ಕೇಂದ್ರ ಬಜೆಟ್ 2016: ಯಾವುದು ಅಗ್ಗ ಯಾವುದು ತುಟ್ಟಿ
ನವದೆಹಲಿ: ಕೇಂದ್ರ ಆಡಳಿತಾರೂಢ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2016-17ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡನೆ ಮಾಡಿದ್ದು, ಬಜೆಟ್ ನಲ್ಲಿ ಘೋಷಣೆಯಾದಂತೆ ಯಾವುದರ ಬೆಲೆ ಅಗ್ಗ, ಯಾವುದರ ಬೆಲೆ ತುಟ್ಟಿ ಎಂಬುದರ ಬಗೆಗಿನ ವಿವರ ಇಲ್ಲಿದೆ...
ತುಟ್ಟಿಯಾದದ್ದು...
- ಐಷಾರಾಮಿ ಕಾರುಗಳ ಮೇಲೆ ಶೇ.4 ರಷ್ಟು ಹೆಚ್ಚಳ
- ಪೆಟ್ರೋಲ್, ಡೀಸೆಲ್ ನ ಸೆಸ್ ಹೆಚ್ಚಳ
- ಐಷಾರಾಮಿ, ಲಕ್ಸುರಿ ಹಾಗೂ ಎಸ್ ಯುವಿ ಕಾರುಗಳ ಬೆಲೆ ಏರಿಕೆ
- ಬೀಡಿಯೊಂದು ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ
- ಬ್ರ್ಯಾಂಡೆಡ್ ಬಟ್ಟೆಗಳಾದ ಶರ್ಟು, ಪ್ಯಾಂಟು, ಮಹಿಳಾ ಉಡುಪುಗಳ ಬೆಲೆ ಏರಿಕೆ
- ಚಿನ್ನಾಭರಣ, ವಜ್ರಗಳು ಇನ್ನು ಮತ್ತಷ್ಟು ದುಬಾರಿ
- ದುಬಾರಿಯಾದ ಎಟಿಎಂ
- ಜಿಮ್, ಹೋಟೆಲ್ ಗಳು, ರೇಡಿಯೋ ಟ್ಯಾಕ್ಸಿ, ಜೀವ ವಿಮೆ
- ಸಿಗರೇಟು, ಗುಟ್ಕಾ ಹಾಗೂ ಇನ್ನಿತರೆ ತಂಬಾಕುಗಳ ಬಲೆ ಏರಿಕೆ
ಅಗ್ಗವಾದದ್ದು...
- 60 ಚದರ ಮೀಟರ್ ವರೆಗೂ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
- ಇಪಿಎಫ್ ಒ ನೀಡುವ ಸೇವೆಗಳಲ್ಲಿ ಸೇವಾ ತೆರಿಗೆ ಅನ್ವಯವಿಲ್ಲ.
- ಪುರುಷ ಪ್ರಿಯ ಮದ್ಯದ ಮೇಲೆಯೂ ಯಾವುದೇ ಅಬಕಾರಿ ಸುಂಕ ಹೆಚ್ಚಳವಿಲ್ಲ.
- ಡಯಾಲಿಸೀಸ್ ಯಂತ್ರಗಳ ಮೇಲಿನ ತೆರಿಗೆ ಇಳಿಕೆ
- ಸಣ್ಣ ತೆರಿಗೆದಾರರಿಗೆ ನಿರಾಳ. ಮನೆ ಬಾಡಿಗೆ ಭತ್ಯೆ ಮಿತಿ ವಾರ್ಷಿಕ ರು.24 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ.