ರಾಜ್ಯ ಬಜೆಟ್

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ, ಜನಬೆಂಬಲ ವ್ಯಕ್ತ

Nagaraja AB
ಬೆಂಗಳೂರು: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ  ಸರ್ಕಾರಿ ಪ್ರಾಥಮಿಕ  ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ   ಇಂಗ್ಲೀಷ್ ಮಾಧ್ಯಮ ಆರಂಭಿಸುವ ಪ್ರಸ್ತಾವಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ.
ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಆಗದ ಪೋಷಕರ  ಹಲವು ದಿನಗಳ ಬೇಡಿಕೆ ಇದಾಗಿದ್ದು,  ಪ್ರಾಯೋಗಿಕವಾಗಿ ರಾಜ್ಯಾದ್ಯಂತ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ  ಆರಂಭಿಸುವುದನ್ನು ಪೋಷಕರು ಸ್ವಾಗತಿಸಿದ್ದಾರೆ.
ಹಲವು ವರ್ಷಗಳ  ಮನವಿಗೆ ಅಂತಿಮವಾಗಿ ಸರ್ಕಾರ ಸ್ಪಂದಿಸಿದೆ . ಇದು ಕೇವಲ ಭರವಸೆಯಾಗಿರದೆ ಅನುಷ್ಠಾನಕ್ಕೆ ಬರಬೇಕು ಎಂದು ಪೋಷಕರ ಸಂಘದ ಅಧ್ಯಕ್ಷ ಮುಳ್ಳಹಳ್ಳಿ ಸೂರಿ ಹೇಳುತ್ತಾರೆ.
ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ಕೊಡಿಸಲು ಬಯಸುತ್ತದೆ.  ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಶಿಕ್ಷಣ ಅತ್ಯವಶ್ಯಕವಾಗಿದೆ . ಇಲ್ಲದಿದ್ದರೆ ಇಂತಹ ಸಣ್ಣ ಪುಟ್ಟ ಕೆಲಸ ಮಾಡಿ ಬದುಕಬೇಕಾಗುತ್ತದೆ ಎಂದು  ಗಾರ್ಮೆಂಟ್ಸ್  ಉದ್ಯೋಗಿಯೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಕರ ಕೊರೆತೆ ಹೆಚ್ಚಾಗಿರುವಾಗ  ಎಲ್ಲಿಂದ ಶಿಕ್ಷಕರನ್ನು ಕರೆತರುತ್ತಾರೆ ಎಂದ ಶಿಕ್ಷಣ ತಜ್ಞ ಡಾ. ವಿ. ಪಿ. ನಿರಂಜನ್ ಆರಾದ್ಯ ಸರ್ಕಾರದ ನಿಲುವನ್ನು  ಪ್ರಶ್ನಿಸುತ್ತಾರೆ.
SCROLL FOR NEXT