ಬೆಂಗಳೂರು: ರೈತರ ಸಾಲ ಮನ್ನಾದಂತಹ ದೊಡ್ಡ ಸವಾಲನ್ನು ಸ್ವೀಕರಿಸಿದ ಬಳಿಕವೂ ಉಳಿತಾಯದ ಬಜೆಟ್ ಮಂಡಿಸಲಾಗಿದೆ. ಇದಕ್ಕೆ ಬಿಜೆಪಿಯವರು ನನಗೆ ಕ್ರೆಡಿಟ್ ಕೊಡಬೇಕು ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಪಕ್ಕದ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ಕರ್ನಾಟಕದಲ್ಲಿ ತೆರಿಗೆ, ಇಂಧನದರಗಳು ಕಡಿಮೆ ಇದೆ, ಕೇಂದ್ರ ಸರ್ಕಾರ ಇಂಧನ ದರವನ್ನು ಶೇ.230 ರಷ್ಟು ಏರಿಸುತ್ತಿದೆ, ಹೀಗಿರುವಾಗ ನನ್ನ ಬಜೆಟ್ ನಲ್ಲಿ ಇಂಧನ ದರ ಏರಿಕೆಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿಯವರ ಆಧಾರರಹಿತ ಆರೋಪಗಳು ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿವೆ, ಬಿಜೆಪಿಯವರ ಬೆಂಕಿ ಹಚ್ಚುವ ಪ್ರವೃತ್ತಿಗೆ ಅವಕಾಶ ನೀಡದಂತೆ ಕರಾವಳಿ ಜನರಲ್ಲೂ ಮನವಿ ಮಾಡಿಕೊಳ್ಳುತ್ತೇನೆ, ಸಮ್ಮಿಶ್ರ ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗಾಗಿ ಇದೆ ಎಂದು ಹೇಳಿದ್ದಾರೆ.
ನಾವು ಪ್ರಿಂಟಿಂಗ್ ಮೆಷಿನ್ ಇಟ್ಟಿಲ್ಲವೆಂದು ವಿಧಾನ ಪರಿಷತ್‌ನಲ್ಲಿ ಯಡಿಯೂರಪ್ಪ ಹೇಳಿದಂತೆ ನಾವು ಹೇಳಿಲ್ಲ ಸಿಎಂ ಕಟುಕಿದರು.