ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಡಿಸಲಿರುವ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರ ಷರತ್ತು ಬದ್ಧ ಕೃಷಿ ಸಾಲ, ಗರ್ಭೀಣಿರಿಗೆ ಮಾಸಿಕ 6 ಸಾವಿರ ರೂ. ಗೌರವ ಧನ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮತ್ತಿತರ ಹಲವು ಜನಪರ ಯೋಜನೆಗಳು ಜಾರಿಯಾಗುವ ನಿರೀಕ್ಷೆಯಿದೆ.
ರೈತರ ಸಾಲಮಿತಿಯನ್ನು ಗರಿಷ್ಠಮಿತಿ 2 ರಿಂದ ಮೂರು ಲಕ್ಷ ರೂಪಾಯಿವರೆಗೂ ನಿಗದಿಗೊಳಿಸುವ ಸಾಧ್ಯತೆ ಇದೆ. ಕೃಷಿಯೇತರ ಆದಾಯ ಹೊಂದಿದ್ದು ಆದಾಯ ತೆರಿಗೆ ಪಾವತಿಸುವವರು ಸಾಲ ಮನ್ನಾ ಯೋಜನೆಯಡಿ ಅರ್ಹರಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಇದರ ಹೊರತಾಗಿ ಸಮಾಜದ ಇತರ ವರ್ಗಗಳಿಗಾಗಿ ಕೆಲವೊಂದು ಗಿಪ್ಟ್ ನೀಡಲಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಶಾಲೆಗಳ ಬಾಲಕಿಯರಿಗೆ ನೀಡುವ ಉಚಿತ ನ್ಯಾಪ್ ಕಿನ್ ಕಾರ್ಯಕ್ರಮವನ್ನು ಕಾಲೇಜು ಹಾಗೂ ತಾಂತ್ರಿಕ ಸಂಸ್ಥೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ. ಮಹಿಳಾ ಪೊಲೀಸರಿಗೆ ವಿಶೇಷ ಭತ್ಯೆ , ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್, ಮಂಡ್ಯ ಅಥವಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಸ್ರೆಲ್ ಮಾದರಿ ಬೇಸಾಯ ಪದ್ಧತಿ , ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೇರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.