ಹೊಸ ಮನೆಗೆ LPG ಗ್ಯಾಸ್ ಕನೆಕ್ಷನ್ ಶಿಫ್ಟ್ ಮಾಡಿಕೊಳ್ಳುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು?

ಮನೆ ಬದಲಿಸಿದಾಗ ಎಷ್ಟೋ ಕೆಲಸಗಳು ಇರುತ್ತವೆ. ಅದರಲ್ಲಿ ಮುಖ್ಯವಾದದ್ದು LPG ಗ್ಯಾಸ್ ಕನೆಕ್ಷನ್ ವರ್ಗಾವಣೆ. ಹೊಸ ಕನೆಕ್ಷನ್ ತೆಗೆದುಕೊಳ್ಳುವ ಬದಲು ಹಳೆಯ ಕನೆಕ್ಷನ್ ಅನ್ನು ಹೊಸ ವಿಳಾಸಕ್ಕೆ ವರ್ಗಾಯಿಸಿಕೊಳ್ಳುವುದು ತುಂಬಾ ಸುಲಭ. ಆ ಕುರಿತ ವರದಿ ಇಲ್ಲಿದೆ:
How to Transfer LPG Gas Connection to New Address Online and Offline
ಹೊಸ ಮನೆಗೆ LPG ಗ್ಯಾಸ್ ಕನೆಕ್ಷನ್ ಶಿಫ್ಟ್AI Image
Updated on: 

ಉದ್ಯೋಗ, ಮಕ್ಕಳ ಓದು ಅಥವಾ ಬೇರೆ ಕಾರಣಕ್ಕೆ ಮನೆ ಬದಲಾಯಿಸಿದಾಗ ಮೊದಲು ನೆನಪಾಗುವುದು ಎಲ್ ಪಿಜಿ ಸಿಲಿಂಡರ್. ಹೊಸ ಊರಿನಲ್ಲಿ ಹೊಸ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಬೇಕಾ ಅಥವಾ ಹಳೆಯ ಕನೆಕ್ಷನ್ ವರ್ಗಾವಣೆ ಮಾಡಿಕೊಳ್ಳಬಹುದಾ ಎಂದು ಅನೇಕರಿಗೆ ಗೊಂದಲ ಇರುತ್ತದೆ. ವಾಸ್ತವವಾಗಿ ಹಳೆಯ ಕನೆಕ್ಷನ್ ರದ್ದು ಮಾಡಿ ಹೊಸದಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ಇರುವ ಕನೆಕ್ಷನ್ ಅನ್ನು ಹೊಸ ವಿಳಾಸಕ್ಕೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು. ಅದನ್ನು ಆನ್ ಲೈನ್ ನಲ್ಲೂ ಮಾಡಬಹುದು, ಗ್ಯಾಸ್ ಏಜೆನ್ಸಿಗೆ ಹೋಗಿಯೂ ಮಾಡಬಹುದು. ಮನೆ ಬದಲಾಯಿಸುವ ಮುನ್ನವೇ ವರ್ಗಾವಣೆಗೆ ಅರ್ಜಿ ಹಾಕಿದರೆ ಹೊಸ ಮನೆಯಲ್ಲಿ ಗ್ಯಾಸ್ ಗೆ ತೊಂದರೆ ಆಗುವುದಿಲ್ಲ. ಆ ಕುರಿತ ವರದಿ ಇಲ್ಲಿದೆ:

ವಾಸದ ಸ್ಥಳ ಬದಲಾಯಿಸಿದಾಗ ಅಲ್ಲಿಗೆ LPG ಸಿಲಿಂಡರ್ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ, ಏನೆಲ್ಲ ದಾಖಲೆಗಳು ಬೇಕು?

  • ಒಂದೇ ಏರಿಯಾದಲ್ಲಿ ಮನೆ ಬದಲಿಸಿದರೆ: ನಿಮ್ಮ ಹೊಸ ಮನೆಯೂ ಹಳೆಯ ಗ್ಯಾಸ್ ಏಜೆನ್ಸಿಯ ಸೇವಾ ವ್ಯಾಪ್ತಿಯಲ್ಲೇ ಬಂದರೆ ತುಂಬಾ ಸುಲಭ. ಏಜೆನ್ಸಿಗೆ ಹೋಗಿ ಹೊಸ ವಿಳಾಸದ ಪುರಾವೆ ಕೊಟ್ಟರೆ ಸಾಕು. ಅವರು ನಿಮ್ಮ ವಿಳಾಸವನ್ನು ಅಪ್ ಡೇಟ್ ಮಾಡುತ್ತಾರೆ. ಸಿಲಿಂಡರ್ ವಾಪಸ್ ಕೊಡಬೇಕಿಲ್ಲ, ಹೊಸ ವೋಚರ್ ಬೇಕಿಲ್ಲ. ಮುಂದಿನ ಸಿಲಿಂಡರ್ ಹೊಸ ಮನೆಗೇ ಬರುತ್ತದೆ.

