ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2018: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

Srinivas Rao BV
ಪ್ರತಿ ಬಜೆಟ್ ನಲ್ಲಿ ಯಾವ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ ಯಾವುದರ ಬೆಲೆ ಇಳಿಕೆಯಾಗಿದೆ ಎಂಬುದು ಹೆಚ್ಚು ಜನರ ಗಮನ ಸೆಳೆಯುವ ವಿಷಯ. ಈ ಬಾರಿಯ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಯಥಾವತ್ ಆಗಿ ಉಳಿಸಿಕೊಳ್ಳಲಾಗಿದ್ದು, ಹಲವು ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಔಷಧಿ ಚಪ್ಪಲಿ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. 
ಯಾವುದರ ಬೆಲೆ ಏರಿಕೆಯಾಗಿದೆ, ಯಾವುದರ ಬೆಲೆ ಇಳಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ
ದುಬಾರಿಯಾದ ಉತ್ಪನ್ನಗಳು
ಮೊಬೈಲ್, ಟಿವಿ, ಕಂಪ್ಯೂಟರ್, ಎಸಿ ಹೋಟೆಲ್, ಕಾರು, ದ್ವಿಚಕ್ರ ವಾಹನ, ಬೆಳ್ಳಿ, ಚಿನ್ನ, 
ತರಕಾರಿ, ಹಣ್ಣಿನ ಜ್ಯೂಸ್, ತಂಪು ಕನ್ನಡಕ, ಸುಗಂಧ ದ್ರವ್ಯ (ಪರ್ಫ್ಯೂಮ್), ಟ್ರಕ್, ಬಸ್ ಟೈರ್ ಗಳು, 
ರೇಷ್ಮೆ ಬಟ್ಟೆ, ವಜ್ರ, ಎಲ್ ಸಿಡಿ, ಎಲ್ಇಡಿ ಪ್ಯಾನಲ್, ಸ್ಮಾರ್ಟ್ ವಾಚ್, ಕೈ ಗಡಿಯಾರ, ಸಿಗರೇಟ್, ಕ್ಯಾಂಡಲ್
ಬೆಲೆ ಇಳಿಕೆಯಾದ ಉತ್ಪನ್ನಗಳು 
ಅಬಕಾರಿ ಸುಂಕ ಕಡಿತಗೊಂಡ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ 
ಗೋಡಂಬಿ 
ಸೋಲಾರ್ ಟೆಂಪರ್ಡ್ ಗ್ಲಾಸ್, ಕಚ್ಚಾ ವಸ್ತುಗಳು
ಆರೋಗ್ಯ ಸೇವೆಗಳು 
SCROLL FOR NEXT