ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2016-17 ನೇ ಸಾಲಿನ ಬಜೆಟ್ ನಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆಗೆ 7, 922 ಕೋಟಿ ರುಗಳನ್ನು ಮೀಸಲಿರಿಸಲಾಗಿದೆ.
ಈ ಪೈಕಿ ಕೊಡಗು ಜಿಲ್ಲೆಗಳ ರಸ್ತೆ ಅಭಿವೃದ್ಗಿಗೆ 50 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಬೆಂಗಳೂರಿನಲ್ಲಿ 51.56 ಕಿ.ಮೀಟರ್ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ ಮತ್ತು ಬಿಎಂಟಿಸಿಗಾಗಿ 660 ಬಸ್ ಖರೀದಿಗೆ ನಿರ್ಧಾರಿಸಲಾಗಿದೆ. ಇದಲ್ಲದೆ 3 ಹೊಸ ಬೆಂಗಳೂರು ಒನ್ ಸ್ಥಾಪನೆ ಒತ್ತು ನೀಡಲಾಗಿದೆ.
ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆನ್‌ಲೈನ್ ಮೂಲಕ ಕೆಎಎಲ್ ಮತ್ತು ಡಿಎಲ್ ವಿತರಣೆಗೆ ಕ್ರಮ. ಬಿಎಂಟಿಸಿ ಸೇವೆಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿ. ಎಲ್ಲಾ ಡಿಪೋಗಳಲ್ಲಿ ಸಿಸಿಟಿವಿ. ಸಾರಿಗೆ 1656 ಕೋಟಿ ರೂಪಾಯಿ . ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆನ್‌ಲೈನ್ ಮೂಲಕೆಎಎಲ್ ಮತ್ತು ಡಿಎಲ್ ವಿತರಣೆ.ಬಿಎಂಟಿಸಿ ಸೇವೆಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿ. ಎಲ್ಲಾ ಡಿಪೋಗಳಲ್ಲಿ ಸಿಸಿಟಿವಿ ಕಡ್ಡಾಯಕ್ಕೆ ಯೋಜನೆ ರೂಪಿಸಲಾಗಿದೆ.
ಇನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-3ರಲ್ಲಿ 2795 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅರ್ಹವಾಗಿರುವ 1520 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 3500 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಆರಂಭಿಸ ಕ್ರಮ ಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ರಾಷ್ಟ್ರೀಯ ಹೆದ್ದಾರಿ 212ರ ಕೊಳ್ಳೇಗಾಲ-ಕೇರಳ ಗಡಿವರೆಗಿನ 130 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ರು.585 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸರ್ಕಾರ ಯೋಜಿಸಿದೆ.
ಕಾರವಾರ ಬಂದರಿನ ಉತ್ತರ ಭಾಗದಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕಾಗಿ 125 ಕೋಟಿ ಮೀಸಲಿರಿಸಲಾಗಿದೆ. ಇನ್ನು ರಾಜ್ಯದ ವಿವಿಧ ರೈಲ್ವೇ ಯೋಜನೆಗಳಿಗಾಗಿ 2014-15ನೇ ಸಾಲಿನಲ್ಲಿ 441 ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ 588 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ.ಇನ್ನು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಒಟ್ಟಾರೆಯಾಗಿ 780 ಕೋಟಿ ರು.ಗಳನ್ನು ಒದಗಿಸಲಾಗಿದೆ.
ಹೈ ಕರ್ನಾಟಕ ಅಭಿವೃದ್ದಿಗೆ 1 ಸಾವಿರ ಕೋಟಿ ರುಪಾಯಿ ಅನುದಾನ. ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ15 ಕೋಟಿ. ಮಲೆನಾಡ ಪ್ರದೇಶಾಭಿವೃದ್ದಿಗೆ 50 ಕೋಟಿ, ಬಯಲು ಸೀಮೆ ಅಭಿವೃದ್ದಿಗೆ 45 ಕೋಟಿ ರುಗಳನ್ನು ಮೀಸಲಿರಸಲಾಗಿದೆ.