  • ಬೇರೆ ಏರಿಯಾಗೆ ಹೋದರೆ: ಹೊಸ ಮನೆ ಬೇರೆ ಡಿಸ್ಟ್ರಿಬ್ಯೂಟರ್ ವ್ಯಾಪ್ತಿಯಲ್ಲಿದ್ದರೆ ಟ್ರಾನ್ಸ್ ಫರ್ ಟರ್ಮಿನೇಷನ್ ವೋಚರ್ ಅಂದರೆ TTV ಬೇಕು. ಮೊದಲು ಹಳೆಯ ಏಜೆನ್ಸಿಗೆ ಹೋಗಿ ವರ್ಗಾವಣೆ ಅರ್ಜಿ ಕೊಡಿ. ಅವರು TTV ಕೊಡುತ್ತಾರೆ. ನಂತರ ಹೊಸ ಏರಿಯಾದ ಏಜೆನ್ಸಿಗೆ TTV, ಗುರುತಿನ ಪುರಾವೆ, ಹೊಸ ವಿಳಾಸದ ಪುರಾವೆ ಕೊಟ್ಟು ಅರ್ಜಿ ಸಲ್ಲಿಸಿ. ಅಲ್ಲಿ ನಿಮ್ಮ ಹೆಸರಿಗೆ ಹೊಸ ಟ್ರಾನ್ಸ್ ಫರ್ ಸಬ್ ಸ್ಕ್ರಿಪ್ಷನ್ ವೋಚರ್ ಅಂದರೆ TSV ನೀಡಲಾಗುತ್ತದೆ.

  • ಬೇರೆ ಊರು ಅಥವಾ ಬೇರೆ ರಾಜ್ಯಕ್ಕೆ ಹೋದರೆ: ಬೇರೆ ಊರಿಗೆ ಹೋಗುವುದಾದರೆ ಹಳೆಯ ಏಜೆನ್ಸಿಗೆ ಸಿಲಿಂಡರ್ ಮತ್ತು ರೆಗ್ಯುಲೇಟರ್ ವಾಪಸ್ ಕೊಡಬೇಕು. ಆಗ ಅವರು ಟರ್ಮಿನೇಷನ್ ವೋಚರ್ ಮತ್ತು ಸೆಕ್ಯುರಿಟಿ ಡೆಪಾಸಿಟ್ ವಾಪಸ್ ಕೊಡುತ್ತಾರೆ. ಹೊಸ ಊರಿಗೆ ಹೋದ ಮೇಲೆ ಅಲ್ಲಿನ ಏಜೆನ್ಸಿಗೆ ಟರ್ಮಿನೇಷನ್ ವೋಚರ್, ಹೊಸ ವಿಳಾಸದ ಪುರಾವೆ, ಗುರುತಿನ ಪುರಾವೆ ಕೊಟ್ಟು ಹೊಸ ಕನೆಕ್ಷನ್ ಮಾಡಿಸಿಕೊಳ್ಳಬೇಕು. ಅಲ್ಲಿ ಮತ್ತೆ ಸೆಕ್ಯುರಿಟಿ ಡೆಪಾಸಿಟ್ ಕಟ್ಟಬೇಕಾಗಬಹುದು.

How to Transfer LPG Gas Connection to New Address Online and Offline
ವಾರಂಟಿ ಮತ್ತು ಗ್ಯಾರಂಟಿ ಅಂದ್ರೆ ಒಂದೇ ಅಂದುಕೊಂಡಿದ್ದೀರಾ? ಇವೆರಡರ ನಡುವೆ ದೊಡ್ಡ ವ್ಯತ್ಯಾಸ ಇದೆ! ಏನು ಗೊತ್ತಾ?

