಸ್ ಸಿ, ಎಸ್ ಟಿ ಪ್ರತಿ ವಿದ್ಯಾರ್ಥಿ ಮಾಸಿಕ ಭೋಜನ ವೆಚ್ಚ 800 ರಿಂದ 1000 ರುಪಾಯಿಗೆ ಹೆಚ್ಚಳ. ಹೋಬಳಿ ಮಟ್ಟದಲ್ಲಿ 125 ಹೊಸ ವಸತಿ ಶಾಲೆಗಳು ಆರಂಭ. 1ರಿಂದ 5ನೇ ರ್ಯಾಂಕ್ ಪಡೆದ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ. ಸಿಎ ಹಾಗೂ ಐಸಿಡಬ್ಲ್ಯೂ,ಕಂಪನಿ ಸೆಕ್ರೇಟರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹಧನ, 50 ಸಾವಿರ ಹಾಗೂ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 8 ಕೋಟಿ ,ಮೈಸೂರು ನಗರದಲ್ಲಿ 60 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ
ಹಂಪಿ ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ. 5 ಸರ್ಕಾರಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ. ಕರ್ನಾಟಕ ಚಿತ್ರಕಲಾ ಪರಿಷತ್ ಗೆ 1.5 ಕೋಟಿ ರೂಪಾಯಿ ಅನುದಾನ.