ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಳೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು ನಾಳಿನ ಬಜೆಟ್ ನಲ್ಲಿ ರೈಲ್ವೆಯಲ್ಲಿ ಸುರಕ್ಷತೆ, ಮೂಲಭೂತ ಸೌಕರ್ಯ ಮತ್ತು ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ.
ನಾಳಿನ ಬಜೆಟ್ ನಲ್ಲಿ ಹೊಸ ರೈಲುಗಳ ಶುಲ್ಕ ಹೆಚ್ಚಳ ಕುರಿತಂತೆ ಯಾವುದೇ ಪ್ರಕಟಣೆ ಸಾಧ್ಯವಿಲ್ಲ. ಕಳೆದ ಮೂರು ವರ್ಷಗಳಲ್ಲಿ ಎಲ್ಲಾ ಪ್ರಮುಖ ಉಪಕ್ರಮಗಳು 2018-19ರ ಬಜೆಟ್ ನಲ್ಲಿ ಹೊರಬೀಳಲಿದೆ.
ರೈಲ್ವೆಯ ಆರ್ಥಿಕ ಸ್ಥಿತಿಯನ್ನು ಅದರ ಕಾರ್ಯಾಚರಣಾ ಅನುಪಾತ ನಿರ್ಧರಿಸುತ್ತದೆ. ಇದು ರುಪಾಯಿ ಗಳಿಸಲು ಎಷ್ಟು ಹಣ ಖರ್ಚು ಮಾಡುತ್ತದೆ ಎಂಬುದನ್ನು ಸೂಚಿಸುತ್ತದೆ. 100 ಪೈಸೆ ಗಳಿಸಲು 90 ಪೈಸೆಯಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ.
ಸಂಪೂರ್ಣ ರೈಲು ಮಾರ್ಗವನ್ನು ವಿದ್ಯುದ್ಧೀಕರಣಗೊಳಿಸಿ ನಂತರ ಕ್ರಮೇಣವಾಗಿ ಡಿಸೇಲ್ ಲೋಕೋ ರೈಲುಗಳನ್ನು ನಿಲ್ಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಈ ಹಿನ್ನಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯುತ್ ಲೋಕೋ ರೈಲುಗಳನ್ನು ತಯಾರಿಸುವ ಕುರಿತು ನಾಳಿನ ಬಜೆಟ್ ನಲ್ಲಿ ಘೋಷಣೆಯಾಗಲಿದೆ.
2017ರ ಡಿಸೆಂಬರ್ ವರೆಗೆ ಪ್ರಯಾಣಿಕರ ಬುಕಿಂಗ್ ನಲ್ಲಿ ಶೇಕಡಾ 1.4ರಷ್ಟು ಮತ್ತು ಸರಕುಗಳ ಲೋಡ್ ನಲ್ಲಿ ಶೇಕಡಾ 6.9ರಷ್ಚು ಹೆಚ್ಚಳವಾಗಿದೆ.
ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಸಿಗ್ನಲ್ ಗಳ ಆಟೋಮೇಷನ್, ಹಳೆಯ ಹಳಿಗಳು ಮತ್ತು ಸ್ವತ್ತುಗಳನ್ನು ಬದಲಿಸುವಂತಹ ಮೂಲಸೌಕರ್ಯಗಳಿಗೆ ಒಟ್ಟಾರೆ 95 ಸಾವಿರ ಕೋಟಿ ರುಪಾಯಿ ಬಜೆಟ್ ನಲ್ಲಿ ಘೋಷಿಸಲಾಗುತ್ತದೆ. ನಾಳಿನ ರೈಲ್ವೆ ಬಜೆಟ್ 1.31 ಲಕ್ಷ ಕೋಟಿಯಿಂದ 1.46 ಲಕ್ಷ ಕೋಟಿ ರುಪಾಯಿಗೆ ಹೆಚ್ಚಳವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics