ಆರ್ಥಿಕ ಸಮೀಕ್ಷೆ (ಸಂಗ್ರಹ ಚಿತ್ರ)
ನವದೆಹಲಿ: ಫೆ.1 ರಂದು 2017-18 ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಶೇ.6.75-7.5 ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ ಇದೆ ಎಂದಿದ್ದಾರೆ.
ಆರ್ಥಿಕ ಸಮೀಕ್ಷೆಯಲ್ಲಿ ಕಾರ್ಮಿಕ ಹಾಗೂ ತೆರಿಗೆ ನೀತಿಗಳನ್ನು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುವಂತಾಗಲು ಜಾರಿಗ ತರಬೇಕಿರುವ ಸುಧಾರಣೆಗಳ ಶಿಫಾರಸು ಪ್ರಮುಖವಾಗಿದೆ. ಇನ್ನು ಚಾಲ್ತಿ ಖಾತೆ ಕೊರತೆ 2016-17 ನೇ ಸಾಲಿನ ಮೊದಲಾರ್ಧದಲ್ಲಿ ಕಡಿಮೆಯಾಗಿದ್ದು ಜಿಡಿಪಿಯ ಶೇ.0.3 ರಷ್ಟಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಮುಂದಿಟ್ಟಿರುವ ಆರ್ಥಿಕ ಸಮೀಕ್ಷೆ ವರದಿ, ಕೇಂದ್ರೀಕೃತ ಸಾರ್ವಜನಿಕ ವಲಯದ ಸ್ವತ್ತು ಪುನರ್ವಸತಿ ಸಂಸ್ಥೆ ಸ್ಥಾಪನೆಗೂ ಸಹ ಸಲಹೆ ನೀಡಿದೆ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ತೈಲ ಬೆಲೆ ಕುಸಿತದಿಂದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು 2016-17 ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.