ಬೆಂಗಳೂರಿನಲ್ಲಿ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ: ಬುಕಿಂಗ್ ನಂಬರ್ ಸ್ವಿಚ್ ಆಫ್; ಹೆಚ್ಚಿದ ಆತಂಕ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿದ್ದು, ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
West Asia conflict: Bengaluru LPG consumers engage in panic booking
ಎಲ್‌ಪಿಜಿ
Updated on

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದೆಂಬ ಆತಂಕದ ನಡುವೆ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಹಲವಾರು ಗ್ಯಾಸ್ ಏಜೆನ್ಸಿಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ವಿಚಾರಣೆ ಹೆಚ್ಚಾಗಿದ್ದು, ಬುಧವಾರ ವಿತರಕರು ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್‌ ಇಲ್ಲ ಎಂದು ಹೇಳಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿದ್ದು, ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಎಲ್‌ಪಿಜಿ ಡೀಲರ್ ಪಿಟಿಐಗೆ ತಿಳಿಸಿದ್ದಾರೆ.

ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮಲ್ಲಿರುವ ಗ್ಯಾಸ್ ಸ್ಟಾಕ್ ಖಾಲಿಯಾದ ನಂತರ ಬಂದ್ ಮಾಡಬೇಕಾಗುತ್ತದೆ ಎಂದು ಪುನರುಚ್ಚರಿಸಿದ್ದಾರೆ.

West Asia conflict: Bengaluru LPG consumers engage in panic booking
ರಾಜ್ಯದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ: ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ

ಈ ಮಧ್ಯೆ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ ಉಂಟಾಗಿದ್ದು, ಹಲವು ಗ್ರಾಹಕರು ಬುಕಿಂಗ್ ಗೆ ಯತ್ನಿಸಿದ್ದು, ಈ ವೇಳೆ ಬುಕಿಂಗ್ ನಂಬರ್ ಸ್ವಿಚ್ ಆಫ್ ಎಂದು ಬಂದಿದೆ. ಹೀಗಾಗಿ ಗ್ರಾಹಕರು ತೀವ್ರ ಆತಂಕಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡೇನ್ ವಿತರಕ ಗಿರಿಧರ್ ಏಜೆನ್ಸಿಗಳ ಪ್ರತಿನಿಧಿ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲ ಎಂದು ಹೇಳಿದ್ದಾರೆ.

"ಪ್ರತಿದಿನ ನಮಗೆ ಲೋಡ್‌ಗಳು ಬರುತ್ತಿವೆ. ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲ. ಆದಾಗ್ಯೂ, ಸಾಕಷ್ಟು ಸ್ಟಾಕ್ ಇದೆಯೇ ಎಂದು ವಿಚಾರಿಸಲು ಗ್ರಾಹಕರಿಂದ ನಮಗೆ ಹಲವಾರು ಪ್ಯಾನಿಕ್ ಕರೆಗಳು ಬರುತ್ತಿವೆ. ಬುಕಿಂಗ್‌ಗಾಗಿ ಕರೆಗಳು ಸಹ ಹೆಚ್ಚಿವೆ" ಎಂದು ಅವರು ತಿಳಿಸಿದ್ದಾರೆ.

ಸಾಕಷ್ಟು ಲೋಡ್‌ಗಳು ನಿಯಮಿತವಾಗಿ ಬರುತ್ತಿವೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಗ್ರಾಹಕರಿಗೆ ಭರವಸೆ ನೀಡಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷ ಹೆಚ್ಚುತ್ತಿರುವ ಕಾರಣ ಪೂರೈಕೆಯಲ್ಲಿ ಅಡ್ಡಿ ಉಂಟಾಗಬಹುದೆಂಬ ಭಯದಿಂದ ಅನೇಕ ಗ್ರಾಹಕರು ಮುಂಚಿತವಾಗಿಯೇ ಗ್ಯಾಸ್ ಬುಕಿಂಗ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಸಿಲಿಂಡರ್ ಗ್ಯಾಸ್ ಏಜೆನ್ಸಿ ಬಾಲಾಜಿ ಸ್ಟೋರ್ಸ್‌ನ ರವಿ ಗೌಡ, ಕಳೆದ ಎರಡು ದಿನಗಳಿಂದ ಎಲ್‌ಪಿಜಿ ಲಭ್ಯತೆಯ ಬಗ್ಗೆ ಅಂಗಡಿಗೆ ಅನೇಕ ವಿಚಾರಣೆಯ ಕರೆಗಳು ಬರುತ್ತಿವೆ. "ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಗೆ ಸಂಬಂಧಿಸಿದಂತೆ ನಮಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಪ್ರಸ್ತುತ ನಮ್ಮಲ್ಲಿ ಸಾಕಷ್ಟು ಸ್ಟಾಕ್ ಇದೆ. ನಾವು ಪ್ರತಿದಿನವೂ ಸ್ಟಾಕ್ ಪಡೆಯುತ್ತಿದ್ದೇವೆ ಮತ್ತು ಅದನ್ನು ತುರ್ತು ಆಧಾರದ ಮೇಲೆ ತಲುಪಿಸುತ್ತೇವೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com