ರಾಜ್ಯ ಬಜೆಟ್

ಬೆಂಗಳೂರಿನ ಮಾಲಿನ್ಯ ಮತ್ತು ಸಂಚಾರದಟ್ಟಣೆ ನಿಯಂತ್ರಿಸಲು ಬಜೆಟ್ ನಲ್ಲಿ ಪ್ರಸ್ತಾವನೆ

Sumana Upadhyaya

ಬೆಂಗಳೂರು: ಮೆಟ್ರೊಪಾಲಿಟನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರಿನ ಜನತೆ ಮಾಲಿನ್ಯ ಮತ್ತು ವಾಹನದಟ್ಟಣೆಯಿಂದ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿರುವುದು ಗೊತ್ತೇ ಇದೆ. ಕೊನೆಗೂ ಈ ಸಮಸ್ಯೆಗೆ ಬಜೆಟ್ ನಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಾಡಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ 15,825 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ನಿಗಮ ಮೂಲಕ ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಗೆ 6 ಅಂತರ ಸಂಪರ್ಕ ಎಲೆವೇಟೆಡ್ ಕಾರಿಡಾರ್ ಗಳ ಸ್ಥಾಪನೆಗೆ ಬಜೆಟ್ ನಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಎಲೆವೇಟೆಡ್ ಕಾರಿಡಾರ್ ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ಬೆಂಗಳೂರು ಮೆಟ್ರೊ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಆಂತರಿಕೆ ಸಾರಿಗೆ ಪ್ರಾಧಿಕಾರ ಮೂಲಕ ಮೂಲಕ ವಿಸ್ತಾರವಾದ ಕಾರ್ಯ ಯೋಜನೆಯನ್ನು ತಯಾರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಅದರ ಮುಂದಾಳತ್ವ ವಹಿಸಲು ಮುಂದಾಗಿದ್ದಾರೆ, ಇದು ಬಿಎಂಆರ್ ಸಿಎಲ್, ಬಿಎಂಟಿಸಿ, ಬಿಡಿಎ, ಬಿಬಿಎಂಪಿ ಹಾಗೂ ಇತರ ಸಂಸ್ಥೆಗಳ ಜೊತೆ ಸೇರಿ ನಗರದಲ್ಲಿ ಸಂಚಾರದಟ್ಟಣೆ ರಹಿತ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಿದೆ.

65 ಕಿಲೋ ಮೀಟರ್ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು 11,950 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಈ ಯೋಜನೆಯನ್ನು ಸರ್ಕಾರ ವಿಶೇಷ ಉದ್ದೇಶ ವಾಹನದಡಿ ಕೈಗೊಳ್ಳಲಿದ್ದು ಅದು ಕಾರ್ಯನಿರ್ವಹಣೆ ಹಂತದಲ್ಲಿದೆ.

ಬಜೆಟ್ ನಲ್ಲಿ 80 ವಿದ್ಯುತ್ ಬಸ್ಸುಗಳನ್ನು ಖರೀದಿಸಲು ಪ್ರಸ್ತಾವನೆ ಮುಂದಿಟ್ಟಿದ್ದು ಜನರು ಹೆಚ್ಚೆಚ್ಚು ವಿದ್ಯುತ್ ಚಾಲಿತ ಕಾರುಗಳನ್ನು ಬಳಸಲು ಸರ್ಕಾರ ಉತ್ತೇಜನ ನೀಡಲಿದೆ. 4 ಕೋಟಿ ರೂಪಾಯಿಗಳಲ್ಲಿ 100 ವಿದ್ಯುತ್ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಕೂಡ ಮುಂದಾಗಿದೆ.

ಬೆಂಗಳೂರಿನ ಬೆಳ್ಳಂದೂರು ಕೆರೆಯ ಶುದ್ಧೀಕರಣಕ್ಕೆ 50 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.

SCROLL FOR NEXT