ಆನ್ ಲೈನ್ ನಲ್ಲೂ ಮಾಡಬಹುದು:

ಇಂಡೇನ್, ಭಾರತ್ ಗ್ಯಾಸ್, HP ಗ್ಯಾಸ್ ಮೂರೂ ಕಂಪನಿಗಳಲ್ಲಿ ಆನ್ ಲೈನ್ ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಬಹುದು. IndianOil ONE ಆ್ಯಪ್, myhpgas.in, my.ebharatgas.com ನಲ್ಲಿ ಲಾಗಿನ್ ಮಾಡಿ Transfer Connection ಅಥವಾ Change Distributor ಆಯ್ಕೆ ಮಾಡಿ, ದಾಖಲೆಗಳನ್ನು ಅಪ್ ಲೋಡ್ ಮಾಡಿ. ಆದರೆ TTV ಮತ್ತು ಸಿಲಿಂಡರ್ ವಾಪಸ್ ಕೊಡಲು ಒಮ್ಮೆ ಏಜೆನ್ಸಿಗೆ ಹೋಗಬೇಕಾಗಬಹುದು. ಸಾಮಾನ್ಯವಾಗಿ 7 ರಿಂದ 15 ದಿನಗಳಲ್ಲಿ ವರ್ಗಾವಣೆ ಪೂರ್ಣವಾಗುತ್ತದೆ.

ಬೇಕಾದ ದಾಖಲೆಗಳು:

  • ಗುರುತಿನ ಪುರಾವೆ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್ ಪೋರ್ಟ್ ನಲ್ಲಿ ಯಾವುದಾದರೂ ಒಂದು.

  • ಹೊಸ ವಿಳಾಸದ ಪುರಾವೆ: ಬಾಡಿಗೆ ಒಪ್ಪಂದ, ವಿದ್ಯುತ್ ಬಿಲ್, ನೀರಿನ ಬಿಲ್, ಆಧಾರ್ ಕಾರ್ಡ್ ನಲ್ಲಿ ಯಾವುದಾದರೂ ಒಂದು.

  • ಹಳೆಯ ಕನೆಕ್ಷನ್ ದಾಖಲೆಗಳು: ಗ್ಯಾಸ್ ಪುಸ್ತಕ ಅಥವಾ DGCC ಬ್ಲೂ ಬುಕ್, ಒರಿಜಿನಲ್ ಸಬ್ ಸ್ಕ್ರಿಪ್ಷನ್ ವೋಚರ್.

  • ಇತರೆ: 2 ರಿಂದ 4 ಪಾಸ್ ಪೋರ್ಟ್ ಸೈಸ್ ಫೋಟೋ, ಬ್ಯಾಂಕ್ ಪಾಸ್ ಬುಕ್ ಪ್ರತಿ, ವರ್ಗಾವಣೆ ಕೋರಿ ಬರೆದ ಪತ್ರ. ಆ ಪತ್ರದಲ್ಲಿ ನಿಮ್ಮ ಕಸ್ಟಮರ್ ನಂಬರ್, ಹಳೆಯ ವಿಳಾಸ, ಹೊಸ ಏಜೆನ್ಸಿ ವಿಳಾಸ ಇರಬೇಕು.

How to Transfer LPG Gas Connection to New Address Online and Offline
ಮನೆಗೆ ಕಳಿಸೋ ಹಣ ನಿಜವಾಗಿಯೂ ಎಲ್ಲಿಗೆ ಹೋಗ್ತಿದೆ? ಹೆತ್ತವರಿಗೆ ಹಣ ಕಳುಹಿಸೋ ಜೊತೆಗೆ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ!

ನೆನಪಿನಲ್ಲಿಡಬೇಕಾದ ವಿಷಯಗಳು:

ಏತನ್ಮಧ್ಯೆ, ವರ್ಗಾವಣೆ ಅರ್ಜಿಯನ್ನು ಕನೆಕ್ಷನ್ ಯಾರ ಹೆಸರಿನಲ್ಲಿದೆಯೋ ಅವರೇ ಸಲ್ಲಿಸಬೇಕು. ಹಳೆಯ ಬಾಕಿ ಇದ್ದರೆ ಮೊದಲು ಕ್ಲಿಯರ್ ಮಾಡಬೇಕು. TTV ಮತ್ತು ರಸೀದಿಗಳನ್ನು ಹೊಸ ಕನೆಕ್ಷನ್ ಶುರುವಾಗುವವರೆಗೆ ಜೋಪಾನವಾಗಿ ಇಡಿ. ಮನೆ ಬದಲಾಯಿಸುವ 2 ವಾರ ಮೊದಲೇ ಪ್ರಕ್ರಿಯೆ ಶುರು ಮಾಡಿದರೆ ಹೊಸ ಮನೆಯಲ್ಲಿ ಗ್ಯಾಸ್ ಗೆ ಕಾಯಬೇಕಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X